ನವದೆಹಲಿ: ಇಂಗ್ಲೆಂಡ್ ತಂಡದ ವೇಗಿ ಒಲ್ಲಿ ರಾಬಿನ್ಸನ್‌ಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ತಿರುಗೇಟು ನೀಡಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆಷಸ್ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜ ಅವರ ಎದುರು ಒಲ್ಲಿ ರಾಬಿನ್ಸನ್ ಅತಿಯಾದ ವರ್ತನೆ ತೋರಿದ್ದರು. ಇದನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದರು.
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಶತಕ ಬಾರಿಸಿದ್ದರು. 140 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಪೆವಿಲಿಯನ್‌ಗೆ ತೆರಳುತ್ತಿದ್ದ ಖವಾಜ ಅವರನ್ನು ರಾಬಿನ್ಸನ್ ಸ್ಲೆಡ್ಜ್ ಮಾಡಿದ್ದರು. ಇದರಿಂದಾಗಿ ಒಲ್ಲಿ ರಾಬಿನ್ಸನ್ ಅವರ ವರ್ತನೆ ಕೆಲವರಿಗೆ ಇಷ್ಟವಾಗಿರಲಿಲ್ಲ.
ಸುದ್ದಿಗೋಷ್ಟೀಯಲ್ಲಿ ಇದೇ ಪ್ರೆಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಒಲ್ಲಿ ರಾಬಿನ್ಸನ್, ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡರು. ಈ ಹಿಂದೆ ಆಷಸ್ ಟೆಸ್ಟ್ ಸರಣಿಗಳಲ್ಲಿಯೂ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಇತರೆ ಆಟಗಾರರು ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಸ್ಲೆಡ್ಜ್ ಮಾಡಿದ್ದರು. ಅದೇ ರೀತಿ ಇದೀಗ ನಾನು ಮಾಡಿದ್ದೇನೆ ಅಷ್ಟೆ ಎಂದು ಹೇಳಿದ್ದರು.
ರಾಬಿನ್ಸನ್ ಇನ್ನೂ ಬುದ್ದಿ ಕಲಿತಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ರಿಕಿ ಪಾಂಟಿಂಗ್, ಆಷಸ್ ಇತಿಹಾಸದ ಮೇಲೆ ಹೆಚ್ಚಿನ ಗಮನ ಹರಿಸುವುದಕ್ಕಿಂತ ಇಂಗ್ಲೆಂಡ್ ಆಟಗಾರ, ತಮ್ಮ ವೈಯಕ್ತಿಕ ಪ್ರದರ್ಶನದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲಿ ಎಂದು ತಿರುಗೇಟು ನೀಡಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಇನ್ನೂ ಆಸ್ಟ್ರೇಲಿಯಾ ತಂಡದಿಂದ ಪೂರ್ಣ ಪ್ರಮಾಣದ ಸವಾಲು ಎದುರಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಕಠಿಣ ಸವಾಲು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಐಸಿಸಿ ರಿವ್ಯೂವ್ ಪಾಡ್‌ಕಾಸ್ಟ್‌ನಲ್ಲಿ ಪ್ರತಿಕ್ರಿಯಿಸಿದ ರಿಕಿ ಪಾಂಟಿಂಗ್, “ಈಗಾಗಲೇ ಒಂದು ವಾರ ಕಳೆದಿದೆ. ಆದರೆ, ಒಲ್ಲಿ ರಾಬಿನ್ಸನ್ ಮಾತ್ರ ಇನ್ನೂ ಬುದ್ದಿ ಕಲಿತಿಲ್ಲ. ಅವರು ತುಂಬಾ ನಿಧಾನವಾಗಿ ಕಲಿಯುವ ವ್ಯಕ್ತಿ ಎಂಬಂತೆ ಕಾಣುತ್ತಿದೆ,” ಎಂದು ಖಾರವಾಗಿ ಹೇಳಿದ್ದಾರೆ.
ಒಲ್ಲಿ ರಾಬಿನ್ಸನ್‌ಗೆ ಬುದ್ದಿ ಹೇಳಿದ ಪಾಂಟಿಂಗ್: “ಸ್ಲೆಡ್ಜಿಂಗ್ ಬಗ್ಗೆ ಉತ್ತರ ನೀಡಲು ಪ್ರಯತ್ನಿಸುವಾಗ ಅವರು ನನ್ನ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದಿದ್ದಾರೆ. ಆದರೆ, ಬಾತುಕೋಳಿಯನ್ನು ಪುನಃ ನೀರಿಗೆ ಬಿಡಬೇಕಾಗಿದೆ. ಅವರು ಒಂದು ಕಡೆ ಕುಳಿತು ನನ್ನ ಬಗ್ಗೆ ಯೋಚಿಸುತ್ತಿದ್ದಾರೆಂದರೆ ಇದರ ಬಗ್ಗೆ ಅಚ್ಚರಿಯೇನಿಲ್ಲ. ತಮ್ಮ ವೈಯಕ್ತಿಕ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ಬದಲು, 15 ವರ್ಷಗಳಲ್ಲಿ ನಾನು ಏನು ಮಾಡಿದ್ದೇನೆಂಬುದನ್ನು ಯೋಚಿಸುತ್ತಿದ್ದಾರೆ,” ಎಂದು ರಿಕಿ ಪಾಂಟಿಂಗ್ ಇಂಗ್ಲೆಂಡ್ ವೇಗಿಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…
ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ. ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…
ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಈ…
ಬೆಳಗಾವಿ: 532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ…
ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…