ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಬ್ಯಾಕ್ಟೀರಿಯಾದಿಂದ ಮೃತಪಟ್ಟ ಕೃಷ್ಣಮೃಗಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕಳೆದ ಕೆಲ ದಿನಗಳಿಂದ ಕೃಷ್ಣಮೃಗಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಪ್ರಾಣಿಪ್ರಿಯರಿಗೆ ಆತಂಕ ಸೃಷ್ಟಿ ಮಾಡಿದೆ.
ಇದನ್ನು ಓದಿ: ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಸಾವು
ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವೈದ್ಯರು ಉಳಿದಿರುವ 7 ಕೃಷ್ಣಮೃಗಗಳಿಗೆ ಆಂಟಿ ಬಯೋಟಿಕ್ ಚಿಕಿತ್ಸೆ ನೀಡಿ ತೀವ್ರ ನಿಗಾ ಇಟ್ಟಿದ್ದಾರೆ.
ಇನ್ನು ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಸಿಬ್ಬಂದಿಗಳು ಮೃಗಾಲಯದ ಒಳಗಡೆ ಔಷಧಿ ಸಿಂಪಡಣೆ ಮಾಡಿ ಬ್ಯಾಕ್ಟೀರಿಯಾ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ.
ಗಳಲೆ ರೋಗ ಇತರೆ ಸಾಕು ಪ್ರಾಣಿಗಳಿಗೂ ಹರಡುವ ಭೀತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲಾಗಿದೆ.
ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…
ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…
ಮಹಾದೇಶ್ ಎಂ ಗೌಡ ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ ಹನೂರು: ಪಟ್ಟಣದ…
ಸಿರಿ ಮೈಸೂರು ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು…
ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ…
ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ…