ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಕಾತರತೆಯಿಂದ ಕಾಯುತ್ತಿದ್ದ ದಿನ ಹತ್ತಿರ ಬಂದೇ ಬಿಟ್ಟಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಾಳೆ ( ನವೆಂಬರ್ 19 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ನಾಳೆ ಮಧ್ಯಾಹ್ನ ಎರಡು ಗಂಟೆಗೆ ಶುರುವಾಗಲಿದ್ದು 13ನೇ ವಿಶ್ವಕಪ್ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿದ್ದು, ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ಯೋಜನೆಯಲ್ಲಿದೆ. ಹಾಗಿದ್ದರೆ ಇಲ್ಲಿಯವರೆಗೆ ನಡೆದಿರುವ ಒಟ್ಟು 12 ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1975 – ಆತಿಥ್ಯ: ಇಂಗ್ಲೆಂಡ್, ವಿನ್ನರ್: ವೆಸ್ಟ್ ಇಂಡೀಸ್, ರನ್ನರ್ – ಆಸ್ಟ್ರೇಲಿಯಾ
1979- ಆತಿಥ್ಯ: ಇಂಗ್ಲೆಂಡ್, ವಿನ್ನರ್: ವೆಸ್ಟ್ ಇಂಡೀಸ್, ರನ್ನರ್ – ಇಂಗ್ಲೆಂಡ್
1983 – ಆತಿಥ್ಯ – ಇಂಗ್ಲೆಂಡ್, ವಿನ್ನರ್ – ಭಾರತ, ರನ್ನರ್ – ವೆಸ್ಟ್ ಇಂಡೀಸ್
1987 – ಆತಿಥ್ಯ – ಭಾರತ ಹಾಗೂ ಪಾಕಿಸ್ತಾನ, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಇಂಗ್ಲೆಂಡ್
1992 – ಆತಿಥ್ಯ – ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ, ವಿನ್ನರ್ – ಪಾಕಿಸ್ತಾನ, ರನ್ನರ್ – ಇಂಗ್ಲೆಂಡ್
1996 – ಆತಿಥ್ಯ – ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ, ವಿನ್ನರ್ – ಶ್ರೀಲಂಕಾ, ರನ್ನರ್ – ಆಸ್ಟ್ರೇಲಿಯಾ
1999 – ಆತಿಥ್ಯ – ಇಂಗ್ಲೆಂಡ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಪಾಕಿಸ್ತಾನ
2003 – ಆತಿಥ್ಯ – ದಕ್ಷಿಣ ಆಫ್ರಿಕಾ, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಭಾರತ
2007 – ಆತಿಥ್ಯ – ವೆಸ್ಟ್ ಇಂಡೀಸ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಶ್ರೀಲಂಕಾ
2011 – ಆತಿಥ್ಯ – ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ವಿನ್ನರ್ – ಭಾರತ, ರನ್ನರ್ – ಶ್ರೀಲಂಕಾ
2015 – ಆತಿಥ್ಯ – ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ನ್ಯೂಜಿಲೆಂಡ್
2019 – ಆತಿಥ್ಯ – ಇಂಗ್ಲೆಂಡ್ಸ್ ಹಾಗೂ ವೇಲ್ಸ್, ವಿನ್ನರ್ – ಇಂಗ್ಲೆಂಡ್, ರನ್ನರ್ – ನ್ಯೂಜಿಲೆಂಡ್
ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…
ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…