ಕ್ರೀಡೆ

ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹ್ವಾಗ್‌ ಕಿಡಿ

ಅಹಮದಾಬಾದ್: 2023ರ ಐಪಿಎಲ್ ಮುಗಿದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ ಅವರು ಮೋಹಿತ್ ಶರ್ಮಾ ಅವರ ಎಸೆತಗಳನ್ನು ಸಿಕ್ಸ್ ಮತ್ತು ಫೋರ್ ಹೊಡೆದು ತಂಡಕ್ಕೆ ಜಯ ತಂದಿತ್ತರು.

ಈ ಬಗ್ಗೆ ಮಾತನಾಡಿದ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್‌, ಈ ಸೋಲಿಗೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ದೂರಿದ್ದಾರೆ.

“ಕೆಲವರು ಚೆನ್ನಾಗಿ ಬೌಲಿಂಗ್ ಮಾಡುವಾಗ ಮತ್ತು ಯಾರ್ಕರ್‌ ಎಸೆಯುತ್ತಿರುವಾಗ, ನೀವು ಯಾಕೆ ಹೋಗಿ ಅವನೊಂದಿಗೆ ಮಾತನಾಡುತ್ತೀರಿ? ಬ್ಯಾಟರ್‌ಗೆ 2 ಬಾಲ್ ನಲ್ಲಿ 10 ಬೇಕು, ಈ ವೇಳೆ ಯಾರ್ಕರ್‌ ಹಾಕಬೇಕು ಎಂದು ಬೌಲರ್ ಗೆ ತಿಳಿದಿದೆ. ಹಾಗಾದರೆ ನೀವು ಅವನ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಒಂದು ವೇಳೆ ಮೋಹಿತ್ ರನ್‌ ನೀಡುತ್ತಿದ್ದರೆ ಆಗ ಅವರು ಹೋಗಿ ಒಂದು ಮಾತು ಹೇಳಬಹುದಿತ್ತು, ಆದರೆ ಬೌಲರ್ ತನ್ನ ಕೆಲಸವನ್ನು ಮಾಡುತ್ತಿರುವಾಗ ನೀವು ಬೇಗನೆ ಓವರ್ ಅನ್ನು ಪೂರ್ಣಗೊಳಿಸಲು ಬಯಸುತ್ತೀರಿ” ಎಂದು ಸೆಹ್ವಾಗ್‌ ಹೇಳಿದರು.
ಸೆಹ್ವಾಗ್‌ ಮಾತ್ರವಲ್ಲದೆ ಸುನಿಲ್ ಗಾವಸ್ಕರ್ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಟೀಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲರ್ ಮೋಹಿತ್ ಲಯ ತಪ್ಪಿಸಿದರು ಎಂದು ಗಾವಸ್ಕರ್ ದೂರಿದ್ದಾರೆ.
andolanait

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

7 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

9 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

9 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

9 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

10 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

10 hours ago