ಬೆಂಗಳೂರು : ರಾಜ್ಯದಲ್ಲಿ ಪ್ರತಿದಿನ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹೆಚ್ಚಾಗಿ ಮಕ್ಕಳು ಸಹ ಈ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ನರಳುತ್ತಿದ್ದಾರೆ. ಕೆಲವು ಜಿಲ್ಲೆಯಲ್ಲಿ ಈ ಡೆಂಗ್ಯೂಗೆ ಮಕ್ಕಳು ಬಲಿಯಾಗಿದ್ದು, ಪೋಷಕರಲ್ಲಿ ಸಾಕಷ್ಟು ಆತಂಕ ಉಂಟು ಮಾಡುತ್ತಿದೆ.
ಇನ್ನು ಮಕ್ಕಳಲ್ಲಿ ಡೆಂಗ್ಯೂ ಕೇಸ್ ಜಾಸ್ತಿಯಾಗುತ್ತಿರುವ ಕಾರಣ ಅಮೆರಿಕಾ, ಥಾಯ್ಲೆಂಡ್ ನಂತೆ ಭಾರತದಲ್ಲಿ ಡೆಂಗ್ಯೂ ವ್ಯಾಕ್ಸೀನ್ ಗಾಗಿ ಹೆಚ್ಚಿನ ಬೇಡಿಕೆ ಶುರುವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹೌದು, ಭಾರತದಲ್ಲಿ ಇಷ್ಟು ದಿನ ಡೆಂಗ್ಯೂ ಗೆ ಯಾವುದೇ ರೀತಿಯ ವ್ಯಾಕ್ಸೀನ್ ಇರಲಿಲ್ಲ. ಆದರೆ ಅಮೆರಿಕಾ ಈ ಡೆಂಗ್ಯೂ ಜ್ವರಕ್ಕಾಗಿ ಎರಡು ವ್ಯಾಕ್ಸೀನ್ ಗಳನ್ನ ಕಂಡು ಹಿಡಿದಿದೆ. Dengvaxia,q denga, ಎಂಬ ವ್ಯಾಕ್ಸೀನ್ ಕಂಡು ಹಿಡಿದಿದ್ದು, ಪರೀಕ್ಷೆಯಲ್ಲಿಯೂ ಕೂಡ ಪಾಸ್ ಆಗಿದೆ. ಅಲ್ಲದೆ ಥಾಯ್ಲೆಂಡ್‌ನಲ್ಲಿ ಬೆಸ್ಟ್ ರಿಸಲ್ಟ್ ಸಹ ಸಿಕ್ಕಿದೆ. ಥಾಯ್ಲೆಂಡ್‌ನಲ್ಲಿ ಡೆಂಗ್ಯೂ ಸ್ಫೋಟಗೊಂಡ ಸಂದರ್ಭದಲ್ಲಿ ಇದೇ ವ್ಯಾಕ್ಸೀನ್ ಗಳನ್ನ ಬಳಕೆ ಮಾಡಿ ಪ್ರಕರಣಗಳನ್ನ ಹತೋಟಿಗೆ ತರಲಾಗಿದೆ. ಈಗಾಗಿಯೇ ನಮ್ಮಲ್ಲಿ ಈ ವ್ಯಾಕ್ಸೀನ್ ಗೆ ವೈದ್ಯರಿಂದಲೇ ಬೇಡಿಕೆ ಶುರುವಾಗುತ್ತಿದೆ.
ಈ ಡೆಂಗ್ಯೂ ಲಸಿಕೆಯನ್ನು ಆರು ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬಹುದು. ಅದರಲ್ಲೂ ಈ ವ್ಯಾಕ್ಸೀನ್ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಮೇಲೆ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಡುತ್ತಿರುವುದರಿಂದ ಇದೇ ಕಾರಣಕ್ಕೆ ಈ ವ್ಯಾಕ್ಸೀನ್ ಗೆ ವೈದ್ಯರಿಂದಲೇ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಭಾರತದಲ್ಲಿ ಸೀರಮ್ ಇನ್ಸಿಟಿಟ್ಯೂಟ್ ಒಂದು ಸುತ್ತಿನ ಟ್ರಯಲ್ ಮಾಡಿದೆಯಂತೆ. ಒಂದು ವೇಳೆ ಲೈಸೆನ್ಸ್ ಕ್ಲಿಯರ್ ಆದ್ರೆ ಈ ಡೆಂಗ್ಯೂ ಲಸಿಕೆ ಭಾರತಕ್ಕೆ ಬರುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ವ್ಯಾಕ್ಸೀನ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ…
ಚಾಮರಾಜನಗರ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಸೋಷಿಯಲ್ ಮೀಡಿಯಾದಲ್ಲಿ ಪೆಟ್ರೋಲ್, ಡೀಸೆಲ್…
ನಂಜನಗೂಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ…
ವಾಷಿಂಗ್ಟನ್: ಇರಾನ್ ಜೊತೆ ಕದನ ವಿರಾಮ್ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. NATO ಮಿತ್ರರಾಷ್ಟ್ರಗಳನ್ನು…
ದಣಿವರಿಯದೆ ದುಡಿದಿರಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲಿ ಉಸಿರಾಗಿತ್ತು ನಿಮಗೆ ಸಮಾಜಸೇವೆ! ಧಿಕ್ಕರಿಸಿದಿರಿ ಮೌಢ್ಯಕಂದಾಚಾರಗಳ ಪ್ರೀತಿಸಿದಿರಿ ಎಲ್ಲರನೂ ಸಮಭಾವದಲಿ! ಮನಮಾಗಿದ ನಗುಮೊಗದ…
ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ…