ಬೆಂಗಳೂರು: ಖಾಲಿ ಸೈಟ್‌ಗಳ ನಕಲಿ ದಾಖಲೆ ಸೃಷ್ಠಸಿ ಭೂ ಕಬಳಿಕೆ ಮಾಡುತ್ತಿರುವ ಭೂಗಳ್ಳರು ಧೈರ್ಯ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆಸ್ತಿಯನ್ನೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿ, ಪೊಲೀಸರ ಅತಿಥಿಯಾಗಿದ್ದಾರೆ.
ಹೌದು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿ(ಪೊಲೀಸ್ ವರಿಷ್ಠಾಧಿಕಾರಿ) ಕಚೇರಿಯ ಜಾಗದ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಲು ಮುಂದಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನೇಪಾಳ ರಾಜರ ಹೇಸರಿನಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಜಾಗದಲ್ಲಿ ಸಿವಿಲ್ ಡಿಸ್‌ಪ್ಯೂಟ್ ಕೂಡ ಇದೆ. ಈ ನಡುವೆ ಎಸ್‌ಪಿ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿಕೊಂಡು ಸದ್ದಿಲ್ಲದೇ ಮಾರಾಟ ಮಾಡಲು ಯತ್ನಿಸಿದ್ದಾರೆ.
ಜೂನ್ ೩ ರಂದು ಅನಧಿಕೃತವಾಗಿ ಎಸ್ಪಿ ಕಚೇರಿ ಪ್ರವೇಶಿಸಿದ ಹನೀಫ್ ಕಚೇರಿಯ ಫೋಟೊ ಹಾಗೂ ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಕಳುಹಿಸಿದ್ದಾರೆ. ಈ ವೇಳೆ ಕಚೇರಿಯಲ್ಲಿ ಇದ್ದ ಇನ್ ಸ್ಪೆಕ್ಟರ್ ಸಂತೋಷ ಪ್ರಶ್ನಿಸಿ ಯಾರು ನೀವು? ಹೊರಗೆ ಹೋಗಿ ವಿಡಿಯೋ ಮಾಡಿ ಎಂದಿದ್ದಾರೆ. ಈ ವೇಳೆ ಹನೀಫ್ ಈ ಜಾಗದ ದಾಖಲಾತಿಗಳು ನಮ್ಮ ಬಳಿ ಇವೆ. ಅಸಲಿಗೆ ಈ ಜಾಗ ಮೋಹನ್‌ಶೆಟ್ಟಿ ಹಾಗೂ ರಾಜಶೇಖರ್ ಅವರ ಹೆಸರಿನಲ್ಲಿದೆ. ಈ ಜಾಗದ ಜಿಪಿಎ ನನ್ನ ಹೆಸರಿಗೆ ಇದೆ ಎಂದು ಹೇಳಿದ್ದಾನೆ.
ಇದರಿಂದ ಆತಂಕಕ್ಕೆ ಒಳಗಾದ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಹಿರಿಯ ಅಧಿಕಾರಿಗಳು ಹನೀಫ್ ಸೇರಿದಂತೆ ನಕಲಿ ದಾಖಲೆ ಸೃಷ್ಠಿಸಿದ ರಾಜಶೇಜರ್, ಮೊಹಮದ್ ನದೀಮ್, ಗಣಪತಿ ಹಾಗೂ ಮೋಹನ್ ಶೆಟ್ಟಿ ಎಂಬುವವರ ಮೇಲೆ ದೂರು ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…
ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…
ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ…
ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…
ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ…