ಬೆಂಗಳೂರು: ಮಳೆಯಿಂದ ಅಡ್ಡಿಯಾದ ಕೊನೆಯ ಲೀಗ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಮಹಾರಾಜ ಟ್ರೋಫಿಯಲ್ಲಿ ಜಯದೊಂದಿಗೆ ನಿರ್ಗಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಅಲ್ಪ ಮೊತ್ತವನ್ನು ಬೆಂಬತ್ತಿದ ಶಿವಮೊಗ್ಗ ತಂಡ ಲಗುಬಗನೆ ವಿಕೆಟ್ ಕಳೆದುಕೊಂಡಿತ್ತು. 15 ರನ್ ಗಳಿಸುವಷ್ಟರಲ್ಲಿಯೇ 2 ವಿಕೆಟ್ ಕಳೆದುಕೊಂಡಿತ್ತು, ಆಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ನಂತರ ಶಿವಮೊಗ್ಗಕ್ಕೆ 54 ರನ್ ಗುರಿ ನೀಡಲಾಯಿತು. ಶಿವಮೊಗ್ಗ 6.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 54 ರನ್ ಗುರಿ ತಲುಪಿತು. ಗುಲ್ಬರ್ಗ ಮಿಸ್ಟಿಕ್ಸ್ ಈಗಾಗಲೇ ಪ್ಲೇ ಆಫ್ ತಲುಪಿದ್ದರಿಂದ ಈ ಸೋಲು ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಶಿವಮೊಗ್ಗಕ್ಕೆ ಸಾಧಾರಣ ಗುರಿ ನೀಡಿದ ಗುಲ್ಬರ್ಗ:
ಒಂದು ತಂಡ ಈಗಾಗಲೇ ಪ್ಲೇ ಆಫ್ ಹಂತ ತಲುಪಿದೆ. ಇನ್ನೊಂದು ತಂಡ ಗೆದ್ದರೂ ಪ್ರಯೋಜವಿಲ್ಲವೆಂಬ ಸ್ಥಿತಿಯಲ್ಲಿದೆ. ಆದ್ದರಿಂದ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಶಿವಮೊಗ್ಗ ಸ್ಟ್ರೈಕರ್ಸ್ ನಡುವಿನ ಪಂದ್ಯದ ಫಲಿತಾಂಶದ ಬಗ್ಗೆ ವೀಕ್ಷಕರಿಗೆ ಕುತೂಹಲ ಇಲ್ಲದಿಂದದ್ದರೂ ಆಟದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆ. ಗೌತಮ್ ನಾಯಕತ್ವದ ಶಿವಮೊಗ್ಗ ಸ್ಟ್ರೈಕರ್ಸ್‌ನ ಬೌಲರ್‌ಗಳು ಇದುವರೆಗೂ ನೀಡಿರದ ಉತ್ತಮ ಪ್ರದರ್ಶನ ನೀಡಿದರು. ಪ್ರತಿಯೊಂದು ಪಂದ್ಯದಲ್ಲೂ ಮಿಂಚಿದ್ದ ಗುಲ್ಬರ್ಗದ ಬ್ಯಾಟ್ಸ್‌ಮನ್‌ಗಳು ಶಿವಮೊಗ್ಗದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಜಸ್ವತ್ ಆಚಾರ್ಯ (22) ಮತ್ತು ರಿತೇಶ್ ಭಟ್ಕಳ್ (38) ಗುಲ್ಬರ್ಗ ಸ್ಟ್ರೈಕರ್ಸ್ ಪರ ದಾಖಲಾದ ಗರಿಷ್ಠ ರನ್. 17 ಓವರ್‌ಗೆ 83 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿದ್ದ ಗುಲ್ಬರ್ಗಕ್ಕೆ ಚೇತರಿಸುವಂತೆ ಬ್ಯಾಟಿಂಗ್ ಮಾಡಿದ್ದು ರಿತೇಶ್ ಭಟ್ಕಳ್. 24 ಎಸೆತಗಳನ್ನೆದುರಿಸಿದ ರಿತೇಶ್ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 38 ರನ್ ಸಿಡಿಸಿ ಸಾಧಾರಣ ಮೊತ್ತದಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು. ಅಂತಿಮವಾಗಿ ಗುಲ್ಬರ್ಗ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 ರನ್ ಗಳಿಸಿತು.
ನಾಯಕ ಕೃಷ್ಣಪ್ಪ ಗೌತಮ್ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 1 ವಿಕೆಟ್ ಗಳಿಸಿದರು, ಉತ್ತಮ್ ಅಯ್ಯಪ್ಪ ಹಾಗೂ ಕೆ.ಸಿ, ಕಾರಿಯಪ್ಪ ತಲಾ 2 ವಿಕೆಟ್ ಗಳಿಸಿದರೆ. ಡಿ. ಅವಿನಾಶ್ 24 ರನ್‌ಗೆ 3 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್ :
ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 (ಜಸ್ವತ್ ಆಚಾರ್ಯ 22, ರಿತೇಶ್ ಭಟ್ಕಳ್ 38, ಅವಿನಾಶ್ 24ಕ್ಕೆ 3, ಉತ್ತಮ್ ಅಯ್ಯಪ್ಪ 23ಕ್ಕೆ 2, ಕೆ.ಸಿ. ಕಾರಿಯಪ್ಪ 22ಕ್ಕೆ 2)ಶಿವಮೊಗ್ಗ ಸ್ಟ್ರೈಕರ್ಸ್: 6.3 ಓವರ್‌ಗಳಲ್ಲಿ 4 ವಿಕೆಟ್‌ಗೆ 54 (ಕೆ. ಸಿದ್ಧಾರ್ಥ್ 18, ಡಿ, ಅವಿನಾಶ್ 11* ವಿದ್ವತ್ ಕಾವೇರಪ್ಪ 22ಕ್ಕೆ 1)
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…