ತುಮಕೂರು: ಇತ್ತೀಚಿಗೆ ಗ್ಯಾರಂಟಿಯಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ್ಮಾತಕ ಹೇಳಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ ಅಂತದ್ದೆ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು. ಇಂದು(ಏ.20) ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಳ ಮಹಿಳೆಯರು ಮನೆಯ ಪುರುಷರು ಕುಡುಕರು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಮಾಡಿಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ 2000 ಹಣ ನಿಮಗೆ ಬರುತ್ತಿದೆ. ಆದರೆ ನಿಮ್ಮ ಕುಟುಂಬದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬರುವ ಯಾಜಮಾನರು ಇತ್ತೀಚೆಗೆ 100ಕ್ಕೆ 80ರಿಂದ 90 ಭಾಗ ಕುಡಿಯುವುದಕ್ಕೆ(ಮದ್ಯ ಸೇವನೆ) ಬಳಸುತ್ತಿದ್ದಾರೆ. ಹಿಂದೆ ಸಂಜೆ ಸ್ನೇಹಿತರ ಜೊತೆ ಹೋದ್ರೆ 25 ರೂಪಾಯಿನಲ್ಲಿ ಮುಗಿಸಿಕೊಂಡು ಬರುತ್ತಿದ್ದರು. ಈಗ ಸಣ್ಣ ಬಾಟಲ್ ಗೆ 250, 300 ರೂ. ಕೊಡಬೇಕು. ಅಂದರೆ ತಿಂಗಳಿಗೆ ಐದಾರು ಸಾವಿರ ರೂ. ಆಗುತ್ತದೆ. ಅಂದರೆ ನಿಮ್ಮಿಂದ ವಸೂಲಿ ಮಾಡ್ತಾ ಇದ್ದಾರೆ ಅಂತಾ ನಾನು ಹೇಳ್ತಿಲ್ಲ. ಇದು ಪಿಕ್ ಪಾಕೆಟ್ ಸರಕಾರ, ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…
ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…
ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…
ಕೆ.ಬಿ.ರಮೇಶನಾಯಕ ಮೈಸೂರು: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ನಡೆಸಿದ ದೀರ್ಘಾವಧಿ ಆಡಳಿತವನ್ನು ಹಿಂದಿಕ್ಕಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು…
ಹೇಮಂತ್ ಕುಮಾರ್ ಮಂಡ್ಯ: ಈ ಸರ್ಕಾರಿ ಶಾಲೆಗೆ ೧೩೭ ವರ್ಷ... ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ೪೧... ಒಂದು ಕಾಲದಲ್ಲಿ ೫೦೦ಕ್ಕೂ…
ಮಂಜು ಕೋಟೆ ಕೋಟೆ ರಾಜಕೀಯದಲ್ಲಿ ಹೊಸ ಬದಲಾವಣೆ; ಜಾ.ದಳಕ್ಕೆ ಶಾಕ್ ನೀಡಿದ ಮುಖಂಡರು ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು…