ರಾಜ್ಯ

ಅಳಿಯನಿಂದಲೇ ಮಾವನ ಕೊಲೆ : ಕೊಲೆಗೆ ಸಹಕರಿಸಿದ ಪತ್ನಿ, ಅತ್ತೆಯ ಬಂಧನ

ಬೆಂಗಳೂರು : ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ ಮಾಡಿದರೆ, ಶವವನ್ನು ತಾಯಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವನಹಳ್ಳಿ ಮೂಲದ ಬಾಬು (48) ಅಳಿಯನಿಂದಲೇ ಕೊಲೆಯಾದ ಮಾವ.

ಅಳಿಯ ರಾಮಕೃಷ್ಣ ಹಾಗೂ ಬಾಬು ಅವರ ಪತ್ನಿ ಮುನಿರತ್ನ ಮತ್ತು ಪುತ್ರಿಯಿಂದ ಕೃತ್ಯವೆಸಗಲಾಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಲವು ವರ್ಷದಿಂದ ಕಾಡುಗೋಡಿಯಲ್ಲಿ ಈ ಕುಟುಂಬ ವಾಸವಿದೆ. ಗೋದಾಮು ಒಂದರಲ್ಲಿ ಬಾಬು ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಬಾಬು ಪುತ್ರಿ 3 ತಿಂಗಳ ಹಿಂದೆ ರಾಮಕೃಷ್ಣನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಈ ಮದುವೆ ಬಾಬುಗೆ ಇಷ್ಟವಿರಲಿಲ್ಲ.

ಜು. 26ರಂದು ತವರು ಮನೆಗೆ ಮಗಳು ಹಾಗೂ ಅಳಿಯ ರಾಮಕೃಷ್ಣ ಬಂದಿದ್ದಾರೆ. ಆ ಸಂದರ್ಭದಲ್ಲಿ ಮೊದಲೇ ಮಗಳ ಮೇಲೆ ಬೇಸರಗೊಂಡಿದ್ದ ಬಾಬು ಅವರು ಬಾಯಿಗೆ ಬಂದಂತೆ ಬೈದಿದ್ದಾರೆ. ಗಲಾಟೆ ವೇಳೆ ಪತ್ನಿ ಮುನಿರತ್ನ ಅವರ ಕಪಾಳಕ್ಕೂ ಹೊಡೆದಿದ್ದರು. ಇದರಿಂದ ಕೋಪಗೊಂಡ ಅಳಿಯ ರಾಮಕೃಷ್ಣ ಅತ್ತೆಗೆ ಹೊಡಿಯುತ್ತೀರಾ ಎಂದು ಕಪಾಳಮೋಕ್ಷ ಮಾಡಿದ ಏಟಿಗೆ ಸ್ಥಳದಲ್ಲೇ ಬಾಬು ಮೃತಪಟ್ಟಿದ್ದಾರೆ.

ಆಗ ಮೂವರು ಸೇರಿಕೊಂಡು ಮೃತದೇಹವನ್ನು ಏನು ಮಾಡಬೇಕೆಂದು ಯೋಚಿಸಿ ನಂತರ ಸಂಬಂಧಿಕರೊಬ್ಬರ ಆಂಬ್ಯುಲೆನ್ಸ್ ತರಿಸಿಕೊಂಡು ಮುಂಜಾನೆ 3 ಗಂಟೆಗೆ ಬಾಬು ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಕೋಲಾರದ ಬಳಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಬಾಬು ಶವ ಸುಟ್ಟು ಆರೋಪಿಗಳು ಮನೆಗೆ ಹಿಂದಿರುಗಿದ್ದಾರೆ.

ಇದೆಲ್ಲವನ್ನು ನೋಡಿದ್ದ ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರ ಬಳಿ ಹೇಳಿದ್ದಾಳೆ. ಬಾಬು ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು, ಈ ಮೂವರನ್ನು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.

ಆಂದೋಲನ ಡೆಸ್ಕ್

Recent Posts

482 ಎಕರೆ ಅರಣ್ಯ ಭೂಮಿ ಕಬಳಿಕೆ ಯತ್ನ: ಸಿಐಡಿ ತನಿಖೆ ಕೋರಿ ಸಿಎಂಗೆ ಪತ್ರ ಬರೆದ ಈಶ್ವರ್‌ ಖಂಡ್ರೆ

ಬೆಳಗಾವಿ:  532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ…

8 mins ago

ಟಾಕ್ಸಿಕ್‌ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌

ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…

17 mins ago

ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ರಥಯಾತ್ರೆಗೆ ಚಾಲನೆ

ಮೈಸೂರು: ಡ್ರಗ್ಸ್‌ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…

32 mins ago

ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ: ಆಡಳಿತಾರೂಢ ಕಾಂಗ್ರೆಸ್‌ ನಡೆಗೆ ವಿಪಕ್ಷ ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಶಾಸಕ ಕಾಶಪ್ಪನವರ್‌…

2 hours ago

ರಾಜ್ಯದ ಮಹಿಳಾ ನೌಕರರಿಗೆ ಬಿಗ್‌ ಶಾಕ್:‌ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್‌ ಶಾಕ್‌ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.…

2 hours ago

ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಕೊಡಗು: ಶನಿವಾರಸಂತೆಯಲ್ಲಿ ವಿದ್ಯುತ್‌ ವಿತರಣಾ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನಾಳೆ ಕೊಡಗಿನ ಕೆಲ ಪ್ರದೇಶಗಳಲ್ಲಿ…

2 hours ago