ಹೈದರಾಬಾದ್: ಮುಂಬರುವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ.
‘ಭಾರತದ ಮುಂಚೂಣಿ ಕ್ರೀಡಾಪಟು, ಯೂತ್ ಐಕಾನ್, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮತ್ತು ಎಲ್ಲ ಅಡೆತಡೆಗಳನ್ನು ಮೀರಿ ಆಡಿದ ಆಟಗಾರ್ತಿ, ಮೈದಾನದ ಒಳಗೂ ಹೊರಗೂ ಚಾಂಪಿಯನ್ ಸಾನಿಯಾ ಮಿರ್ಜಾ, ಅವರನ್ನು ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ’ಎಂದು ಆರ್‌ಸಿಬಿ ಟ್ವಿಟರ್ ಪುಟದಲ್ಲಿ ಬರೆಯಲಾಗಿದೆ. ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಹರಾಜಿನಲ್ಲಿ ಆರ್‌ಸಿಬಿ ತಂಡ ಸ್ಮೃತಿ ಮಂದಾನ ಅವರಿಗೆ, ₹3.4 ಕೋಟಿ ಕೊಟ್ಟು ಖರೀದಿಸಿತ್ತು. ಸೋಪಿಯಾ ಡಿವೈನ್, ರೇಣುಕಾ ಸಿಂಗ್ ಮುಂತಾದ ಆಟಗಾರರು ತಂಡದಲ್ಲಿದ್ದಾರೆ. ದುಬೈನಲ್ಲಿ ತನ್ನ ಟೆನಿಸ್ ವೃತ್ತಿ ಜೀವನದ ಕೊನೆಯ ಪಂದ್ಯಾವಳಿಯನ್ನು ಆಡಲಿರುವ ಮಿರ್ಜಾ, ಆರ್‌ಸಿಬಿ ಫ್ರಾಂಚೈಸಿಯ ಭಾಗವಾಗಲಿದ್ದಾರೆ. ಸಾನಿಯಾ ಮಿರ್ಜಾ, ಕ್ರಿಕೆಟ್ ಅನ್ನು ಬಹಳ ಪ್ರೀತಿಸುತ್ತಾರೆ ಮತ್ತು ಆಗಾಗ್ಗೆ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದರು.
ರಾಮನಗರ: ಲಾರಿ ಹಾಗೂ ಕಾರಿನ ನಡುವೆ ಭೀಖರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಕನಕಪುರ…
ಕುವೈತ್ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ಮಾಡಿದೆ. ಕೊಲ್ಲಿಯಾದ್ಯಂತ ಇರಾನ್ ತನ್ನ ದಾಳಿಯನ್ನು ಹೆಚ್ಚಿಸುತ್ತಿದ್ದು, ಕುವೈತ್ ಅಂತರಾಷ್ಟ್ರೀಯ…
ಮಂಡ್ಯ: ಪಕ್ಕದ ಊರಿಗೆ ಪೂಜೆಗೆಂದು ಹೋದ ಅರ್ಚಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ…
ಮೈಸೂರು ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯದಲ್ಲಿ (ವಿಟಿಯು ಕಾಲೇಜು ಬಳಿ) ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ…
ತಾಣ..ಬಾಣ ! ಬೇಕಿದ್ದರೆ ಬಿಟ್ಟೇವು ಒಂದಲ್ಲ, ಎರಡು ದಿನ.. ಶಾಲಾ ತಾಣ! ಬಿಟ್ಟಿರುವುದು ಹೇಗೆ ? ಸಾಮಾಜಿಕ ಜಾಲತಾಣ ಎಂಬುದು…
ಮೈಸೂರಿನ ಬೋಗಾದಿ -ಗದ್ದಿಗೆ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ದಾಸನಕೊಪ್ಪಲು ಬಸ್ ನಿಲ್ದಾಣದ ಬಳಿ ಎರಡು ಕಡೆಯೂ ಒಂದು…