ಟಾಷ್ಕೆಂಟ್: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸಣ್ಣ ಪದಕಗಳಿಗೆ ಸಮಾಧಾನಪಟ್ಟಿದೆ. ಮೊಹಮ್ಮದ್ ಹುಸ್ಸಮುದ್ದೀನ್, ದೀಪಕ್ ಕುಮಾರ್ ಭೋರಿಯಾ ಮತ್ತು ನಿಶಾಂತ್ ದೇವ್ ಕಂಚಿನ ಪದಕ ಗೆದ್ದರು.
ಇದೇ ಮೊದಲ ಸಲ ವಿಶ್ವ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧೆಗೆ ಇಳಿದ ಮೊಹಮ್ಮದ್ ಹುಸ್ಸಮುದ್ದೀನ್ ಗಾಯಾಳಾಗಿ ಸೈಮಿಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್ ಫೈನಲ್ ದಾಟಿದ ಸಾಧನೆಯಿಂದಾಗಿ ಅವರಿಗೆ ಕಂಚಿನ ಪದಕ ಒಲಿಯಿತು.
29 ವರ್ಷದ, ನಿಜಾಮಾಬಾದ್ ಮೂಲದ ಬಾಕ್ಸರ್ ಹುಸ್ಸಮುದ್ದೀನ್ ಸೆಮಿಫೈನಲ್‌ನಲ್ಲಿ (57 ಕೆಜಿ ವಿಭಾಗ) ಕ್ಯೂಬಾದ ಸೈದೆಲ್ ಹೋರ್ಟ ರಾಡ್ರಿಗೆಝ್ ಡೆಲ್ ರೇ ಅವರನ್ನು ಎದುರಿಸಬೇಕಿತ್ತು. ಆದರೆ ಕ್ವಾರ್ಟರ್ ಫೈನಲ್ ವೇಳೆ ಕಾಡಿದ ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಮುಂದೆ ಸ್ಪರ್ಧಿಸದಂತೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಅವರಿಗೆ ಸೂಚನೆ ನೀಡಿತ್ತು.
ಇನ್ನೊಂದು ಸೆಮಿಫೈನಲ್‌ನಲ್ಲಿ ದೀಪಕ್ ಭೋರಿಯಾ (51 ಕೆಜಿ) ಫ್ರಾನ್ಸ್‌ನ ಬಿಲಾಲ್ ಬೆನ್ನಮ ವಿರುದ್ಧ 3-4 ಅಂತರದ ಸೋಲುಂಡರು. ನಿಶಾಂತ್ ದೇವ್ (71 ಕೆಜಿ) ಕಜಾಕ್‌ಸ್ಥಾನದ ಅಸ್ಲಾಂಬೆಕ್ ಶಿಂಬರ್ಗೆನೋವ್ ವಿರುದ್ಧ ಎಡವಿದರು.
ದಾವಣಗೆರೆ: ಕೊಡಗಿನ ತಡಿಯಾಂಡಮೋಳ್‌ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಹೆಚ್ಚುವರಿಯಾಗಿ 40 ಸಿಬ್ಬಂದಿಯ…
ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಹಾವೇರಿ ವಿಶ್ವವಿದ್ಯಾನಿಲಯವು ನೀಡಲು ತೀರ್ಮಾನಿಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಮಾಜಿ ಮುಖ್ಯಮಂತ್ರಿ…
ಟಿ.ನರಸೀಪುರ: ಜೂಜಾಟದಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸುವಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ಘಟನೆ ನಡೆದಿದ್ದು,…
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀಕರತೆ 37ನೇ ದಿನವೂ ಮುಂದುವರಿದಿದೆ. ಯುದ್ಧದ ಮಧ್ಯೆಯೂ ಅಮೇರಿಕಾ ಸೇನೆಯಿಂದ ಸುದ್ದಿಯೊಂದು ಹೊರಬಿದ್ದಿದ್ದು, ಇರಾನ್‌ನಲ್ಲಿ ಕಾಣೆಯಾಗಿದ್ದ…
ಬೆಂಗಳೂರು: ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ…
ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ,…