ರಾಜ್ಯ

ನಮ್ಮ ಒಳಜಗಳಗಳಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ: ರೇಣುಕಾಚಾರ್ಯ ಕಿಡಿ

ಬೆಂಗಳೂರು: ನಮ್ಮ ಒಳಜಗಳಗಳಿಂದಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಒಂದು ವೇಳೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಸಹ ಬರಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನ ಎಲ್ಲೆಂದರಲ್ಲಿ ಉಗೀತಿದ್ದಾರೆ. ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕಳೆದ ಮೂರ್ನಾಲ್ಕು ತಿಂಗಳಿನಿಂದ ನಾವು ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಯತ್ನಾಳ್‌ ತಂಡ ಭೇಟಿ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಅಮಿತ್‌ ಶಾ ಭೇಟಿಯಾದ ಫೋಟೋ ಕೊಡಿ ಅಂದರೆ ಇಲ್ಲಾ ತೆಗೀಬೇಡಿ ಎಂದಿದ್ದಾರೆ ಎಂದು ಹೇಳ್ತೀರಿ ಎಂದು ಯತ್ನಾಳ್‌ ಟೀಂ ವಿರುದ್ಧ ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ವಿಜಯೇಂದ್ರರನ್ನು ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ. ಪಕ್ಷ ಕಟ್ಟುವ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ ಎಂದು ವಿಜಯೇಂದ್ರ ಪರ ಬ್ಯಾಟ್‌ ಮಾಡಿದರು.

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

20 mins ago

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

6 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

6 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

6 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

6 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

6 hours ago