ಕ್ರೀಡೆ

ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನ ಖಚಿತಪಡಿಸಿದ ಸಾನಿಯಾ ಮಿರ್ಜಾ

ನವದೆಹಲಿ: ಭಾರತೀಯ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನವನ್ನು ದೃಢಪಡಿಸಿದ್ದಾರೆ. ಮತ್ತು ತನ್ನ ಮಾಜಿ ಪತಿಯ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಕ್ರಿಕೆಟಿಗ ಶೋಯೆಬ್ ಮಲಿಕ್ ತಮ್ಮದೇ ದೇಶದ ಜನಪ್ರಿಯ ನಟಿ ಸನಾ ಜಾವೇದ್ ಜೊತೆಗೆ ವಿವಾಹವಾಗಿರುವುದಾಗಿ ಘೋಷಿಸಿದ ನಂತರ ಸಾನಿಯಾ ಮತ್ತು ಮಲ್ಲಿಕ್‌ ವಿಚ್ಛೇದನ ಪಡೆದಿದ್ದಾರೆ ಎಂದು ಸಾನಿಯಾ ಮಿರ್ಜಾ ಅವರ ಕುಟುಂಬ ಖಚಿತಪಡಿಸಿದೆ.

ಈ ಇಬ್ಬರು ಸೆಲೆಬ್ರಿಟಿಗಳ ವಿವಾಹ 14 ವರ್ಷಗಳ ಹಿಂದೆ ಸುದ್ದಿ ಮಾಡಿದಂತೆ ವಿಚ್ಛೇದನ ಕೂಡ ಭಾರೀ ಸದ್ದು ಮಾಡಿದೆ. 41 ವರ್ಷದ ಮಲಿಕ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸನಾ ಅವರೊಂದಿಗಿನ ಮದುವೆಯಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

“ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಬಹಿರಂಗವಾಗಿ ಮಾತನಾಡದೆ ಆದಷ್ಟು ದೂರವಿಟ್ಟಿದ್ದರು. ಶೋಯೆಬ್ ಮತ್ತು ಸಾನಿಯಾ ಹಲವು ತಿಂಗಳುಗಳ ಹಿಂದೆ ವಿಚ್ಛೇದನ ಪಡೆದಿರುವ ವಿಷಯವನ್ನು ತಿಳಿಸುವ ಅವಶ್ಯಕತೆ ಇಂದು ಸೃಷ್ಟಿಯಾಗಿದೆ. ಶೋಯೆಬ್ ಅವರ ಹೊಸ ಜೀವನ ಪಯಣಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಸುತ್ತಾರೆ!,” ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಸಾನಿಯಾ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ನಾವು ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಯಾವುದೇ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಅವರ ಜೀವನದ ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಸಹ ಕುಟುಂಬ ವರ್ಗ ಮನವಿ ಮಾಡಿಕೊಂಡಿದೆ.

ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ಏಪ್ರಿಲ್ 2010 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಲಿಕ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 37 ವರ್ಷದ ಸಾನಿಯಾ ಮಿರ್ಜಾ ಅವರನ್ನು ಅನ್‌ಫಾಲೋ ಮಾಡಿದಾಗ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೆಲವು ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ರೆಕ್ಕೆಪುಕ್ಕ ಸಿಕ್ಕಿತ್ತು.

ಇವರಿಗೆ ಐದು ವರ್ಷದ ಇಜಾನ್ ಎಂಬ ಮಗನಿದ್ದು, ಪ್ರಸ್ತುತ ಮಗು ತಾಯಿ ಸಾನಿಯಾ ಮಿರ್ಜಾ ಅವರೊಂದಿಗೆ ವಾಸವಾಗಿದೆ. ಶೋಯೆಬ್ ಮಲಿಕ್ ವಿವಾಹದ ಘೋಷಣೆ ಮಾಡಿದ ಒಂದು ದಿನಕ್ಕೆ ಮೊದಲು ಸಾನಿಯಾ ಮಿರ್ಜಾ ಬೇಸರದ ಸಂಗತಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

“ಮದುವೆ ಕಷ್ಟ, ವಿಚ್ಛೇದನ ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸ್ಥೂಲಕಾಯತೆ ಕಷ್ಟ. ಫಿಟ್ ಆಗಿರುವುದು ಕಷ್ಟ, ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ. ಸಾಲದಲ್ಲಿರುವುದು ಕಷ್ಟ. ಆರ್ಥಿಕವಾಗಿ ಶಿಸ್ತಿನಲ್ಲಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ, ಯಾವುದೇ ಸಂವಹನ ಕಷ್ಟ. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ನಾನು ಯಾವಾಗಲೂ ಕಠಿಣವಾಗಿರುತ್ತೇನೆ. ಆದರೆ ನಾವು ನಮ್ಮ ಕಷ್ಟವನ್ನು ಆರಿಸಿಕೊಳ್ಳಬಹುದು. ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಸಾನಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

andolanait

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

5 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

6 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

8 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

10 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

10 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

10 hours ago