ರಾಜ್ಯ

ಇಂಧನ ವ್ಯತ್ಯಯ ಆತಂಕ ; ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಏರಿಕೆ

ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ (ಇವಿ) ಕ್ಷೇತ್ರದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ. ದಾಖಲೆ ಪ್ರಮಾಣದಲ್ಲಿ ಇವಿ ವಾಹನಗಳ ಮಾರಾಟವಾಗಿದ್ದು, ಮಾರುಕಟ್ಟೆ ಹೊಸ ಮೈಲಿಗಲ್ಲು ತಲುಪಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತಕ್ಕೆ ಪೂರೈಕೆಯಾಗುವ ಇಂಧನದಲ್ಲಿ ವ್ಯತ್ಯಯ ಉಂಟಾಗಿದೆ. ಎಲ್‍ಪಿಜಿ ಕೊರತೆ ಎದುರಾಗಿದ್ದು, ಪ್ರಿಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್-ಡೀಸೆಲ್ ದರಗಳು ಮತ್ತಷ್ಟು ಏರಿಕೆಯಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಜನರು ಇವಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಜನವರಿ-ಫೆಬ್ರವರಿ ತಿಂಗಳೊಂದಿಗೆ ಹೋಲಿಸಿದರೆ, ಮಾರ್ಚ್ ತಿಂಗಳ ಅಂತ್ಯಕ್ಕೆ ಇವಿ ಬೈಕ್, ಆಟೋ ಹಾಗೂ ಕಾರುಗಳ ಮಾರಾಟದಲ್ಲಿ ಶೇಕಡಾ 30ರಷ್ಟು ಏರಿಕೆ ಕಂಡುಬಂದಿದೆ. ಯುದ್ಧ ಮುಂದುವರೆದರೆ ಇಂಧನ ಕೊರತೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಭಯದಿಂದ ಜನರು ಮುಂಚಿತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ ಎಂದು ಶೋರೂಂ ಸಿಬ್ಬಂದಿ ಹೇಳುತ್ತಿದ್ದಾರೆ.

ಇದಲ್ಲದೆ ಏಪ್ರಿಲ್‍ನಿಂದ ಜಾರಿಗೆ ಬಂದಿರುವ ಹೊಸ ರಸ್ತೆ ತೆರಿಗೆ ನೀತಿಯ ಪರಿಣಾಮವೂ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಉತ್ತೇಜನ ನೀಡಿದೆ. ತೆರಿಗೆ ಏರಿಕೆಗೆ ಮುನ್ನವೇ ಹೆಚ್ಚಿನ ಜನರು ವಾಹನ ಖರೀದಿಗೆ ಮುಂದಾಗಿದ್ದಾರು.

ಪ್ರಮುಖವಾಗಿ, ಒಂದೇ ದಿನದಲ್ಲಿ ಸುಮಾರು 13 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ ನಡೆದಿದ್ದು, ಇದರಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಯುದ್ಧದ ಪರಿಣಾಮ ಹಾಗೂ ಹೊಸ ರಸ್ತೆ ತೆರಿಗೆ ನೀತಿಯ ಪ್ರಭಾವದಿಂದ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ದಾಖಲೆ ಮಟ್ಟ ತಲುಪಿದ್ದು, ಶೋರೂಂಗಳು ಮತ್ತು ಇವಿ ಕಂಪನಿಗಳಲ್ಲಿ ಖುಷಿ ಮೂಡಿಸಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹಗಲು ದರೋಡೆಯಲ್ಲದೆ ಇನ್ನೇನು?

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ವಾಣಿಜ್ಯ ಸಿಲಿಂಡರ್ ಅಭಾವ…

1 hour ago

ಓದುಗರ ಪತ್ರ: ಯುದ್ಧದ ಪರಿಣಾಮದಿಂದ ಜೀವನ ಕಷ್ಟ..ಕಷ್ಟ…

ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ೩೭ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಕಣ್ಣೀರು ತರಿಸುತ್ತಿದೆ. ಎಲ್‌ಪಿಜಿ ಗ್ಯಾಸ್…

1 hour ago

ಓದುಗರ ಪತ್ರ: ಯುದ್ಧದ ಉನ್ಮಾದದಿಂದ ಹೊರಬರಲಿ

ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಶುರುವಾಗಿ ತಿಂಗಳೇ ಕಳೆದರೂ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯುದ್ಧದ ಭೀಕರತೆ ದಿನೇ…

1 hour ago

ಸಾಂಪ್ರದಾಯಿಕ ಸೊಗಡು ಸಾಕ್ಷೀಕರಿಸಿದ ಕೂತಿನಾಡು ಸುಗ್ಗಿ ಉತ್ಸವ

ಲಕ್ಷ್ಮೀಕಾಂತ್ ಕೋಮಾರಪ್ಪ ಗ್ರಾಮದೇವತೆ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆಗಾಗಿ ಪ್ರಾರ್ಥನೆ ಸೋಮವಾರಪೇಟೆ: ಗ್ರಾಮೀಣ ಭಾಗದ ಆಚರಣೆಗಳಲ್ಲಿ…

4 hours ago

ಇಂದು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವ ರಥೋತ್ಸವ

ಅಣ್ಣೂರುಸತೀಶ್ ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು…

4 hours ago

ಕರಿಯಮ್ಮ ದೊಡ್ಡಮ್ಮ ದೇವಿ ಜಾತ್ರೋತ್ಸವಕ್ಕೆ ಭೇರ್ಯ ಸಜ್ಜು

ಭೇರ್ಯ ಮಹೇಶ್ ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ  ಭೇರ್ಯ: ಭೇರ್ಯ ಗ್ರಾಮದ…

4 hours ago