ರಾಜ್ಯ

ದೀಪಾವಳಿಗೆ ಊರಿಗೆ ಹೊರಟವರಿಗೆ ಸಿಹಿಸುದ್ದಿ: ಕೆಎಸ್‌ಆರ್‌ಟಿಸಿಯಿಂದ 2,600 ಹೆಚ್ಚುವರಿ ಬಸ್‌ಗಳು!

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದೀಪಾವಳಿ ಹಬ್ಬದ ಪ್ರಯುಕ್ತ 2,600 ಹೆಚ್ಚುವರಿ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಿದೆ.

ನ.8 ರಂದು ನರಕಚತುರ್ದಶಿ, ನ.10 ರಂದು ಬಲಿಪಾಡ್ಯಮಿ ಇದ್ದು, ನ.7 ಮತ್ತು 8 ರಂದು ವಾರಾಂತ್ಯದ ದಿನಗಳಾಗಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ನ.6 ರಿಂದ ನ.8 ರವರೆಗೆ ನಗರದಿಂದ ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಗೆ 2,600 ಹೆಚ್ಚುವರಿ ವಿಶೇಷ ಬಸ್‌‍ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನ.10 ಮತ್ತು ನ. 11 ರಂದು ವಿಶೇಷ ಬಸ್‌‍ಗಳ ಸೇವೆಯನ್ನು ಒದಗಿಸಲಾಗುತ್ತದೆ. ಈ ಬಸ್‌‍ಗಳ ಸೇವೆಯು ಕೆಂಪೇಗೌಡ ಬಸ್‌‍ ನಿಲ್ದಾಣ, ಮೈಸೂರು ರಸ್ತೆ ಬಸ್‌‍ ನಿಲ್ದಾಣ, ಶಾಂತಿನಗರ ಟಿಟಿಎಂಸಿ ನಿಲ್ದಾಣಗಳಿಂದ ಒದಗಿಸಲಾಗುತ್ತದೆ. ಮುಂಗಡ ಕಾಯ್ದಿರಿಸಿದ ಹೆಚ್ಚುವರಿ ವಾಹನಗಳನ್ನು ಬಿಎಂಟಿಸಿಯ ಶಾಂತಿನಗರ, ವಿಜಯನಗರ, ಯಶವಂತಪುರ ಟಿಟಿಎಂಸಿಗಳಲ್ಲಿ ಹಾಗೂ ಮಲ್ಲೇಶ್ವರಂ 18ನೇ ಕ್ರಾಸ್‌‍ನ ಬಸ್‌‍ ನಿಲ್ದಾಣ, ಬಸವೇಶ್ವರನಗರ ಬಸ್‌‍ ನಿಲ್ದಾಣ, ಎಲೆಕ್ಟ್ರಾನಿಕ್‌ಸಿಟಿ, ಅತ್ತಿಬೆಲೆ, ಟಿನ್‌ ಫ್ಯಾಕ್ಟರಿ ಮೊದಲಾದ ಸ್ಥಳಗಳಿಂದ ಒದಗಿಸಲಾಗುವುದು.

ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಉಡುಪಿ, ಕುಂದಾಪುರ, ಪುತ್ತೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಗೋಕರ್ಣ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ, ವಿಜಯವಾಡ, ಹೈದರಾಬಾದ್‌ಗಳಿಗೆ ಬಸ್‌‍ ಸೇವೆ ಇರಲಿದೆ. ಮೈಸೂರು ರಸ್ತೆ ಬಸ್‌‍ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಕೇರಿ ಮಾರ್ಗದ ಕಡೆ ಬಸ್‌‍ ಸೇವೆ ಒದಗಿಸಲಾಗುವುದು.

ಆಂದೋಲನ ಡೆಸ್ಕ್

Recent Posts

‘ಹೆಲಿಕಾಪ್ಟರ್‌ ಕಳಿಸುವೆ, ಬನ್ನಿ’ ಎಂದ ಡಿಕೆಶಿ; ‘ಬೇಡ, ನಾನೇ ಬರುತ್ತೇನೆ’ ಎಂದ ಕಾಗೋಡು ತಿಮ್ಮಪ್ಪ!

ಶಿವಮೊಗ್ಗ: ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಡಿ.ಕೆ. ಶಿವಕುಮಾರ್‌ ವಿಡಿಯೋ ಕರೆ…

4 mins ago

ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಡಿಕೆಶಿ: ಹೆಚ್ಚುವರಿ ಹಣ ರೈತರಿಗೆ!

ಬೆಂಗಳೂರು: ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ, ಸರ್ಕಾರದ ನಿರ್ಧಾರವನ್ನು ಡಿ.ಕೆ. ಶಿವಕುಮಾರ್‌…

2 hours ago

ಓದುಗರ ಪತ್ರ: ಇಂತಹವರನ್ನು ಸರ್ಕಾರ ಗೌರವಿಸಬೇಕು

ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು…

6 hours ago

ಓದುಗರ ಪತ್ರ: ಸುಧಾರಿತ ಸೈಬರ್ ಭದ್ರತೆ ಅಳವಡಿಸಿ

ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ.…

6 hours ago

ಓದುಗರ ಪತ್ರ: ಮನದ ಭಾಷೆಯಾಗಲಿ ಕನ್ನಡ

ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು…

6 hours ago

‘ಡಾಕ್ಟರ್ ಸಾಹೇಬ್’ ರೂಪುಗೊಂಡ ರೀತಿ

“ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು" ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಎಂಬ ಲೋಹಿಯಾರ ಸಮಗ್ರ ಜೀವನ ಚರಿತ್ರೆ…

6 hours ago