ನ್ಯೂಯಾರ್ಕ್: ಟೀಂ ಇಂಡಿಯಾದ ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ತುತ್ತಾದ ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿದೆ. ಆ ಮೂಲಕ ಪಾಕಿಸ್ತಾನ ಟೂರ್ನಿಯ ಲೀಗ್ ಪಂದ್ಯದಲ್ಲಿ ಸತತ ಎರಡನೇ ಪಂದ್ಯ ಸೋಲುವ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.
ಇಲ್ಲಿನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ 19ನೇ ಪಂದ್ಯದಲ್ಲಿ ಭಾರತ 19 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ ಪಾಕ್‌ಗೆ 120 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಕಲೆಹಾಕುವ ಮೂಲಕ 6 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆರಂಭದಲ್ಲಿ ಮಳೆ ಅಡ್ಡಿಯೊಂದಿಗೆ ತಡವಾಗಿ ಶುರುವಾದ ಇನ್ನಿಂಗ್ಸ್‌ನಲ್ಲಿ ತಂಡದ ಪರ ರಿಷಭ್ ಪಂತ್ ಹೊರತುಪಡಿಸಿ ಉಳಿದ ಯಾವ ಆಟಗಾರರೂ ಸಹ ದೊಡ್ಡ ಆಟವನ್ನಾಡಲಿಲ್ಲ.
ಟೀಮ್ ಇಂಡಿಯಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ಎಡವಿದರು. ಕೊಹ್ಲಿ 4 (3) ರನ್ ಗಳಿಸಿದರೆ, ರೋಹಿತ್ 13 (12)ರನ್ ಗಳಿಸಿದರು. ಇನ್ನುಳಿದಂತೆ ರಿಷಭ್ ಪಂತ್ 42 (31) ರನ್, ಅಕ್ಷರ್ ಪಟೇಲ್ 20 (18) ರನ್, ಸೂರ್ಯಕುಮಾರ್ ಯಾದವ್ 7 (8) ರನ್, ಶಿವಮ್ ದುಬೆ 3 (9) ರನ್, ಹಾರ್ದಿಕ್ ಪಾಂಡ್ಯ 7 (12) ರನ್, ರವೀಂದ್ರ ಜಡೇಜಾ ಗೋಲ್ಡನ್ ಡಕ್‌ಔಟ್, ಅರ್ಷ್‌ದೀಪ್ ಸಿಂಗ್ 9 (13) ರನ್, ಜಸ್‌ಪ್ರೀತ್ ಬುಮ್ರಾ ಗೋಲ್ಡನ್ ಡಕ್‌ಔಟ್ ಮತ್ತು ಮೊಹಮ್ಮದ್ ಸಿರಾಜ್ ಅಜೇಯ 7 (7) ರನ್ ಕಲೆಹಾಕಿದರು.
ಪಾಕಿಸ್ತಾನದ ಪರ ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಆಮೀರ್ 2 ವಿಕೆಟ್ ಮತ್ತು ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದರು.
ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಕಣಕ್ಕಿಳಿದರು. ಬಾಬರ್ 13 (10) ರನ್, ಮೊಹಮ್ಮದ್ ರಿಜ್ವಾನ್ 31(44) ರನ್ ಬಾರಿಸಿ ಔಟಾದರು. ಈ ಪಂದ್ಯದಲ್ಲಿಯೂ ಕೂಡಾ ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಉಸ್ಮಾನ್ ಖಾನ್ 13(15) ರನ್, ಫಕರ್ ಜಮಾನ್ 13(8) ರನ್, ಇಮಾದ್ ವಾಸೀಮ್ 15(23) ರನ್, ಶದಾಬ್ ಖಾನ್ 4(7) ರನ್ ಇಫ್ತಿಕರ್ ರೆಹಮಾನ್ 5(9) ರನ್ ಗಳಿಸಿದರು. ಕೊನೆಯಲ್ಲಿ ನಸೀಮ್ ಶಾ ಹಾಗೂ ಶಾಹೀನ್ ಶಾ ಅಫ್ರಿದಿ ಓಟಾಗದೇ ಕ್ರಮವಾಗಿ 10(4) ರನ್ ಹಾಗೂ 0(1) ರನ್ ಗಳಿಸಿದರು ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜಸ್‌ಪ್ರಿತ್ ಬುಮ್ರಾ 3 ವಿಕೆಟ್, ಹಾರ್ದಿಕ್ ಪಾಂಡ್ಯ 2 ವಿಕೆಟ್ ಹಾಗೂ ಅರ್ಶ್‌ದೀಪ್ ಸಿಂಗ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದು ಮಿಂಚಿದರು.
ಪಂದ್ಯ ಶ್ರೇಷ್ಠ: ಜಸ್‌ಪ್ರಿತ್ ಬುಮ್ರಾ
ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…
ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…
ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…
ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…