ಬೆಂಗಳೂರು: ಬಸವನಗೌಡ ಪಾಟೀಲ್ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ವಿರುದ್ದ ಶೀಘ್ರದಲ್ಲೇ ಹೈಕಮಾಂಡ್ ಗೆ ದೂರು ನೀಡುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಈ ಹಿಂದೆ ಪಕ್ಷ ಉಚ್ಚಾಟನೆ ಮಾಡಿತ್ತು ಆಗ ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿ ಬಿಜೆಪಿಗೆ ಬಂದಿದ್ದೀರಿ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಅಂತ ಪ್ರಶ್ನೆ ಮಾಡಿದ್ದಾರೆ.
ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿ, ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ ಯಡಿಯೂರಪ್ಪ ಪಕ್ಷ ಕಟ್ತಿದ್ದಾಗ ಯತ್ನಾಳದ ಕಣ್ ಬಿಟ್ಟಿರಲಿಲ್ಲ ಎಚ್ಚರಿಕೆಯಿಂದ ಯತ್ನಾಳ್ ಮಾತನಾಡಬೇಕು. ಹೀಗೆಲ್ಲ ಮಾತಾಡೋದನ್ನ ಇನ್ನುಮುಂದೆ ಸಹಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡಿದ್ದು ಹೈಕಮಾಂಡ್ ವಿಜಯೇಂದ್ರ ಅವರಿಗೆ ಬೈದರೆ ಹೈಕಮಾಂಡ್ ಗೆ ಬೈದಂತೆ. ನೀವು ಏನೇ ಮಾಡಿದ್ರೂ ವಿಜಯೇಂದ್ರ ವರ್ಚಸ್ಸು ಕುಗ್ಗಲ್ಲ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ?
ಯತ್ನಾಳ್ ಕಾಂಗ್ರೆಸ್ ಏಜೆಂಟ್ ನಂತೆ ವರ್ತನೆ ಮಾಡ್ತಿದ್ದಾರೆ, ರಾಜ್ಯದ ಕೆಲವರು ಮಗು ಚಿವುಟಿ ತೊಟ್ಟಿಲು ತೂಗ್ತಿದ್ದಾರೆ ಇಲ್ಲಿ ಯತ್ನಾಳ್ ನ ಎತ್ತಿ ಕಟ್ತಿದ್ದಾರೆ ಕೆಲವರು ವಿಜಯೇಂದ್ರರ ವರ್ಚಸ್ಸು ಕುಗ್ಗಿಸಬಹುದು ಅಂತ ಅಂದುಕೊಂಡಿದ್ದಾರೆ. ಬಹಳ ಗೌರವ ಕೊಟ್ಟು ಇದುವರೆಗೂ ನಿನ್ನ ಬಗ್ಗೆ ಇದುವರೆಗೆ ಮಾತಾಡಿದ್ದೇವೆ, ಇನ್ಮುಂದೆ ಸಹಿಸಲ್ಲ ಮುಂದಿನ ಶನಿವಾರ ನಾವು ಸಭೆ ಸೇರುತ್ತೇವೆ ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತೇವೆ .
ಯತ್ನಾಳ್ ದು ಹರಕು ಬಾಯಿ
ಯಡಿಯೂರಪ್ಪ ವಿರುದ್ಧ ಸಂಚು ಮಾಡಿದಾಗಲೆಲ್ಲ ಬಿಜೆಪಿಗೆ ಕಮ್ಮಿ ಸ್ಥಾನ ಬಂದಿದೆ ಎಂದು ಅನಗತ್ಯ ಟೀಕೆ ಮಾಡ್ತಿದ್ದೀರಿ, ಇದನ್ನ ಸಹಿಸಲ್ಲ ಈ ಮನುಷ್ಯನಿಗೆ ಮೂರು ಮುಖವಾಡ ಇದೆ. ಉತ್ತರ ಕರ್ನಾಟಕದ ಹುಲಿ ಅಂತಾರೆ, ಉ.ಕಕ್ಕೆ ಎಷ್ಟು ಅನುದಾನ ಕೊಂಡೊಯ್ದಿರಿ?
ಹಿಂದೂ ಹುಲಿ ಆದೋರು ಟಿಪ್ಪು ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜತೆ ಊಟ ಮಾಡಿದ್ರಿ, ಎಲ್ಲಿ ಹೋಗಿತ್ತು ಆಗ ಹಿಂದೂ ಹುಲಿ?, ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ದು ದ್ವಂದ್ವ ನಿಲುವಿನ ಮುಖವಾಡ. ಎಲ್ರೂ 2ಎ ಗಾಗಿ ಹೋರಾಟ ಮಾಡಿದ್ರೆ, ನಮಗೆ 2ಎ ಮೀಸಲಾತಿ ಬೇಡ ಅಂತಾರೆ . ತಮ್ಮ ಸ್ವಾರ್ಥಕ್ಕೆ ಯತ್ನಾಳ್ ಮೂರು ಮುಖವಾಡ ಹಾಕಿದ್ದಾರೆ, ಈಗ ಅವರ ಮುಖವಾಡ ಕಳಚಿದೆ. ನಿಮ್ಮ ಬೆಂಬಲಕ್ಕೆ ಸಂಸದರು ಇದ್ದಾರೆ ಅಂದ್ರಲ್ಲ, ತಾಕತ್ ಇದ್ರೆ ಅವರ ಹೆಸರು ಹೇಳಿ..
ಯತ್ನಾಳ್ ಗೆ ರೇಣುಕಾಚಾರ್ಯ ಸವಾಲ್
ವಿಜಯೇಂದ್ರ ಬಚ್ಚಾ ಅಲ್ಲ, ಸಮರ್ಥ, ನುರಿತ ರಾಜಕಾರಣಿ. ವಿಜಯೇಂದ್ರ ಗೆ ಜ್ಞಾನ ಇದೆ, ಪಕ್ಷ ಅಧಿಕಾರಕ್ಕೆ ತರುವ ಛಲ ಇದೆ. ಯತ್ನಾಳ್ ಮತ್ತು ತಂಡ ಮುಖವಾಡದಲ್ಲಿ ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ. ಇದನ್ನು ಸಹಿಸಲ್ಲ, ಏನೇ ಇದ್ರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಯತ್ನಾಳ್, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸಿಗೆ ನೋವಾಗಿದೆ. ಕೆಲವರು ಅವರನ್ನು ಬೆಂಬಲಿಸ್ತಿದ್ದಾರೆ. ಆಕಾಶಕ್ಕೆ ಉಗುಳಿದರೆ, ಅದು ಉಗುಳಿದವರ ಮೇಲೆಯೇ ಬೀಳುತ್ತೆ. ವಿಜಯೇಂದ್ರ ಮುಂದುವರೀತಾರೆ, ಅವರ ನೇತೃತ್ವದಲ್ಲಿ ಪಕ್ಷ ಕಟ್ತೇವೆ, ಮತ್ತೆ ಅಧಿಕಾರಕ್ಕೆ ತರುತ್ತೇವೆ. ಯತ್ನಾಳ್, ರಮೇಶ್ ಜಾರಕಿಹೊಳಿ ಹುಚ್ಚು ಹುಚ್ಚಾಗಿ ಮಾತಾಡಿದ್ದಾರೆ. ಅವರಿಬ್ಬರನ್ನ ಮುಲಾಜಿಲ್ಲದೇ ಉಚ್ಛಾಟನೆ ಮಾಡಿ ಅಂತ ಹೈಕಮಾಂಡ್ ಗೆ ಹೇಳ್ತೇವೆ. ಕಾಂಗ್ರೆಸ್ ಒಳ ಕಚ್ಚಾಟ ಮರೆಸಲು ಯತ್ನಾಳ್, ರಮೇಶ್ ವಿಜಯೇಂದ್ರ ವಿರುದ್ಧ ಮಾತಾಡ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು, ಅವರು ಕಾಂಗ್ರೆಸ್ ಏಜೆಂಟರು ಅಂತ ಬಹಿರಂಗ ವಾಗಿ ಹೇಳುತ್ತೇನೆ. ಯಾರು ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದಿದ್ರು ಅವರೆ ಇವತ್ತು ಎತ್ತಕಟ್ಟುತ್ತಿದ್ದಾರೆ. ಯತ್ನಾಳ , ರಮೇಶ್ ಜಾರಕಿಹೊಳಿ ಅವರನ್ನ ಎತ್ತಿ ಕಟ್ಟುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಯತ್ನಾಳ್ ಒಳ್ಳೆಯವರೆ, ಆದ್ರೆ ಪಕ್ಷದ ಕೆಲವರು ಅವರಿಗೆ ಪ್ರಚೋದನೆ ಕೊಡ್ತಿದ್ದಾರೆ. ಹೈಕಮಾಂಡ್ ಗೆ ಎಲ್ಲಾ ವರದಿ ಗೊತ್ತಿದೆ ಸಮಯ ಬಂದಾಗ ಎಲ್ಲವನ್ನು ಬಿಚ್ವಿಡುತ್ತೇವೆ ಎಂದು ಹೇಳಿದ್ದಾರೆ.
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…
ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…
ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…
ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…