Categories: ರಾಜ್ಯ

ಬಿಪಿಎಲ್‌ ಅರ್ಹರಿಗೆ ತಪ್ಪಲ್ಲ; ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು: ರಾಜ್ಯದಾದ್ಯಂತ ಬಿಪಿಎಲ್‌ ಕಾರ್ಡ್‌ ಬಗ್ಗೆ ಹರಡುತ್ತಿರುವ ಊಹಾಪೋಹಗಳ ಕುರಿತು ಸಿಎಂ ಸಿದ್ದರಾಮಯ್ಯ ಅರ್ಹರಿಗೆ ಬಿಪಿಎಲ್‌ ರದ್ದಾಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೊ ಭವನದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯ ಕಾರ್ಯಕ್ರಮಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ʼಅನರ್ಹರು ಒಂದಿಬ್ಬರು ಸೇರಿಕೊಂಡರು ಪರವಾಗಿಲ್ಲ ಅರ್ಹರಿಗೆ ಕಾರ್ಡ್‌ ತಪ್ಪಬಾರದುʼ ಎಂದು ಹೇಳಿದರು.

ʼಬಿಪಿಎಲ್‌ ಎಪಿಎಲ್‌ ಅಂದರೇನು? ಬಡತನಗಿಂತ ಮೇಲಿರುವವರು, ಕೆಳಗಿರುವವರು ಎಂದರ್ಥʼ. ಶ್ರೀಮಂತರು, ಸರ್ಕಾರಿ ನೌಕರರು ಬಿಪಿಎಲ್‌ಗೆ ಅರ್ಹರಲ್ಲ ಅವರಿಗೆ ಎಪಿಎಲ್‌ ಕೊಡಿ, ಅದಕ್ಕೂ ಕೆಲ ಸವಲತ್ತುಗಳಿವೆ. ಎಂದು ಆಹಾರ ಸಚಿವ ಮುನಿಯಪ್ಪ ಅವರಿಗೆ ಸೂಚಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ʼಉಳುವವನೇ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ‌ ಇನ್ನಿತರ ಕಾನೂನಗಳನ್ನು ಜಾರಿ ಮಾಡಿ ದೇಶದ ಬೆಳವಣಿಗೆಗೆ ತಂಬಾ ಕಾಣಿಕೆ ನೀಡಿದ್ದಾರೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಬದಲಾವಣೆ ಮಾಡಲು ಸಾಧ್ಯವಿಲ್ಲʼ ಎಂದರು.

ತಮ್ಮ ಭಾಷಣದಲ್ಲಿ ಬಿಪಿಎಲ್‌ ಕಾರ್ಡ್ ಬಗ್ಗೆ ಮಾತನಾಡಿದ ಕೆ.ಎಚ್.‌ ಮುನಿಯಪ್ಪ, ಬಿಜೆಪಿಗೆ ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡುವುದು ಇಷ್ಟವಿಲ್ಲ ಈ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಶೇ 20-25 ರಷ್ಟು ಅರ್ಹರಲ್ಲದವರೂ ಸೇರಿಕೊಂಡಿದ್ದಾರೆ ಅವರನ್ನು ತೆಗೆದು ಎಪಿಎಲ್‌ಗೆ ಹಾಕುತ್ತೇವೆ ಎಂದರು. ‌

ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಬಿಪಿಎಲ್‌ಗೆ ಅರ್ಹರಲ್ಲದವರ ಅಂಕಿ ಅಂಶಗಳನ್ನು ಜನರಿಗೆ ತಿಳಿಸಬೇಕಿದೆ. ಅರ್ಹರಲ್ಲದವರು ಇದರ ಅನುಕೂಲ ಪಡೆಯುತ್ತರುವುದರಿಂದ ಸತ್ಯವಾದ ಮಾಹಿತಿಯನ್ನು ಅಧಿಕಾರಿಗಳ ಮೂಲಕ ಬಹಿರಂಗಪಡಿಸಬೇಕಿದೆ. ಇದರಿಂದ ನಿಜವಾದ ಬಡವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಪಕ್ಷ ವಿಭಜನೆಯಾಗುತ್ತದೆ ಎಂದಾಗಲೂ ಇಂದಿರಾ ಗಾಂಧಿ ದಿಟ್ಟ ನಿಲುವು ತೆಗೆದುಕೊಂಡಿದ್ದರು. ರಾಷ್ಟ್ರೀಯ ಯೋಜನೆಗಳ ವಿಚಾರ ಬಂದಾಗ ಪಕ್ಷದ ಆಗಿನ ನಾಯಕರೇ ಇಂದಿರಾ ಗಾಂದಿಯನ್ನು ವಿರೋಧಿಸುತ್ತಿದ್ದರು. ಈಗ ರಾಹುಲ್‌ ಗಾಂಧಿಯವರು ಮೀಸಲಾತಿ ಪ್ರಮಾಣವನ್ನು ಶೇ. 50ರಷ್ಟು ಹೆಚ್ಚಿಸಲು ತಿರ್ಮಾನ ಮಾಡಿದ್ದಾರೆ ಈಗಲೂ ಕಾಂಗ್ರೆಸ್‌ನ ಕೆಲವರು ಇದನ್ನು ವಿರೋಧಿಸಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಾಲತಿ ಶರ್ಮಾ, ಪ್ಯಾರೇಜಾನ್‌, ಮಮತಾ, ಸುಗಂಧಿ ಗಂಗಾಧರ್‌, ಸೋನು ವೇಣುಗೋಪಾಲ್‌ ಅವರಿಗೆ ಇಂದಿರಾ ಗಾಂಧಿ ಸ್ಮಾರಕ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅರ್ಚನ ಎಸ್‌ ಎಸ್

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

5 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

5 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

7 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

7 hours ago