ಬೆಂಗಳೂರು : ಬೀದರ್‌ನಲ್ಲಿ ಗಾಳಿ ಪಟ ಹಾರಿಸಲು ಬಳಸಿದ್ದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ನ್ಯಾಯೂರ್ತಿ ವೀರಪ್ಪ ಅವರು ಬೀದರ್ ಉಪವಿಭಾಗಾಧಿಕಾರಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ
ಬೀದರ್ ತಾಲ್ಲೂಕಿನ ಬೊಂಬಳಗಿ ಗ್ರಾಮದ ಸಂಜೀವ ಕುಮಾರ್ (48) ಅವರು ಜ.14ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾ ಕ್ರಾಸ್ ಬಳಿ ಗಾಳಿಪಟಹಾರಿಸಲು ಬಳಸಿದ್ದ ಮಾಂಜಾ ದಾರ ಕತ್ತು ಸೀಳಿದ್ದರಿಂದ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಈ ಬಗ್ಗೆ ಮನ್ನಾ ಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ರಾಜ್ಯಮಟ್ಟದ ಕನ್ನಡ ದಿನ ಪತ್ರಿಕೆ ಹಾಗೂ ರಾಷ್ಟ್ರ ಮಟ್ಟದ ಇಂಗ್ಲಿಷ್ ಇಂಗ್ಲಿಷ್ ದಿನ ಪತ್ರಿಕೆಯಲ್ಲಿ ಗಾಳಿ ಪಟಕ್ಕೆ ಬಳಸುವ ಮಾಂಜಾ ದಾರರಿಂದ ಆಗುವ ಅನಾಹಿತದ ಬಗ್ಗೆ ವರದಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಬೀದರ್ ಉಪವಿಭಾಗಾಧಿಕಾರಿ ಮಹಮದ್ ಶಕೀಲ್, ಬಸವಕಲ್ಯಾಣ ಉಪವಿಭಾಗಾಧಿಕಾರಿ ಪ್ರಕಾಶ್ ಕುದರಿ, ಮನ್ನಾಏಖೇಳ್ಳಿ ಆರಕ್ಷಕ ಉಪ ನಿರೀಕ್ಷಕ ಮಹೇಂದ್ರ ಕುಮಾರ್, ಚಿಟಗುಪ್ಪಾ ವೃತ್ತ ನಿರೀಕ್ಷಕ ಶೀನಿವಾಸ ಅಲ್ಲಾಪುರ, ಹುಮನಾಬಾದ್ ಆರಕ್ಷಕ ಉಪಾಧಿಕ್ಷಕ ಮಾಡೋಳಪ್ಪಾ ಹಾಗೂ ಚಿಟಗುಪ್ಪಾ ತಹಸಿಲ್ದಾರ್ ಮಂಜುನಾಥ ಪಂಚಾಳ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ಆದೇಶಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಗ್ಯಾಸ್ ಸಿಗದೆ ಆಟೋ ಚಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದರೆ, ಜನಪ್ರತಿನಿಧಿಗಳಾದ ಶಾಸಕರು ಮಾತ್ರ ಐಪಿಎಲ್ ಟಿಕೆಟ್‌ಗಳ…
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…
ಬೆಂಗಳೂರು: ಗ್ಯಾಸ್ ಸಿಗದೇ ಆಟೋ ಚಾಲಕರು ಪರದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ…
ದಾವಣಗೆರೆ: ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಜೊತೆಗೆ ಅಭಿವೃದ್ಧಿಗೂ ಪ್ರತಿ ಕ್ಷೇತ್ರಕ್ಕೆ ನೂರು ಕೋಟಿ ರೂ.ಗಳಿಗೆ ಹೆಚ್ಚಿನ ಅನುದಾನವನ್ನು ಸಿದ್ದರಾಮಯ್ಯ ಅವರು…
ಚೆನ್ನೈ: ತಾವು ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ. ಇದರ ಬಗ್ಗೆ ಅನಗತ್ಯವಾಗಿ ಗೊಂದಲಗಳು ಬೇಡ ಎಂದು…
ಟೆಹರಾನ್: ಅಮೇರಿಕಾ ಜೊತೆ ಮಾತುಕತೆ ನಡೆಸಲು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ. ಯುದ್ಧವನ್ನು ರಾಜತಾಂತ್ರಿಕತೆ ಮೂಲಕ ನಿಲ್ಲಿಸಲು ಸಜ್ಜಾಗಿದ್ದ ಅಮೇರಿಕಾಗೆ ಈಗ…