ಕ್ರೀಡೆ

ಎಂ.ಎಸ್.ಧೋನಿಯಿಂದ ಆಟೋಗ್ರಾಫ್ ಪಡೆದ ಸುನಿಲ್ ಗವಾಸ್ಕರ್: ಹೇಗಿತ್ತು ಆ ಕ್ಷಣ

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಕೊನೆಯ ಲೀಗ್ ಪಂದ್ಯವಾಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋಲನುಭವಿಸಿದೆ. ಆದರೆ ತವರಿನ ಕೊನೆಯ ಲೀಗ್ ಪಂದ್ಯವಾದ ಕಾರಣ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ಟೇಡಿಯಂನತ್ತ ಚೆಂಡುಗಳನ್ನು ಎಸೆದರು.

ಧೋನಿ ಮತ್ತು ಸಿಎಸ್‌ಕೆ ಆಟಗಾರರು ಚೆಪಾಕ್‌ ನಲ್ಲಿ ಸುತ್ತುತ್ತಿರುವಾಗ ಪ್ರಸ್ತುತ ಐಪಿಎಲ್ 2023 ರ ಕಾಮೆಂಟರಿ ತಂಡದ ಭಾಗವಾಗಿರುವ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಿಎಸ್‌ ಕೆ ನಾಯಕ ಧೋನಿ ಬಳಿ ಓಡಿ ಬಂದು ಅವರ ಶರ್ಟ್‌ ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಂಡರು.

ಅದೇ ಕ್ಷಣದ ನಂತರ ಧೋನಿ ಮತ್ತು ಗವಾಸ್ಕರ್ ಹಗ್ ಮಾಡಿಕೊಂಡರು.

ತನ್ನ ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರವನ್ನು ಪಡೆದ ನಂತರ, ಗವಾಸ್ಕರ್ ಅವರು ಕಾಮೆಂಟರಿಯಲ್ಲಿ “ದಯವಿಟ್ಟು ಉಳಿದ ಪಂದ್ಯಗಳಿಗೆ ನನಗೆ ಹೊಸ ಗುಲಾಬಿ ಶರ್ಟ್ ನೀಡಿ” ಎಂದು ಹೇಳಿದರು.

andolanait

Recent Posts

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

47 mins ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

53 mins ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

1 hour ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

1 hour ago

ಮಂಡ್ಯದಲ್ಲಿ ಶ್ರೀಪುರುಷ ಹೆಸರಿನಲ್ಲಿ “ಕನ್ನಡ ಭವನ”

ಮಂಡ್ಯ : ಸಕ್ಕರೆ ನಗರ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ, ರಾಷ್ಟ್ರ ಹಾಗೂ…

1 hour ago

ಮಂಡ್ಯ | ಬುದನೂರು ಉತ್ಸವದಲ್ಲಿ 3 ದಿನ ಹೆಲಿ ಟೂರಿಸಂ

ಮಂಡ್ಯ : ಫೆ.21, 22ರಂದು ನಡೆಯಲಿರುವ ಬೂದನೂರು ಉತ್ಸವ-2026ರ ಪ್ರಯುಕ್ತ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮೂರು ದಿನಗಳ ಹೆಲಿ ಟೂರಿಸಂ…

2 hours ago