ಕ್ರೀಡೆ

ಇಂದು ಭಾರತ-ಪಾಕ್ ಮತ್ತೆ ಮುಖಾಮುಖಿ

ದುಬೈ: ಶುಕ್ರವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಪಾಕಿಸ್ತಾನ ದಾಖಲೆಯ ೧೫೫ ರನ್ ಅಂತರದ ಗೆಲುವು ದಾಖಲಿಸಿತು. ಇದರೊಂದಿಗೆ ಭಾನುವಾರ ನಡೆಯಲಿರುವ ಸೂಪರ್ ೪ ಹಂತದ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಎದುರಿಸಲಿದೆ. ಸೂಪರ್ ೪ ಹಂತದ ಮೊದಲ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ ೭.೩೦ಕ್ಕೆ ಪಂದ್ಯ ಆರಂಭವಾಗಲಿದೆ.
ಎ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ೪ ಹಂತಕ್ಕೆ ಲಗ್ಗೆಯಿಟ್ಟಿದೆ. ಹಾಂಗ್‌ಕಾಂಗ್ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದೆ.
ಸೂಪರ್ ೪ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ತೇರ್ಗಡೆ ಪಡೆಯಲಿವೆ. ಹೀಗಾಗಿ ಫೈನಲ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ.
ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ ೪ ಹಂತಕ್ಕೆ ತೇರ್ಗಡೆ ಹೊಂದಿವೆ. ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದರೆ ಲಂಕಾ ಅಫ್ಗಾನ್ ವಿರುದ್ಧ ಸೋಲು ಅನುಭವಿಸಿತ್ತು.

ಏಷ್ಯಾಕಪ್‌ನಲ್ಲಿ ೧೬ ಬಾರಿ ಮಖಾಮುಖಿಯಾಗಿದ್ದು, ೯ ಬಾರಿ ಭಾರತಕ್ಕೆ ಗೆಲುವು ಸಾಧಿಸಿದೆ. ೫ ಬಾರಿ ಪಾಕಿಸ್ತಾನಕ್ಕೆ ಜಯ ಹಾಗೂ ೨ ಪಂದ್ಯಗಳಲ್ಲಿ ಫಲಿತಾಂಶವಿಲ್ಲವಾಗಿದೆ.

ಭಾರತದ ಹಾದಿ…
ಸೂಪರ್ ೪ ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ. ಬಳಿಕ ಕ್ರಮವಾಗಿ ಮಂಗಳವಾರ ಶ್ರೀಲಂಕಾ ಮತ್ತು ಗುರುವಾರದಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ.

ಸೂಪರ್ ೪ ವೇಳಾಪಟ್ಟಿ:

ಸೆ.೦೪, ಭಾನುವಾರ: ಭಾರತ-ಪಾಕಿಸ್ತಾನ
ಸೆ.೦೬, ಮಂಗಳವಾರ: ಭಾರತ-ಶ್ರೀಲಂಕಾ
ಸೆ.೦೭, ಬುಧವಾರ: ಪಾಕಿಸ್ತಾನ-ಅಫ್ಘಾನಿಸ್ತಾನ
ಸೆ.೦೮, ಗುರುವಾರ: ಭಾರತ-ಅಫ್ಘಾನಿಸ್ತಾನ
ಸೆ.೦೯, ಶುಕ್ರವಾರ: ಶ್ರೀಲಂಕಾ-ಪಾಕಿಸ್ತಾನ

ಫೈನಲ್: ಸೆ.೧೧ ಭಾನುವಾರ, ದುಬೈ ನಲ್ಲಿ ನಡೆಯಲಿದೆ.

andolanait

Recent Posts

ರಾಜ್ಯದಲ್ಲಿ ಮುಂದಿನ 5 ದಿನ ತಾಪಮಾನ ಭಾರೀ ಏರಿಕೆ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ತಾಪಮಾನ ಗಣನೀಯವಾಗಿ ಏರಿಕೆಯಾಗಲಿದೆ…

58 mins ago

ಇಂದು, ನಾಳೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಹಾಗೂ ನಾಳೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

1 hour ago

ನೆತನ್ಯಾಹು 1 ಫೋನ್‌ ಕಾಲ್‌ ಎಲ್ಲವನ್ನೂ ಹಾಳು ಮಾಡಿತು: ಇರಾನ್‌ ಹೊಸ ಬಾಂಬ್‌

ಟೆಹರಾನ್:‌ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್‌…

2 hours ago

ಕಾರು-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಬೈಕ್‌ ಸವಾರ ಸಾವು

ಟಿ.ನರಸೀಪುರ: ಕಾರು ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಟಿ ನರಸೀಪುರ-ಮೈಸೂರು…

2 hours ago

ಓಂಕಾರ್ ವಲಯದಲ್ಲಿ ಹತೋಟಿಗೆ ಬಾರದ ಒಂಟಿ ಸಲಗದ ಉಪಟಳ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ಓಂಕಾರ್ ವ್ಯಾಪ್ತಿಯಲ್ಲಿ ಒಂಟಿ ಸಲಗದ ದಾಂಧಲೆ ಮಿತಿಮೀರಿದ್ದು. ರೈತರ ಅಪಾರ ಪ್ರಮಾಣದ…

2 hours ago

ಬಂಡೀಪುರದಲ್ಲಿ ಸಫಾರಿಗರಿಗೆ ಹುಲಿ ದರ್ಶನ: ಜಿಂಕೆ ಬೇಟೆಯಾಡಿದ ಸೀಳು ನಾಯಿ

ಗುಂಡ್ಲುಪೇಟೆ: ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದವರಿಗೆ ವ್ಯಾಘ್ರ ದರ್ಶನದ ಜೊತೆಗೆ ಜಿಂಕೆಯನ್ನು ಬೇಟೆಯಾಡಿದ ಸೀಳುನಾಯಿ ದರ್ಶನವಾಗಿದ್ದು, ಅಪರೂಪದ…

3 hours ago