ನವದೆಹಲಿ: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನವನ್ನು ದೃಢಪಡಿಸಿದ್ದಾರೆ. ಮತ್ತು ತನ್ನ ಮಾಜಿ ಪತಿಯ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಕ್ರಿಕೆಟಿಗ ಶೋಯೆಬ್ ಮಲಿಕ್ ತಮ್ಮದೇ ದೇಶದ ಜನಪ್ರಿಯ ನಟಿ ಸನಾ ಜಾವೇದ್ ಜೊತೆಗೆ ವಿವಾಹವಾಗಿರುವುದಾಗಿ ಘೋಷಿಸಿದ ನಂತರ ಸಾನಿಯಾ ಮತ್ತು ಮಲ್ಲಿಕ್ ವಿಚ್ಛೇದನ ಪಡೆದಿದ್ದಾರೆ ಎಂದು ಸಾನಿಯಾ ಮಿರ್ಜಾ ಅವರ ಕುಟುಂಬ ಖಚಿತಪಡಿಸಿದೆ.
ಈ ಇಬ್ಬರು ಸೆಲೆಬ್ರಿಟಿಗಳ ವಿವಾಹ 14 ವರ್ಷಗಳ ಹಿಂದೆ ಸುದ್ದಿ ಮಾಡಿದಂತೆ ವಿಚ್ಛೇದನ ಕೂಡ ಭಾರೀ ಸದ್ದು ಮಾಡಿದೆ. 41 ವರ್ಷದ ಮಲಿಕ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸನಾ ಅವರೊಂದಿಗಿನ ಮದುವೆಯಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
“ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಬಹಿರಂಗವಾಗಿ ಮಾತನಾಡದೆ ಆದಷ್ಟು ದೂರವಿಟ್ಟಿದ್ದರು. ಶೋಯೆಬ್ ಮತ್ತು ಸಾನಿಯಾ ಹಲವು ತಿಂಗಳುಗಳ ಹಿಂದೆ ವಿಚ್ಛೇದನ ಪಡೆದಿರುವ ವಿಷಯವನ್ನು ತಿಳಿಸುವ ಅವಶ್ಯಕತೆ ಇಂದು ಸೃಷ್ಟಿಯಾಗಿದೆ. ಶೋಯೆಬ್ ಅವರ ಹೊಸ ಜೀವನ ಪಯಣಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಸುತ್ತಾರೆ!,” ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.
ಸಾನಿಯಾ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ನಾವು ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಯಾವುದೇ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಅವರ ಜೀವನದ ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಸಹ ಕುಟುಂಬ ವರ್ಗ ಮನವಿ ಮಾಡಿಕೊಂಡಿದೆ.
ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ಏಪ್ರಿಲ್ 2010 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಲಿಕ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 37 ವರ್ಷದ ಸಾನಿಯಾ ಮಿರ್ಜಾ ಅವರನ್ನು ಅನ್‌ಫಾಲೋ ಮಾಡಿದಾಗ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೆಲವು ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ರೆಕ್ಕೆಪುಕ್ಕ ಸಿಕ್ಕಿತ್ತು.
ಇವರಿಗೆ ಐದು ವರ್ಷದ ಇಜಾನ್ ಎಂಬ ಮಗನಿದ್ದು, ಪ್ರಸ್ತುತ ಮಗು ತಾಯಿ ಸಾನಿಯಾ ಮಿರ್ಜಾ ಅವರೊಂದಿಗೆ ವಾಸವಾಗಿದೆ. ಶೋಯೆಬ್ ಮಲಿಕ್ ವಿವಾಹದ ಘೋಷಣೆ ಮಾಡಿದ ಒಂದು ದಿನಕ್ಕೆ ಮೊದಲು ಸಾನಿಯಾ ಮಿರ್ಜಾ ಬೇಸರದ ಸಂಗತಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
“ಮದುವೆ ಕಷ್ಟ, ವಿಚ್ಛೇದನ ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸ್ಥೂಲಕಾಯತೆ ಕಷ್ಟ. ಫಿಟ್ ಆಗಿರುವುದು ಕಷ್ಟ, ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ. ಸಾಲದಲ್ಲಿರುವುದು ಕಷ್ಟ. ಆರ್ಥಿಕವಾಗಿ ಶಿಸ್ತಿನಲ್ಲಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ, ಯಾವುದೇ ಸಂವಹನ ಕಷ್ಟ. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ನಾನು ಯಾವಾಗಲೂ ಕಠಿಣವಾಗಿರುತ್ತೇನೆ. ಆದರೆ ನಾವು ನಮ್ಮ ಕಷ್ಟವನ್ನು ಆರಿಸಿಕೊಳ್ಳಬಹುದು. ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಸಾನಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…
ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…
ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…
ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…
ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…
ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…