ಬೆಂಗಳೂರು: 2023ರ ಐಪಿಎಲ್ ಕೂಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರ್ಗಮಿಸಿದೆ. ಸತತ ಮೂರು ಬಾರಿ ಪ್ಲೇ ಆಫ್ ತಲುಪಿದ್ದ ಆರ್ ಸಿಬಿ ಈ ಬಾರಿ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಲೀಗ್ ಹಂತದಲ್ಲೇ ಮನೆದಾರಿ ಹಿಡಿದಿದೆ. ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನ ಐಪಿಎಲ್‌ನಲ್ಲಿನ ತನ್ನ ತಂಡದ ಪ್ರದರ್ಶನದ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿದ್ದು “ಕೂಟದಲ್ಲಿ ನಮ್ಮದು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಮತ್ತು ಪ್ಲೇ ಆಫ್ ತಲುಪುಲು ಅರ್ಹರಾಗಿರಲಿಲ್ಲ” ಎಂದು ಹೇಳಿದರು.
“ನಮ್ಮ ಋತುವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಾನು ನಿರಾಶೆಗೊಂಡಿದ್ದೇನೆ. ನಾವು ನಮ್ಮ ಬಗ್ಗೆ ಆಳವಾಗಿ ಅವಲೋಕಿಸಿದರೆ, ನಾವು ಸ್ಪರ್ಧೆಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಫಾಫ್ ಹೇಳಿದರು.
ನಾವು ಅದೃಷ್ಟ ಹೊಂದಿದ್ದೆವು, ಹೀಗಾಗಿ ಋತುವಿನ ಉದ್ದಕ್ಕೂ ಕೆಲವು ಉತ್ತಮ ಪ್ರದರ್ಶನಗಳು ಬಂದಿದ್ದವು, ಆದರೆ ಒಟ್ಟಾರೆಯಾಗಿ ತಂಡವಾಗಿ, ನೀವು 15-14 ಪಂದ್ಯಗಳ ಅವಧಿಯನ್ನು ನೋಡಿದರೆ, ನಾವು ಬಹುಶಃ ಪ್ಲೇ ಆಫ್ ನಲ್ಲಿರಲು ಅರ್ಹರಲ್ಲ” ಎಂದು ಆರ್ ಸಿಬಿ ನಾಯಕ ಫಾಫ್ ಹೇಳಿದರು.
ಗುಜರಾತ್ ವಿರುದ್ಧದ ಸೋಲಿನ ಬಗ್ಗೆ ಮಾತನಾಡಿದ ಫಾಫ್, “ಈ ಸೋಲು ಇನ್ನೂ ನೋವುಂಟು ಮಾಡುತ್ತಿದೆ. ನಾವು ಭಾನುವಾರ ರಾತ್ರಿ ನಿಜವಾಗಿಯೂ ಕಷ್ಟಪಟ್ಟು ಪ್ರಯತ್ನಿಸಿದ್ದೇವೆ, ಆದರೆ ದುರದೃಷ್ಟವಶಾತ್ ವಿಫಲವಾದೆವು. ಈ ವರ್ಷದ ನಮ್ಮ ಪಾಸಿಟಿವ್ ಗಳನ್ನು ನೋಡಿದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆಟ, ನನ್ನ ಮತ್ತು ವಿರಾಟ್ ನಡುವೆ ನಾವು ಹೊಂದಿದ್ದ ಜೊತೆಯಾಟಗಳು. ಬಹುಶಃ ಪ್ರತಿ ಪಂದ್ಯದಲ್ಲೂ 50 ರನ್ ಜೊತೆಯಾಟವಾಡಿದ್ದೆವು. ಮೊಹಮ್ಮದ್ ಸಿರಾಜ್ ಉತ್ತಮ ಸೀಸನ್ ಹೊಂದಿದ್ದರು” ಎಂದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…