ಅರ್‌ಸಿಬಿ ಈ ಬಾರಿಯ 2024ರ ಐಪಿಎಲ್‌ನಲ್ಲಿ ತೀರಾ ನೀರಸ ಪ್ರದರ್ಶನ ನೀಡುತ್ತಾ ಬರುತ್ತಿದೆ. ಈವರೆಗೆ ಒಟ್ಟು 17 ಸೀಸನ್‌ಗಳು ನಡೆದಿದ್ದು, ಆರ್‌ಸಿಬಿ ಕೇವಲ ಮೂರು ಬಾರಿ ಮಾತ್ರ ಫೈನಲ್ ಹಂತ ತಲುಪಿದೆ. ಉಳಿದಂತೆ ಲೀಗ್‌ನಲ್ಲಿಯೇ ತನ್ನ ಅಧ್ಯಾಯ ಮುಗಿಸಿ ಹೊರ ಬೀಳುತ್ತಿದೆ.
ಇದರ ಬೆನ್ನಲ್ಲೇ ಟೀಂ ಇಂಡಿಯಾದ ಮಿಸ್ಟ್ರಿ ಬೌಲರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ತಾವು ಆರ್‌ಸಿಬಿ ಕ್ಯಾಂಪ್‌ನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಆರ್‌ಸಿಬಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಮಾಡಿದ್ದು ಕನ್ನಡಿಗ ಕುಂಬ್ಳೆ ನಾಯಕತ್ವದಲ್ಲಿ ಎಂಬುದು ವಿಶೇಷ. 2009ರಲ್ಲಿ ಆರ್‌ಸಿಬಿ ನಾಯಕರಾಗಿದ್ದ ಕೆವಿನ್ ಪೀಟರ್‌ಸನ್ ಅವರು ಅರ್ಧದಲ್ಲಿಯೇ ತವರಿಗೆ ವಾಪಸಾದ ಹಿನ್ನಲೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅನಿಲ್ ಕುಂಬ್ಳೆ ಹೆಗಲ ಮೇಲೆ ಬಿತ್ತು. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕುಂಬ್ಳೆ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋದರು.
ಇನ್ನು ಫೈನಲ್ ಪಂದ್ಯದಲ್ಲಿ ಆರ್‌ಸಿಬಿಗೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಎದುರಾಗಿತ್ತು. ಇದರಲ್ಲಿ ಆರ್‌ಸಿಬಿ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ತಾವು ಆರ್‌ಸಿಬಿ ನಾಯಕರಾಗಿ ತಂಡವನ್ನು ಮುನ್ನಡೆಸಿದ ಬಗ್ಗೆ ಹಾಗೂ ಫೈನಲ್ ಪಂದ್ಯದಲ್ಲಿನ ಎಡವಟ್ಟುಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅನಿಲ್ ಕುಂಬ್ಳೆ. ಈ ಬಗ್ಗೆ ಭಾರತ ತಂಡ ಬೌಲರ್ ಆರ್. ಅಶ್ವಿನ್ ಅವರ ಯುಟೂಬ್ ಚಾನೆಲ್ ನಲ್ಲಿ ಭಾಗವಹಿಸಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕುಂಬ್ಳೆ ಮಾತನಾಡುತ್ತಾ, 2009ರ ಫೈನಲ್‌ನಲ್ಲಿ ನಾವು ಗೆಲ್ಲಬೇಕಿತ್ತು. ಸಿಕ್ಕ ಸುವರ್ಣಾವಕಾಶವನ್ನು ನಾವು ಕೈಚೆಲ್ಲಿದೆವು ಆ ಮೂಲಕ ಪ್ರಶಸ್ತಿ ನಮ್ಮ ಕೈ ತಪ್ಪಿತು ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ತಂಡ 143ರನ್ ಗಳಿಸಿ 144ರನ್ ಗುರಿ ನೀಡಿತು. ಇದನ್ನು ಬೆನ್ನತ್ತಿದ ನಮಗೆ ಕೊನೆಯ ಓವರ್‌ನಲ್ಲಿ 15 ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ನಾನು, ಉತ್ತಪ್ಪ ಇದ್ದೆವು. ಡೆಕ್ಕನ್ ಪರ ಆರ್.ಪಿ ಸಿಂಗ್ ಬೌಲರ್ ಆಗಿದ್ದರು. ಮೊದಲು ನನಗೆ ಸ್ಟ್ರೈಕ್ ಸಿಕ್ಕಿತು. ಮೊದಲ ಬಾಲ್‌ನಲ್ಲಿ ಒಂದು ರನ್ ಬಾರಿಸಿದೆ, ಉತ್ತಮ ಎರಡು ಮತ್ತು ಮೂರನೇ ಬಾಲ್‌ಗಳನ್ನು ಎದುರಿಸುವಲ್ಲಿ ವಿಫಲರಾದರು.
ಆರ್.ಪಿ ಸಿಂಗ್ ಲೆಂತ್ ಬಾಲ್ ಹಾಕ್ತಾನ್ ನೀನು ಸ್ಕೂಪ್ ಆಡಬೇಡ ಎಂದು ಉತ್ತಪ್ಪಗೆ ಸೂಚಿಸುತ್ತಿದ್ದೆ, ಆದರೆ ಅವರು ಸ್ಕೂಪ್ ಪ್ರಯತ್ನಿಸಿ ಎರಡು ಡಾಟ್ ಬಾಲ್ ಮಾಡಿದರು, ನಾಲ್ಕನೆ ಎಸೆತ 2 ರನ್ ಆದರೆ, ಏದನೇಯದು ಲೆಗ್‌ಬೈ 4 ಆಯಿತು. ಕೊನೆಯ ಎಸೆತವನ್ನು ಸಿಂಗಲ್ ಬಾರಿಸಲಷ್ಟೇ ಶಕ್ತರಾದರು. ಆ ಓವರ್‌ನಲ್ಲಿ ನಮಗೆ ಒಂದು ಸಿಕ್ಸರ್ ಬೇಕಾಗಿತ್ತು. ನಾನು ಬ್ಯಾಟಿಂಗ್ ಸ್ಕ್ರೀಸ್‌ನಲ್ಲಿದ್ದಿದ್ದರೇ ಖಂಡಿತವಾಗಿ ಸಿಕ್ಸರ್ ಬಾರಿಸಲು ಪ್ರಯತ್ನಿಸುತ್ತಿದ್ದೆ. ಅಂತಿಮವಾಗಿ ನಾವು 6 ರನ್‌ಗಳಿಂದ ಟ್ರೋಫಿ ಕಳೆದುಕೊಂಡೆವು. ಆ ಒಂದು ಸೋಲು ನನ್ನನ್ನು ಈಗಲೂ ಕಾಡುತ್ತಿದೆ ಎಂದು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಕೆ.ಬಿ.ರಮೇಶನಾಯಕ ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ…
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…