ನವದೆಹಲಿ : ಟೀಂ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಅಪಘಾತಕ್ಕೀಡಾದ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ.
ಉತ್ತರಾಖಂಡದ ನೈನಿತಾಲ್‌ನ ಕಣಿವೆಯೋದರ ಬಳಿ ಕಾರೋಂದು ಅಫಘಾತಕ್ಕೀಡಾಗಿದೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ಶಮಿಯವರು ಇದನ್ನು ಗಮನಿಸಿದ್ದು, ಆಪಘಾತಕ್ಕೆ ಸಿಲುಕಿ ಒದ್ದಾಡುತ್ತಿದ್ದವರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಕ್ಷಣೆಯ ವಿಡಿಯೋವನ್ನು ಶಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರು ತುಂಬಾ ಅದೃಷ್ಟಶಾಲಿ. ದೇವರು ಅವರಿಗೆ 2ನೇ ಜಿವನವನ್ನು ನೀಡಿದ್ದಾನೆ. ಅವರ ಕಾರು ಮೈನಿತಾಲ್ ಬಳಿ ಇರುವ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಬಳಿ ಬಂದು ಬಿದ್ದಿತ್ತು. ನಾವು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ. ಇಂದು ಒಬ್ಬರ ಜೀವವನ್ನು ರಕ್ಷಿಸಿದ ಖುಷಿ ನನಗಿದೆ ಎಂದು ಬರೆದುಕೊಂಡಿದ್ದಾರೆ.
ಶಮಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಳಿಯ ಬಣ್ಣದ ಕಾರೊಂದು ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಅಪಘಾತಕ್ಕೆ ಸಿಲುಕಿದ್ದವರನ್ನು ಶಮಿ ರಕ್ಷಣೆ ಮಾಡಿ ಉಪಚರಿಸುತ್ತಿದ್ದಾರೆ. ಶಮಿ ಅವರ ಈ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಮಿ ಅವರು ನನಗೆ ಡ್ರೈವಿಂಗ್ ಎಂದರೆ ಅಚ್ಚುಮೆಚ್ಚು. ಬೈಕ್ ಮತ್ತು ಕಾರ್ ಓಡಿಸುವುದೆಂದರೆ ನನಗೆ ಬಹಳಾ ಇಷ್ಟ. ಆದರೇ ಟೀಂ ಇಂಡಿಯಗಾಗಿ ಆಟವಾಡಿದ ನಂತರ ಡ್ರೈವಿಂಗ್ ವೇಳೆ ನಾನೇನಾದರೂ ಗಾಯಗೊಂಡರೆ ಎಂಬ ಭಯ ಕಾಡಿತ್ತು. ಅಂದಿನಿಂದ ಬೈಕ್ ಓಡಿಸುವುದನ್ನು ಬಿಟ್ಟೆ ಎಂದು ಹೇಳಿಕೊಂಡಿದ್ದರು.
ಶಮಿ ಅವರು ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸಾಧನೆಯ ಶಿಖರವೇರಿದ ಅಪ್ರತಿಮ ಪ್ರತಿಭೆ. ಬದುಕಿನ ಏಳು ಬೀಳಿನಿಂದ ನೊಂದು ಸಾವಿನ ಹಾದಿ ಹಿಡಿಯಲು ಹೊರಟಿದ್ದ ಶಮಿ ಇದೀಗ ತನ್ನ ಅತ್ಯದ್ಭುತ ಪ್ರತಿಭೆಯಿಂದಲೇ ಹೊಸ ಜೀವನ ಕಂಡುಕೊಂಡಿದ್ದಾರೆ.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…