ಬೆಂಗಳೂರು: ಬೆಂಗಳೂರಿನ ಬಹುಪಾಲು ಜನರು ಶೀತ, ನೆಗಡಿ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಈಗ ಆರಂಭವಾಗಿರುವ ಚಳಿಗಾಲದ ಶೀತ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಹೆಚ್ಚಿನ ಜನರ ಆನಾರೋಗ್ಯ ಸಮಸ್ಯೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿತ ಪ್ರಮುಖ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟದ್ದಾರೆ.
ಬೆಂಗಳೂರು ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ನೈಟ್ರೋಜನ್ ಆಕ್ಸೈಡ್(NO2) ದುಪ್ಪಟ್ಟು ಹೆಚ್ಚಾಗಿದೆ. ಇದು ಜನರ ಆರೋಗ್ಯದ ಸಮಸ್ಯೆ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಬೆಂಗಳೂರಿನ ಮೆಜೆಸ್ಟಿಕ್ ಅತಿ ಹೆಚ್ಚು ಮಲೀನಗೊಂಡಿರುವ ಪ್ರದೇಶವೆಂದು ʼತಜ್ಞರ ವರದಿಯಿಂದ ಬಹಿರಂಗವಾಗಿದೆ.
ಡಬ್ಲ್ಯೂಟಿಎ ಮಾನದಂಡದ ಪ್ರಕಾರ, ವರ್ಷದ 365 ದಿನಗಳಲ್ಲೂ ಪ್ರತಿ ಘನ ಮೀಟರ್‌ಗೆ ಸರಾಸರಿ 10 ಮೈಕ್ರೋಗ್ರಾಂನಷ್ಟು ನೈಟ್ರೋಜನ್ ಡೈ ಆಕ್ಸೈಡ್ ಇದ್ದರೆ ಗಾಳಿಯ ಗುಣಮಟ್ಟ ಶುದ್ಧವಾಗಿದೆ ಎಂದರ್ಥ. ಆದರೆ ಬೆಂಗಳೂರಿನಲ್ಲಿ 2023ರಲ್ಲಿ 365 ದಿನಗಳ ಪೈಕಿ 295 ದಿನಗಳಲ್ಲಿ ನೈಟ್ರೋಜನ್ ಮಟ್ಟ ಮೀರಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ ನೈಟ್ರೋಜನ್ ಡೈ ಆಕ್ಸೈಡ್ 20ಮೈಕ್ರೋಗ್ರಾಂಗಿಂತ ಹೆಚ್ಚಾಗಿ ಕಂಡುಬಂದಿದೆ. ನಗರದಲ್ಲಿ ಪರೀಕ್ಷಿಸಿದ 13 ಕೇಂದ್ರಗಳ ಪೈಕಿ 8 ಕೇಂದ್ರಗಳಲ್ಲಿ ವಾರ್ಷಿಕ ಸರಾಸರಿ ನೈಟ್ರೋಜನ್ ಮಟ್ಟ 20 ಮೈಕ್ರೋಗ್ರಾಂಗಿಂತಲೂ ಹೆಚ್ಚಿದೆ. ಶಿವಪುರ ಕೇಂದ್ರದಲ್ಲಿ 15 ಮೈಕ್ರೋಗ್ರಾಂಗಳಷ್ಟು ಕಂಡುಬಂದಿದ್ದರೆ, ಉಳಿದ ನಾಲ್ಕು ಕೇಂದ್ರಗಳಲ್ಲಿ 10 ರಿಂದ 13 ಮೈಕ್ರೋಗ್ರಾಂಗಳಷ್ಟು ಇರುವುದಾಗಿ ವರದಿಯಾಗಿದೆ.
ಭಾರತದಲ್ಲಿ ದೆಹಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ಪ್ರದೇಶಗಳಲ್ಲಿ ಮೊದಲ ಸ್ಥಾನ ಹೊಂದಿದ್ದು, ಉಳಿದಂತೆ ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಹಾಗೂ ಚೆನ್ನೈನಲ್ಲಿಯೂ ನೈಟ್ರೋಜನ್ ಡೈ ಆಕ್ಸೈಡ್ ಮಟ್ಟ ಹೆಚ್ಚಾಗಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…
ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…
ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…
ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…
ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು…
ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಎಸ್ಕಾಂಗಳು ವಿದ್ಯುತ್ ಕಡಿತ ಮಾಡುತ್ತಿರುವುದು ಸರಿಯಲ್ಲ.…