ಕ್ರೀಡೆ

ಮೂರನೇ ಪಂದ್ಯದಲ್ಲಿಯೂ ಪ್ರಯೋಗ ಮುಂದುವರಿಸುತ್ತೇವೆ: ರಾಹುಲ್‌ ದ್ರಾವಿಡ್‌!

ಟ್ರಿನಿಡಾಡ್‌ (ವೆಸ್ಟ್ ಇಂಡೀಸ್‌): ವೆಸ್ಟ್ ಇಂಡೀಸ್‌ ವಿರುದ್ಧ ಮಂಗಳವಾರ ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿಯೂ ಭಾರತ ತಂಡ ಪ್ರಯೋಗ ಮುಂದುವರಿಸಲಿದೆ ಎಂದು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ. ಎರಡನೇ ಪಂದ್ಯದಲ್ಲಿ ವಿರಾಮ ತೆಗೆದುಕೊಂಡಿದ್ದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅಂತಿಮ ಕದನಕ್ಕೆ ಮರಳಲಿದ್ದಾರೆ.

ಮೊದಲನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಇದರ ಪರಿಣಾಮ ಭಾರತ ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರು ವಿರಾಮ ಪಡೆಯುವ ಮೂಲಕ ತಮ್ಮ ಸ್ಥಾನಗಳನ್ನು ಸಂಜು ಸ್ಯಾಮ್ಸನ್‌ ಹಾಗೂ ಅಕ್ಷರ್‌ ಪಟೇಲ್‌ ಅವರಿಗೆ ನೀಡಿದ್ದರು.

ಆದರೆ, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಇಶಾನ್‌ ಕಿಶನ್ ಹಾಗೂ ಶುಭಮನ್ ಗಿಲ್‌ ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡ ಪ್ರಥಮ ಇನಿಂಗ್ಸ್‌ಗಳಲ್ಲಿ 181 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್‌ ತಂಡ, ಶೇಯ್‌ ಹೋಪ್‌ (63*) ಹಾಗೂ ಕೀಸಿ ಕಾರ್ಟಿ (48*) ಅವರ ಬ್ಯಾಟಿಂಗ್‌ ಬಲದಿಂದ 6 ವಿಕೆಟ್‌ ಗೆಲುವು ಪಡೆದಿತ್ತು.

ರಾಹುಲ್‌ ದ್ರಾವಿಡ್‌ ಹೇಳಿದ್ದೇನು?: ಈ ಪಂದ್ಯದ ಬಳಿಕ ಮಾತನಾಡಿದ್ದ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮುಂದಿನ ಏಷ್ಯಾ ಕಪ್‌ ಹಾಗೂ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಳವರೆಗೂ ಇದೇ ತಂತ್ರವನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಅನುಸರಿಸಲಿದೆ ಎಂದು ಹೇಳಿದ್ದಾರೆ.

“ನಾವು ಯಾವಗಲೂ ದೊಡ್ಡ ಚಿತ್ರಣವನ್ನು ನೋಡಲು ಬಯಸುತ್ತೇವೆ. ಏಕದಿನ ವಿಶ್ವಕಪ್‌, ಏಷ್ಯಾ ಕಪ್‌ ಟೂರ್ನಿಗಳ ಈ ಅವಧಿಯಲ್ಲಿ ನಮಗೆ ಕೆಲ ಗಾಯಗಳ ಸಮಸ್ಯೆ ಎದುರಾಗಿದೆ. ಈ ಕಾರಣದಿಂದಲೇ ನಾವು ದೊಡ್ಡ ಚಿತ್ರಣ ನೋಡಲು ಬಯಸುತ್ತಿದ್ದೇವೆ. ಕಳೆದ ಪಂದ್ಯಗಳಲ್ಲಿದ್ದ ಸಂಗತಿಗಳನ್ನೇ ನಾವು ಮುಂದಿನ ಪಂದ್ಯದಲ್ಲಿ ಅನುಸರಿಸುತ್ತೇವೆ. ಪ್ರತಿ ಪಂದ್ಯ ಹಾಗೂ ಪ್ರತಿಯೊಂದು ಸರಣಿಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದನ್ನು ನಾವು ಮಾಡಿದ್ದೇ ಆದಲ್ಲಿ, ನಾವು ಮತ್ತೆ ತಪ್ಪುಗಳನ್ನು ಮಾಡಬೇಕಾಗುತ್ತದೆ,” ಎಂದು ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.

ಸತತ 9 ಪಂದ್ಯಗಳಲ್ಲಿ ಭಾರತ ತಂಡದ ವಿರುದ್ದ ಸೋಲು ಅನುಭವಿಸಿದ್ದ ವೆಸ್ಟ್ ಇಂಡೀಸ್‌ ತಂಡ 55 ತಿಂಗಳ ಬಳಿಕ ಮೊದಲ ಗೆಲುವು ಪಡದುಕೊಂಡಿದೆ. 2019ರಲ್ಲಿ ಚನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ದ ವೆಸ್ಟ್ ಇಂಡೀಸ್‌ ತಂಡ 8 ವಿಕೆಟ್‌ಗಳ ಗೆಲುವು ಪಡದಿತ್ತು. ಇದಾದ ಬಳಿಕ ಸತತ 9ರಲ್ಲಿ ಸೋತಿದ್ದ ವಿಂಡೀಸ್‌ ಇದೀಗ ಗೆದ್ದು ಕಮ್‌ಬ್ಯಾಕ್‌ ಮಾಡಿದೆ.

3ನೇ ಒಡಿಐಗೆ ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿ : ಎರಡನೇ ಪಂದ್ಯದಲ್ಲಿ ವಿರಾಮ ಪಡೆದಿದ್ದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಬ್ಬರೂ ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕೆ ಮರಳಲಿದ್ದಾರೆ. ಮೂರನೇ ಪಂದ್ಯದ ನಿಮಿತ್ತ ಮಾತನಾಡಿದ್ದ ಹಾರ್ದಿಕ್‌ ಪಾಂಡ್ಯ, “ಪ್ರಸ್ತುತ ನಾವು ಮೊಲ ಅಲ್ಲ, ಆಮೆಗತಿಯಲ್ಲಿ ಸಾಗುತ್ತಿದ್ದೇವೆ. ವಿಶ್ವಕಪ್‌ ಟೂರ್ನಿಯವರೆಗೂ ನಮ್ಮ ಎಲ್ಲ ತಂತ್ರಗಳು ನಡೆಯಲಿವೆ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ, ಅದೇ ರೀತಿ ಎದುರಾಳಿ ತಂಡದ ಆಟಗಾರರು ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಕಾರಣದಿಂದಲೇ ಸರಣಿ 1-1 ಸಮಬಲವಾಗಿದೆ. ಮುಂದಿನ ಪಂದ್ಯ ತಂಬಾ ಉತ್ಸುಕತೆಯಿಂದ ಕೂಡಿರಲಿದೆ,” ಎಂದು ಹೇಳಿದ್ದಾರೆ.

andolanait

Recent Posts

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು…

1 hour ago

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

1 hour ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

2 hours ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

2 hours ago

ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಘಟಕದ 46ನೇ ತಂಡದ ಸಿವಿಲ್‌ ಪೊಲೀಸ್‌…

2 hours ago

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ 80 ಲಕ್ಷ ಜನರಿಂದ ನೋ ಕಿಂಗ್ಸ್‌ ಚಳುವಳಿ ಟ್ರಂಪ್‌ ನೀತಿ ವಿರೋಧಿಸಿ…

3 hours ago