ಕ್ರೀಡೆ

WTC final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

ಲಂಡನ್: ಐಪಿಎಲ್ ಹವಾ ಮುಗಿದು ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗುತ್ತಿದೆ. ಜೂನ್ 7ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳೂ ಫೈನಲ್ ಪಂದ್ಯದಲ್ಲಿ ಆಡಲಿದೆ. ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಗ್ಗೆ ಹೆಚ್ಚು ಗಮನ ಹರಿಸಲಿದೆ ಎಂದು ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಪೂಜಾರ ಅವರು ಆಸೀಸ್ ವಿರುದ್ಧ ಯಾವುದೇ ತಂಡಕ್ಕಿಂತ ಹೆಚ್ಚು ರನ್ ಮತ್ತು ಶತಕಗಳನ್ನು ಗಳಿಸಿದ್ದರಿಂದ ಆಸೀಸ್‌ ಗೆ ಕಂಟಕವಾಗಿದ್ದಾರೆ. ಆಸೀಸ್ ವಿರುದ್ಧ ಆಡಿದ 24 ಟೆಸ್ಟ್‌ಗಳಲ್ಲಿ ಪೂಜಾ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಕೂಡಾ ಆಸ್ಟ್ರೇಲಿಯಾ 24 ಟೆಸ್ಟ್ ಪಂದ್ಯಗಳಲ್ಲಿ 1979 ರನ್ ಗಳಿಸಿದ್ದಾರೆ.

ಪಂದ್ಯದಲ್ಲಿ ಭಾರತದ ಅವಕಾಶಗಳಿಗೆ ಇಬ್ಬರೂ ಪ್ರಮುಖರು. ಆಸ್ಟ್ರೇಲಿಯಾ ತಂಡವು ಅವರನ್ನು ಬೇಗನೆ ಔಟ್ ಮಾಡಲು ಯೋಜಿಸುತ್ತಿದೆ ಎಂದು ಪಾಂಟಿಂಗ್ ಐಸಿಸಿ ರಿವ್ಯೂ ವಿಡಿಯೋದಲ್ಲಿ ಹೇಳಿದರು.

“ಆಸ್ಟ್ರೇಲಿಯನ್ ತಂಡವು ವಿರಾಟ್ ಬಗ್ಗೆ ಮಾತನಾಡುತ್ತದೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಪೂಜಾರ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಅವರಿಬ್ಬರ ಬಗ್ಗೆ ಮಾತ್ರ” ಎಂದು ಪಾಂಟಿಂಗ್ ಹೇಳಿದ್ದಾರೆ.

“ಪೂಜಾರ ಅವರು ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಅವರ ಪಾಲಿಗೆ ಕಂಟಕವಾಗಿದ್ದಾರೆ. ಈ ವಿಕೆಟ್ ಆಸ್ಟ್ರೇಲಿಯಾದ ಪಿಚ್‌ನಂತೆಯೇ ಇರುತ್ತದೆ. ಹಾಗಾಗಿ ಅವನನ್ನು ಬೇಗನೆ ಔಟ್ ಮಾಡಲು ಆಸೀಸ್ ತಂಡ ಬಯಸುತ್ತದೆ” ಎಂದಿದ್ದಾರೆ.

andolanait

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

2 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

2 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

2 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

2 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

2 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

2 hours ago