ಬೆಂಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಇಂದು ತಮ್ಮ ಕಚೇರಿಯಲ್ಲಿ ಇಸ್ರೇಲ್ ದೇಶದ ಪ್ರತಿನಿಧಿಗಳೊಂದಿಗೆ ಕೃಷಿಯಲ್ಲಿ ಹೊಸ ಸಂಭಾವ್ಯ ಸುಧಾರಣೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಹವಾಮಾನ ಬದಲಾವಣೆ, ನೀರಿನ ಮಿತ ಬಳಕೆ, ವೈಜ್ಞಾನಿಕ ಕೃಷಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು, ರಾಜ್ಯದ ಕೃಷಿ ಪದ್ದತಿಯಲ್ಲಿ ಪರಿಣಾಕಾರಿ ಹಾಗೂ ಗುಣಾತ್ಮಕ ಬದಲಾವಣೆಗೆ ಸಲಹೆ ಸಹಕಾರ ನೀಡುವಂತೆ ಕೋರಿದರು.
ಇಸ್ರೇಲ್ ನ ಕೃಷಿ ಸಂಸ್ಕೃತಿ, ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳ ಪಾತ್ರದ ಬಗ್ಗೆ ಮಾಹಿತಿ ಪಡೆದರು. ರಾಜ್ಯದಲ್ಲಿನ ಪರಿಸ್ಥಿತಿ, ನಡೆಸಲಾಗುತ್ತಿರುವ ನಿರಂತರ ಸಂಶೋಧನೆಗಳು ಕೃಷಿ ಭೂಮಿಗೆ ಅದರ ವರ್ಗಾವಣೆ, ಸರ್ಕಾರದ ಯೋಜನೆ, ನೀರಿನ ಸಂಸ್ಕರಣೆ, ಮರು ಬಳಕೆ ರೈತ ತರಬೇತಿ ಕಾರ್ಯಕ್ರಮಗಳು ತಂತ್ರಜ್ಞನಗಳ ವರ್ಗಾವಣೆಗಳ ಪ್ರೋತ್ಸಾಹ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ರೇಲ್ ದೇಶದ ಡೆಪ್ಯೂಟಿ ಕಾನ್ಸಲೇಟ್ ಜನರಲ್ ಲೈಮೋರ್ ಬ್ಲೆಟರ್, ಇಸ್ರೇಲ್ ನಲ್ಲಿರುವ SOLED & DATA PANEL ಕಂಪನಿಯ ಕೋ ಫೌಂಡರ್, ಡಾನ ಪೌಷ್ಟಿ, ಹಾಗೂ CSO, CLIMATE CROP ಕಂಪನಿಯ ಕೋ ಫೌಂಡರ್ ವಿವೇಕಾನಂದ ತಿವಾರಿ, ಇಸ್ರೇಲ್ ದೇಶದ ಕಾನ್ಸಲೇಟ್ ಸಿಬ್ಬಂದಿ ರೇಷ್ಮ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಅಪರ ನಿರ್ದೇಶಕ ರೆಡ್ಡಿ, ಸಭೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…