ರಾಜ್ಯ

ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಮುಂದಿನ ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದ ಅವರು, ಗ್ರೇಟರ್‌ ಬೆಂಗಳೂರು ಬಿಲ್‌ಗೆ ಸಂಬಂಧಿಸಿದ ವರದಿಯನ್ನು ರಿಜ್ವಾನ್‌ ಅರ್ಷದ್‌ ಸಮಿತಿ ಸ್ಪೀಕರ್‌ಗೆ ನೀಡಿದ್ದಾರೆ. ಈ ಬಿಲ್‌ ಕುರಿತು ಬಿಜೆಪಿ ತೀವ್ರ ವಿರೋಧ ಮಾಡುತ್ತಿದೆ. ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ದಿ ಬೇಕಿಲ್ಲ, ವೋಟ್‌ ಮಾತ್ರ ಬೇಕು ಎಂದು ಕಿಡಿಕಾರಿದರು.

ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ದಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು. ಈಗಿನ ಬೆಂಗಳೂರನ್ನು ಒಬ್ಬ ಮೇಯರ್‌, ಕಮಿಷನರ್‌ ಆಡಳಿತ ಮಾಡಲು ಸಾಧ್ಯವಿಲ್ಲ. ಆದ ಕಾರಣ, ಗ್ರೇಟರ್‌ ಬೆಂಗಳೂರು ಅದರೆ ವಾರ್ಡ್‌ ಜಾಸ್ತಿ ಆಗಬಹುದು ಎಂದು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ಎಸ್‌ಎಸ್ಎಲ್‌ಸಿ ಪರೀಕ್ಷೆ-1ರ ಮೌಲ್ಯಮಾಪನ ಏಪ್ರಿಲ್.8ರಿಂದ ಪ್ರಾರಂಭ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್.8ರಿಂದ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ…

1 hour ago

ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಶಾಸಕರು ಐಪಿಎಲ್‌ ಟಿಕೆಟ್‌ ಕೇಳೋದು ತಪ್ಪು. ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ ಎಂದು ಮಾಜಿ…

1 hour ago

ಇಂದಿನಿಂದ ರಾಜ್ಯದಲ್ಲಿ ಐದು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

2 hours ago

ವಿಧಾನಪರಿಷತ್‌ ಸದಸ್ಯತ್ವಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…

2 hours ago

ಕುಶಾಲನಗರ: ಹಿಟ್‌ ಅಂಡ್‌ ರನ್‌ಗೆ ಯುವಕ ಬಲಿ

ಕುಶಾಲನಗರ: ಹಿಟ್‌ ಅಂಡ್‌ ರನ್‌ಗೆ ಯುವಕ ಬಲಿಯಾಗಿರುವ ಘಟನೆ ಬೈಲಕುಪ್ಪೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರು, ಆಟೋ ಹಾಗೂ ಬೈಕ್‌…

2 hours ago

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್‌ ಸಮಸ್ಯೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಕ್ಷಣಕ್ಕೆ ಡೀಸೆಲ್‌ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇರಾನ್‌-ಇಸ್ರೇಲ್‌ ಸಂಘರ್ಷ…

4 hours ago