ರಾಜ್ಯ

ದರ್ಶನ್‌ ನೋಡಲು 500 ಕಿ.ಮೀ ಕ್ರಮಿಸಿ ಬಂದ ವಿಶೇಷಚೇತನ ಅಭಿಮಾನಿ

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಧ್ಯ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ನೋಡಲು ವಿಶೇಷಚೇತನ ಅಭಿಮಾನಿಯೊಬ್ಬ 500ಕಿ.ಮೀ ಕ್ರಮಿಸಿ ಬೆಂಗಳೂರಿಗೆ ಬಂದಿದ್ದಾನೆ.

ಗುಲ್ಬರ್ಗಾದ ಶಾಪುರದಿಂದ ಬೆಂಗಳೂರಿಗೆ ಬಂದಿರುವ ಅಭಿಮಾನಿ ಕಳೆದ ಶುಕ್ವಾರ ತನ್ನ ಊರಿನಿಂದ ತನ್ನ ಮೂರು ಚಕ್ರದ ವಾಹನ ಓಡಿಸಿಕೊಂಡು ಬೆಂಗಳೂರಿನತ್ತ ಹೊರಟು ಇಂದು ಬೆಂಗಳೂರಿಗೆ ತಲುಪಿದ್ದಾನೆ. ನಟ ದರ್ಶನ್‌ ನೋಡುವವರೆಗೆ ನಾನು ಹಿಂದಿರುಗುವುದಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ನಿಂತಿದ್ದಾನೆ.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿರುವ ಆತ, ನಮಗೆ ಡಿ ಬಾಸ್‌ ಮುಖ್ಯ. ದರ್ಶನ್‌ ಅವರು ಕೊಲೆ ಮಾಡಿಲ್ಲ.  ದರ್ಶನ್‌ ಅವರನ್ನು ನೋಡಲು ಪೊಲೀಸರು ನನ್ನನ್ನು ಒಳಗೆ ಬಿಡುತ್ತಿಲ್ಲ.  ಅವರನ್ನು ನೋಡುವವರೆಗೆ ನಾನು ನಮ್ಮ ಊರಿಗೆ ಹಿಂದಿರುಗುವುದಿಲ್ಲ.

ನೂರಾರು ಜನರಿಗೆ ದರ್ಶನ್‌ ಸಹಾಯ ಮಾಡಿದ್ದಾರೆ ಹಾಗೆ ನನಗೂ ಸಹಾಯ ಮಾಡಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಹೊರಗೆ ಬಂದೇ ಬರುತ್ತಾರೆ ಎಂದು ಹೇಳಿದ್ದಾನೆ.

 

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

8 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ; ವಾರದಲ್ಲಿ ಅಧಿಸೂಚನೆ : ಗೃಹ ಸಚಿವ ಪರಮೇಶ್ವರ

ಬೆಂಗಳೂರು : ಒಳಮೀಸಲಾತಿ ವಿವಾದ ಬಗೆಹರಿದಿರುವುದರಿಂದ ಒಂದು ವಾರದೊಳಗೆ 8 ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು…

10 hours ago

ಇರಾನ್‌ ಅಣ್ವಸ್ತ್ರ ಹೊಂದಲು ಬ್ರಿಟನ್‌ ರಾಜ ಚಾರ್ಲ್‌ ಬಯಸುವುದಿಲ್ಲ : ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್ : ಇರಾನ್ ಅಣ್ವಸ್ತ್ರ ಹೊಂದಲು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಬಯಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

11 hours ago

ಜಾಮೀನಿಗಾಗಿ ಮತ್ತೆ ಸುಪ್ರೀಂ ಕದ ತಟ್ಟಿದ ನಟ ದರ್ಶನ್‌

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಈಗ ಎರಡನೇ ಬಾರಿ ಜಾಮೀನಿಗಾಗಿ…

13 hours ago

ಚಾ.ನಗರ | ಚಿನ್ನಾಭರಣಕ್ಕಾಗಿ ಮದುವೆ ಮನೆಯಲ್ಲಿ ಮಾರಮಾರಿ ; ಚಾಕು ಇರಿತ

ಚಾಮರಾಜನಗರ : ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು…

14 hours ago

ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖ

ಬಿಸಿಲ ಝಳದಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟ ; ಮೇ ತಿಂಗಳಲ್ಲಿ ನೀರಿನ ಕೊರತೆ ಸಾಧ್ಯತೆ • ಕೆ.ಬಿ.ಶಂಶುದ್ದೀನ್ ಕುಶಾಲನಗರ :…

16 hours ago

ಅನಾಥ ಶವಗಳಿಗೆ ಗೌರವದ ವಿದಾಯ ಹೇಳುವ ಶರೀಫ್‌ ಚಾಚಾ

1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಲ್ಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಜನ ಸಾವಿಗೀಡಾದರು. ಅಯೋಧ್ಯೆಯಿಂದ 65ಕಿ.…

17 hours ago