ಕ್ರೀಡೆ

Vijay Hazare Trophy 2023: ರೌಂಡ್‌ 3 ಪಂದ್ಯಗಳ ಮುಕ್ತಾಯದ ಬಳಿಕ ಅಗ್ರಸ್ಥಾನದಲ್ಲಿವೆ ಈ 4 ತಂಡಗಳು

ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯ ರೌಂಡ್‌ 3 ಪಂದ್ಯಗಳು ನಿನ್ನೆ ( ನವೆಂಬರ್‌ 27 ) ಮುಕ್ತಾಯಗೊಂಡಿವೆ. ಇನ್ನು ಕರ್ನಾಟಕ ತಂಡ ರೌಂಡ್‌ 3 ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಜಯ ಸಾಧಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಮೊದಲಿಗೆ ಜಮ್ಮು ಕಾಶ್ಮೀರದ ವಿರುದ್ಧ ಕಣಕ್ಕಿಳಿದು 222 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಎರಡನೇ ಪಂದ್ಯದಲ್ಲಿ ಉತ್ತರಾಖಂಡ ತಂಡದ ವಿರುದ್ಧ 52 ಪಂದ್ಯಗಳ ಜಯ ದಾಖಲಿಸಿತ್ತು. ಹೀಗೆ ಹ್ಯಾಟ್ರಿಕ್‌ ಜಯ ಸಾಧಿಸಿರುವ ಕರ್ನಾಟಕ ಕರ್ನಾಟಕ ಗ್ರೂಪ್‌ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಮುಂಬೈ, ವಿದರ್ಭ, ರಾಜಸ್ಥಾನ್‌ ಹಾಗೂ ಮಧ್ಯ ಪ್ರದೇಶ ತಂಡಗಳೂ ಸಹ ತಮ್ಮ ತಮ್ಮ ಅಂಕಪಟ್ಟಿಗಳಲ್ಲಿ ಹ್ಯಾಟ್ರಿಕ್‌ ಜಯದೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿವೆ.

ಹಾಗಿದ್ದರೆ ಟೂರ್ನಿಯ ಮೊದಲ 3 ಸುತ್ತಿನ ಪಂದ್ಯಗಳು ಮುಕ್ತಾಯವಾದ ಬಳಿಕ ಅಂಕಪಟ್ಟಿ ಹೇಗಿದೆ, ಯಾವ ತಂಡಗಳು ಟಾಪ್‌ 3 ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಗ್ರೂಪ್‌ A
ಮುಂಬೈ – 3 ಪಂದ್ಯ, 3 ಗೆಲುವು, 12 ಅಂಕ
ತ್ರಿಪುರ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಕೇರಳ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ

ಗ್ರೂಪ್‌ B

ವಿದರ್ಭ – 3 ಪಂದ್ಯ, 3 ಗೆಲುವು, 12 ಅಂಕ
ಸರ್ವಿಸಸ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಹೈದರಾಬಾದ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ‌

ಗ್ರೂಪ್‌ C

ಕರ್ನಾಟಕ – 3 ಪಂದ್ಯ, 3 ಗೆಲುವು, 12 ಅಂಕ
ಹರಿಯಾಣ – 3 ಪಂದ್ಯ, 3 ಗೆಲುವು, 12 ಅಂಕ
ಚಂಡೀಗಢ – 3 ಪಂದ್ಯ, 2 ಗೆಲುವು,‌ 1 ಸೋಲು, 8 ಅಂಕ

ಗ್ರೂಪ್‌ D

ರಾಜಸ್ಥಾನ್ – 3 ಪಂದ್ಯ, 3 ಗೆಲುವು, 12 ಅಂಕ
ಗುಜರಾತ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ
ಅಸ್ಸಾಂ – 2 ಪಂದ್ಯ, 1 ಗೆಲುವು, 1 ಸೋಲು, 4 ಅಂಕ

ಗ್ರೂಪ್‌ E

ಮಧ್ಯ ಪ್ರದೇಶ – 3 ಪಂದ್ಯ, 3 ಗೆಲುವು, 12 ಅಂಕ
ತಮಿಳುನಾಡು – 2 ಪಂದ್ಯ, 2 ಗೆಲುವು, 8 ಅಂಕ
ಬೆಂಗಾಳ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ

andolana

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

4 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

4 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

4 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

4 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

5 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

6 hours ago