ಜೋಹಾನ್ಸ್ ಬರ್ಗ್ : ಮಿಸ್ಟರ್ ೩೬೦ ಎಂಬ ಖ್ಯಾತಿಯೊಂದಿಗೆ ಇಡೀ ಕ್ರಿಕೆಟ್ ಜಗತ್ತಿಗೆ ಚಿರಪರಿಚಿತರಾದವರು ಸೌಥ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್. ಹರಿಣ ನಾಯಕ ಎಬಿಡಿ ೨೦೧೮ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದರು. ಬಳಿಕ ಟಿ೨೦ ಲೀಗ್, ಪ್ರಾಂಚೈಸಿ ತಂಡಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ಮಿಸ್ಟರ್ ೩೬೦, ೨೦೨೨ ರಲ್ಲಿ ಐಪಿಎಲ್ ನಿಂದಲೂ ದೂರವಾಗಿದ್ದರು.
ತಾವು ಕಳೆದೆರೆಡು ವರ್ಷಗಳಿಂದ ಕ್ರಿಕೆಟ್ ಆಡುವುದನ್ನು ನಿಲ್ಲಿಸಿರುವ ಕುರಿತು ಈಗ ಮನಬಿಚ್ಚಿ ಮಾತನಾಡಿರುವ ಎಬಿ ಡಿ ವಿಲಿಯರ್ಸ್ ಅವರು ಇದೇ ಕಾರಣಕ್ಕಾಗಿ ತಾವು ಕ್ರಿಕೆಟ್‌ನಿಂದ ದೂರವಾಗಿದ್ದಾಗಿ ಅವರು ತಿಳಿಸಿದ್ದಾರೆ.
ಕಳೆದ ೨ ವರ್ಷಗಳಿಂದ ನನ್ನ ವೃತ್ತಿ ಜೀವನದಲ್ಲಿ ದೃಷ್ಠಿಮಾಂದ್ಯತೆಯೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಇದರಿಂದಾಗಿಯೇ ಕ್ರಿಕೆಟ್ ಜೀವನದಿಂದ ಬೇಗ ನಿವೃತ್ತಿ ಪಡೆದುಕೊಂಡೆ ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಎಬಿ ಡಿ ವಿಲಿಯರ್ಸ್ ತಾವು ಕ್ರಿಕೆಟ್ ತೊರೆಯಲು ನಿಜವಾದ ಕಾರಣವನ್ನು ತಿಳಿಸಿದ್ದಾರೆ.
ʼwisden cricket monthlyʼ ಪತ್ರಿಕೆಯೊಂದಿಗೆ ಮಾತನಾಡಿರುವ ಎಬಿಡಿ, ನನ್ನ ಕಿರಿಯ ಪುತ್ರ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಒದ್ದಿದ್ದರಿಂದ ನನ್ನ ಕಣ್ಣುಗುಡ್ಡೆ ಹೊರಬಂದು ನಾನು ದೃಷ್ಠಿಮಾಂದ್ಯತೆಗೆ ಒಳಗಾದೆ. ಇದರಿಂದಾಗಿ ನನ್ನ ಬಲಗಣ್ಣು ದೃಷ್ಠಿಯನ್ನು ಕಳೆದುಕೊಳ್ಳಲು ಆರಂಭಿಸಿತು. ಕೇವಲ ಒಂದೇ ಕಣ್ಣಿನಲ್ಲಿ ಕ್ರಿಕೆಟ್ ಆಡಬೇಕಾಯಿತು ಎಂದು ನೈಜ್ಯ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ನನಗೆ ಶಸ್ತ್ರಚಿಕಿತ್ಸೆ ಮುಗಿದ ನಂತರ, ‘ಈ ಸ್ಥಿತಿಯಲ್ಲಿ ನೀವು ಜಗತ್ತಿನಲ್ಲಿ ಹೇಗೆ ಕ್ರಿಕೆಟ್ ಆಡುತ್ತೀರಿ?’ ಎಂದು ವೈದ್ಯರು ಪ್ರಶ್ನಿಸಿದರು. ಆದರೆ, ಅದೃಷ್ಟವಶಾತ್ ನನ್ನ ಎಡಗಣ್ಣು ಕಳೆದ ಎರಡು ವರ್ಷಗಳ ವೃತ್ತಿ ಜೀವನದಲ್ಲಿ ಯೋಗ್ಯವಾಗಿಯೇ ಕೆಲಸ ಮಾಡಿತು” ಎಂದೂ ಅವರು ತಿಳಿಸಿದ್ದಾರೆ.
ಇದಲ್ಲದೆ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದನ್ನು ಹಿಂಪಡೆಯದಿರುವಲ್ಲಿ ಕೋವಿಡ್ ಕೂಡಾ ಪ್ರಮುಖ ಪಾತ್ರ ವಹಿಸಿತು. ೨೦೧೫ ರ ವಿಶ್ವಕಪ್ ಸೆಮಿಫೈನಲ್ ನಲ್ಲಿನ ಸೋಲು ನನಗೆ ಭಾರಿ ನೋವುಂಟು ಮಾಡಿತು ಹಾಗೂ ಅದರಿಂದ ಚೇತರಿಸಿಕೊಳ್ಳಲು ನನಗೆ ಸಾಕಷ್ಟು ಸಮಯ ಹಿಡಿಯಿತು ಎಂದು ಬಹಿರಂಗಪಡಿಸಿದ್ದಾರೆ.
ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…
ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್ ಠಾಣೆ ವ್ಯಾಪ್ತಿಯ…
ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…
ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ…
ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…
ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…