ರಾಜ್ಯ

ಭೀಕರ ಸರಣಿ ಅಪಘಾತ : ಬೆಂಗಳೂರಿನ 6 ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವು

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಸಮೀಪದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ (NH-648) ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಬಳಿ ಶುಕ್ರವಾರ ಬೆಳಗ್ಗೆ ನಸುಕಿನ ಜಾವದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

ಅಪಘಾತದಲ್ಲಿ ಎಕ್ಸ್‌ಯುವಿ 700 ಕಾರು, ಬೈಕ್ ಮತ್ತು ಕ್ಯಾಂಟರ್ ಟ್ರಕ್ ನಡುವೆ ಸರಣಿ ಡಿಕ್ಕಿ ಉಂಟಾಗಿದೆ. ದೇವನಹಳ್ಳಿ ಕಡೆಗೆ ಹೋಗುತ್ತಿದ್ದ ಎಕ್ಸ್‌ಯುವಿ ಕಾರು ಅತಿವೇಗದಿಂದ ಬೈಕ್‌ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿದ್ದು, ನಂತರ ನಿಯಂತ್ರಣ ತಪ್ಪಿ ಕ್ಯಾಂಟರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು:
– ಕಾರಿನಲ್ಲಿದ್ದ ಆರು ಮಂದಿ (ಅವರಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳು, ವಯಸ್ಸು 17-18 ವರ್ಷದ ನಡುವೆ)
– ಬೈಕ್ ಸವಾರ (ರಾತ್ರಿ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ 26 ವರ್ಷದ ಗಗನ್ ಎಂಬಾತ)

ಮೃತರಲ್ಲಿ ಹೆಚ್ಚಿನವರು ಬೆಂಗಳೂರಿನ ಕೊತ್ತನೂರು (Kothanur) ಮೂಲದವರು ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆಗೆ ಜಾಯ್‌ರೈಡ್‌ಗೆ ಹೋಗಿದ್ದಾ ಈ ಘಟನೆ ಸಂಭವಿಸಿದೆ. ಮೃತರ ಗುರುತು ಪತ್ತೆಯಾಗಿದ್ದು, ಶವಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ಕಾರಣ ಅತಿವೇಗದ ಚಾಲನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಯ ಸ್ಥಳದಲ್ಲಿ ಏರ್‌ಬ್ಯಾಗ್‌ಗಳು ಸ್ಫೋಟಗೊಂಡಿದ್ದರೂ ತೀವ್ರ ಪ್ರಭಾವದಿಂದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಸಾಂಪ್ರದಾಯಿಕ ಸೊಗಡು ಸಾಕ್ಷೀಕರಿಸಿದ ಕೂತಿನಾಡು ಸುಗ್ಗಿ ಉತ್ಸವ

ಲಕ್ಷ್ಮೀಕಾಂತ್ ಕೋಮಾರಪ್ಪ ಗ್ರಾಮದೇವತೆ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆಗಾಗಿ ಪ್ರಾರ್ಥನೆ ಸೋಮವಾರಪೇಟೆ: ಗ್ರಾಮೀಣ ಭಾಗದ ಆಚರಣೆಗಳಲ್ಲಿ…

2 hours ago

ಇಂದು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವ ರಥೋತ್ಸವ

ಅಣ್ಣೂರುಸತೀಶ್ ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು…

2 hours ago

ಕರಿಯಮ್ಮ ದೊಡ್ಡಮ್ಮ ದೇವಿ ಜಾತ್ರೋತ್ಸವಕ್ಕೆ ಭೇರ್ಯ ಸಜ್ಜು

ಭೇರ್ಯ ಮಹೇಶ್ ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ  ಭೇರ್ಯ: ಭೇರ್ಯ ಗ್ರಾಮದ…

2 hours ago

ಜಾತಿವಾದಿ ಮನಸ್ಸುಗಳಿಗೆ ಸಮಾನತೆಯ ದರ್ಶನ

ಸಮಾಜ ಕಲ್ಯಾಣ ಇಲಾಖೆ ನೌಕರರಿಂದ ‘ಮುಟ್ಟಿಸಿಕೊಂಡವನು’ ನಾಟಕ; ಪಿ.ಲಂಕೇಶ್ ರಚನೆಯ ಕಥೆ ಮೈಸೂರು: ಮುಟ್ಟಬಾರದ ಜಾತಿಯವರು ಎನಿಸಿಕೊಂಡವರೊಬ್ಬರಿಂದ ಮುಟ್ಟಿಸಿಕೊಂಡ ಜಾತಿ…

2 hours ago

ಹುಣಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದ ಪ್ರಕರಣ: ಮೂವರ ಬಂಧನ

ಮೈಸೂರು: ಹುಣಸೂರು ಬಳಿಯ ತೋಟದ ಮನೆಯೊಂದ ರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…

2 hours ago