ರಾಜ್ಯ

ಪ್ರಧಾನಿ ಮೋದಿಯವರ ಸುಳ್ಳಿನ 3 ಸಾವಿರ ವಿಡಿಯೋಗಳು ಸಿದ್ಧ: ಸಂತೋಷ್ ಲಾಡ್‌

ಹುಬ್ಬಳ್ಳಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಹಣಿಯಲು 3 ಸಾವಿರ ವಿಡಿಯೋ ತುಣುಕು ಇದ್ದು, ಮುಂಬರುವ ಲೋಕಸಭೆ ಚುನಾವಣೆ ಅವರೇ ನಮಗೆ ಪ್ರಬಲ ಅಸ್ತ್ರವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ನಗರದಲ್ಲಿ 2024 ರಾಹುಲ್ ಗಾಂಧಿ ಎಂಬ ಶೀರ್ಷಿಕೆ ಅಡಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಬಾಯಿ ತೆಗೆದ್ರೆ ಸುಳ್ಳು ಹೇಳ್ತಾರೆ. 2024ರ ಲೋಕಸಭೆ ಚುನಾವಣೆ ಗೆಲ್ಲಲು ಮೋದಿ ಎಲ್ಲ ರೀತಿಯ ಕುತಂತ್ರಗಳನ್ನು ನಡೆಸಲಿದ್ದಾರೆ. ಅವುಗಳನ್ನು ಹಿಮ್ಮೆಟ್ಟಿಸುವ ಜನತೆ ನಮ್ಮದೇ ಆದ ಕಾರ್ಯತಂತ್ರ ಇರಬೇಕಿದೆ. ಮಾಧ್ಯಮಗಳು ನಮಗೆ (ಕಾಂಗ್ರೆಸ್) ಸಹಕಾರ ನೀಡುವುದಿಲ್ಲ ಎಂಬುದು ಗೊತ್ತಿರುವ ಸತ್ಯ. ಹಾಗಾಗಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹಣಿಯಲು 3 ಸಾವಿರ ವಿಡಿಯೋ ತುಣುಕು ಪ್ರಬಲ ಅಸ್ತ್ರವಾಗಲಿದೆ ಎಂದು ಹೇಳಿದರು.

ಪುಲ್ವಾಮ ದಾಳಿಗೆ ಆರ್‌ಡಿಎಕ್ಸ್‌ ಹೇಗೆ ಬಂತು?

ಪ್ರಧಾನಿ ಮೋದಿಯವರಿಗೆ ಪುಲ್ವಾಮಾ ದಾಳಿಗೆ ಬಗ್ಗೆ ತಮ್ಮದೇ ಭಾಷಣ ಮಾಡುತ್ತಾರೆ. ಈಗ ಜನ ಕೇಳುತ್ತಿದ್ದು, ಮೊದಲು ಹೇಳಬೇಕು. ಸಾಮಾನ್ಯ ವಾಹನದಲ್ಲಿ 300 ಕೆಜಿ ಆರ್‌ಡಿಎಕ್ಸ್ ಹೇಗೆ ಬಂತು ಅಂತಾ ಯಾರೂ ಚರ್ಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .

” ನಾವು ಚುನಾವಣೆ ಸುಲಭವಾಗಿ ಗೆಲ್ತೀವಿ ಅಂತ ತಿಳ್ಕೋಬೇಡಿ. 10 ವರ್ಷ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ನಿರಂತರ ಕಿರುಕುಳ ಕೊಟ್ಟಿದ್ದಾರೆ. ಇದುವರೆಗೂ ಆ ಮನುಷ್ಯ (ರಾಹುಲ್‌ ಗಾಂಧಿ) ಒಬ್ಬರ ವಿರುದ್ಧವೂ ಮಾತನಾಡಲಿಲ್ಲ. ಬುದ್ಧರಂತೆ ರಾಹುಲ್ ಗಾಂಧಿಯವರನ್ನು ನಾವು ಕಾಣಬೇಕು. ಭಾರತೀಯ ಜನತಾ ಪಕ್ಷದವರು ಅವರು ಪಾಕಿಸ್ತಾನ್, ಹಿಂದೂ- ಮುಸ್ಲಿಂ ಬಗ್ಗೆ ಅಷ್ಟೇ ಮಾತನಾಡೋದು ಅವರು ಹಿಂದುತ್ವ ವಾದ ತರ್ತಾರೆ. ಆದರೆ, ನಾವು ಅಂಬೇಡ್ಕರ್- ಬಸವಣ್ಣನವರ ವಾದ ಮುಂಚೂಣಿಗೆ ತರಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಫೋಟೋ ಆರ್‌ಎಸ್ಎಸ್ ಕಚೇರಿಯಲ್ಲಿ ಇಟ್ಕೋಬೇಕು ಎಂದು ಹೇಳಿದರು.

ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ

ಪಾಕಿಸ್ತಾನ ಬೇಕಾಗಿದ್ದ ಮುಸ್ಲಿಮರು ಅಲ್ಲಿಗೆ ಹೋದ್ರು. ಇಲ್ಲಿರುವವರು ತಮ್ಮ ಆಯ್ಕೆಯಿಂದ ಇಲ್ಲಿದ್ದಾರೆ. ಇತಿಹಾಸವನ್ನೂ ತಿರುಚುವ ಕೆಲಸ ಬಿಜೆಪಿ ಅವರು ಮಾಡ್ತಾರೆ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದರು.

ರಾಮಾಯಣ ಇಡೀ ಹಿಂದೂ ರಾಷ್ಟ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಇಡೀ ಹಿಂದೂ ರಾಷ್ಟ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಈ ಮಹಾನ್‌ ಜ್ಞಾನಿಯನ್ನು ಸಮಾಜ ಸದಾಕಾಲ ಸ್ಮರಿಸಬೇಕು ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು. ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಆಶ್ರಯದಲ್ಲಿನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಇಡೀ ದೇಶಕ್ಕೆ ಮಹಾಗುರು

ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ರಾಮಾಯಾಣ ಮಹಾಕಾವ್ಯದ ಸ್ಮರಣೆ. 24 ಸಾವಿರ ಶ್ಲೋಕದ ಈ ರಾಮಾಯಾಣವು ಇಡೀ ಹಿಂದೂ ರಾಷ್ಟ್ರಕ್ಕೆ ಅತೀ ದೊಡ್ಡ ಅತ್ಯಮೂಲ್ಯ ಸಂಪತ್ತು ಆಗಿದೆ. ಈ ಮಹಾಕಾವ್ಯ ಬರೆದ ವಾಲ್ಮೀಕಿಯನ್ನು ಬ್ರಿಟಿಷರು ಮಹಾನ್‌ ಜ್ಞಾನಿ ಎಂದು ಕರೆದಿದ್ದಾರೆ. ಗಂಗಾನದಿಯ ದಡದಲ್ಲಿನಡೆಯುವಾಗ ಎರಡು ಬೆಳ್ಳಕ್ಕಿಗಳು ಮಿಲನದಲ್ಲಿತೊಡಗಿದ್ದಾಗ ಬೇಟೆಗಾರನೊಬ್ಬ ಒಂದು ಬೆಳ್ಳಕ್ಕಿಯನ್ನು ಕೊಂದ ಸಂದರ್ಭದಲ್ಲಿವಾಲ್ಮೀಕಿಯವರು ತಮ್ಮ ಪ್ರಥಮ ಶ್ಲೋಕ ಬರೆಯುತ್ತಾರೆ. ಮುಂದೆ ಅವರು 24 ಸಾವಿರ ಶ್ಲೋಕದ 4 ಲಕ್ಷ 80 ಸಾವಿರ ಪದಗಳುಳ್ಳ ಮಹಾಕಾವ್ಯ ರಾಮಾಯಾಣವನ್ನು ಬರೆದು ಇತಿಹಾಸ ನಿರ್ಮಿಸುತ್ತಾರೆ. ವಾಲ್ಮೀಕಿ ಕೇವಲ ವಾಲ್ಮೀಕಿ ಸಮಾಜಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹಾಗುರು ಆಗಿದ್ದಾರೆ ಎಂದು ಸಚಿವ ಲಾಡ್‌ ಬಣ್ಣಿಸಿದರು.

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

7 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

8 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

9 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

11 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

11 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

15 hours ago