ಕ್ರೀಡೆ

ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಲಂಕಾಗೆ ಸೋಲುಣಿಸಿದ ನಮಿಬಿಯಾ

ಮೆಲ್ಬರ್ನ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ನಮಿಬಿಯಾ ತಂಡ, ಏಷ್ಯಾಕಪ್‌ ಪ್ರಶಸ್ತಿ ವಿಜೇತ ಶ್ರೀಲಂಕಾ ಪಡೆಗೆ ಅಚ್ಚರಿಯ ಸೋಲುಣಿಸಿದೆ.
ಗೀಲಾಂಗ್‌ನಲ್ಲಿರುವ ಸೈಮಂಡ್ಸ್‌ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್‌ 16ರಂದು) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಸುಲಭ ಜಯದ ನಿರೀಕ್ಷೆಯಲ್ಲಿದ್ದ ಲಂಕನ್ನರೆದುರು ದಿಟ್ಟ ಆಟವಾಡಿದ ನಮಿಬಿಯಾ ಬ್ಯಾಟರ್‌ಗಳು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್‌ ಕಲೆಹಾಕಿದರು.
ಕೇವಲ 28 ಎಸೆತಗಳಲ್ಲಿ 42 ರನ್‌ ಗಳಿಸಿದ ಜಾನ್‌ ಫ್ರೈಲಿಂಕ್‌ ಹಾಗೂ 16 ಎಸೆತಗಳಲ್ಲಿ 31 ರನ್‌ ಗಳಿಸಿದ ಜೆಜೆ ಸ್ಮಿತ್‌ ಉಪಯುಕ್ತ ಆಟವಾಡಿದರು.
ಈ ಗುರಿ ಎದುರು ಲಂಕಾ ತಂಡ ತಿಣುಕಾಡಿತು. ನಮಿಬಿಯಾ ಸಂಘಟಿತ ಬೌಲಿಂಗ್‌ ಎದುರು ದಿಕ್ಕೆಟ್ಟ ದಾಸುನ್‌ ಸನಕಾ ಪಡೆ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ 108 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಯಿತು.
ನಾಯಕ ಸನಕ (29), ಭಾನುಕ ರಾಜಪಕ್ಸ (21) ಹಾಗೂ ಧನಂಜಯ ಡಿ ಸಿಲ್ವಾ (12) ಹೊರತುಪಡಿಸಿ ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ.

ಹೀಗಾಗಿ 55 ರನ್‌ ಅಂತರದಿಂದ ಹೀನಾಯವಾಗಿ ಸೋಲು ಕಾಣುವಂತಾಯಿತು.

ಇದೇ ಗುಂಪಿನ ಇನ್ನೊಂದು ಪಂದ್ಯ ಇದೇ ಮೈದಾನದಲ್ಲಿ ನಡೆಯುತ್ತಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೆದರ್ಲೆಂಡ್ಸ್‌ ಹಣಾಹಣಿ ನಡೆಸುತ್ತಿವೆ

andolanait

Recent Posts

ಓದುಗರ ಪತ್ರ: ಒಳ ಮೀಸಲಾತಿ ಅರೆ ನಿರ್ಧಾರ

ಮಾಗಿದ ಹಣ್ಣಲ್ಲ ಮಂತ್ರಕ್ಕೆ ಉದುರಿದ ಹಣ್ಣಲ್ಲ ಗುದ್ದಿ ಗುದ್ದಿ ಮಾಗಿಸಿದ ಹಣ್ಣು ಮತ್ತೆ ಮೈಮರೆತರೆ ಕೈಯಿಂದಲೇ ಮಾಯವಾಗುವ ಹಣ್ಣು ಕೈಗೆ…

3 hours ago

ಓದುಗರ ಪತ್ರ: ಏನಿದು ನಕಲಿ ನ್ಯಾಯಾಲಯ?

ನಕಲಿ ನೋಟುಗಳು, ನಕಲಿ ಆಹಾರ ಪದಾರ್ಥಗಳು, ನಕಲಿ ದಾಖಲೆಗಳು, ನಕಲಿ ಅಧಿಕಾರಿಗಳು, ನಕಲಿ ಪೊಲೀಸರು, ನಕಲಿ ಸುದ್ದಿ ವಾಹಿನಿಗಳು ಅಷ್ಟೇ…

3 hours ago

ಓದುಗರ ಪತ್ರ: ಅಶ್ವಿನಿ ನಾಗೇಂದ್ರರವರಿಗೆ ಅಭಿನಂದನೆಗಳು

ಚನ್ನಪಟ್ಟಣದ ಕಲ್ಪಶ್ರೀ ಪ್ರದರ್ಶನ ಕಲೆಗಳು ಕೇಂದ್ರ ಟ್ರಸ್ಟ್ ವತಿಯಿಂದ ನವಂಬರ್ 5ರ ಸಂಜೆ 5.30ಕ್ಕೆ ಮಲೇಷಿಯಾದ ಕೌಲಾಲಂಪುರದ ಸುಭಾಷ್ ಚಂದ್ರ…

3 hours ago

ನಾಳೆ ಮಧ್ಯಾಹ್ನದ ಬಳಿಕ ತಲಕಾವೇರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಮಡಿಕೇರಿ: ನಾಳೆ ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯುವುದರಿಂದ ಮಧ್ಯಾಹ್ನ 2 ಗಂಟೆ ಬಳಿಕ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.…

3 hours ago

ಮೈಸೂರು ಮುಡಾ ಹಗರಣ: ಇಂದು ಸಿಬಿಐ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ…

3 hours ago

ಹುಲಿ ಸೆರೆಗೆ ದಸರಾ ಆನೆ ಮಹೇಂದ್ರ ಎಂಟ್ರಿ

ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಸೆರೆಗೆ ದಸರಾ ಆನೆ ಮಹೇಂದ್ರನನ್ನು ಬಳಸಿಕೊಳ್ಳಲಾಗಿದೆ.…

3 hours ago