ಕ್ರೀಡೆ

ಜನವರಿ 5ರಿಂದ ರಣಜಿ ಟ್ರೋಫಿ ಟೂರ್ನಿ

ನವದೆಹಲಿ: ದೇಶಿ ಕ್ರಿಕೆಟ್‌ ‘ರಾಜ’ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದ ಜನವರಿ 5ರಿಂದ ಆರಂಭವಾಗಲಿದೆ.

2023–24ನೇ ಸಾಲಿನ ದೇಶಿ ಕ್ರಿಕೆಟ್‌ ರುತು ಇದೇ ವರ್ಷದ ಜೂನ್ 28ರಂದು ಆರಂಭವಾಗಲಿದೆ. ಮೊದಲಿಗೆ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ನಂತರ ದೇವಧರ್ ಟ್ರೋಫಿ ಲಿಸ್ಟ್ ಎ (ಜುಲೈ 24ರಿಂದ ಆಗಸ್ಟ್ 3), ಇರಾನಿ ಕಪ್ (ಅಕ್ಟೋಬರ್ 1 ರಿಂದ 5), ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪುರುಷರ ಟಿ20 ಕ್ರಿಕೆಟ್ (ಅ. 16 ರಿಂದ ನ.6) ಮತ್ತು ವಿಜಯ್ ಹಜಾರೆ ಟ್ರೋಫಿ (ನ 23 ರಿಂದ ಡಿ 15) ನಡೆಯಲಿವೆ.

ಇದರ ನಂತರ 2024ರ ಜನವರಿ 5 ರಿಂದ ಮಾರ್ಚ್ 14ರವರೆಗೆ ಒಟ್ಟು 70 ದಿನಗಳವರೆಗೆ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ. ಪ್ಲೇಟ್ ಗುಂಪಿನ ಲೀಗ್ ಪಂದ್ಯಗಳು ಜ. 5 ರಿಂದ ಫೆ. 5ರವರೆಗೆ ಆಯೋಜನೆಗೊಳ್ಳಲಿವೆ. ನಾಕೌಟ್ ಸುತ್ತಿನ ಪಂದ್ಯಗಳು ಫೆ. 9ರಿಂದ 22ರವರೆಗೆ ನಡೆಯುತ್ತವೆ.

ಪ್ಲೇಟ್ ಗುಂಪಿನಲ್ಲಿ ಆರು ತಂಡಗಳೂ ಸ್ಪರ್ಧಿಸಲಿವೆ. ಈ ಪೈಕಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಈ ಗುಂಪಿನ ಸೆಮಿಫೈನಲ್‌ನಲ್ಲಿ ಆಡಲಿವೆ. ಫೈನಲ್ ಪ್ರವೇಶಿಸುವ ಎರಡು ತಂಡಗಳೂ ಎಲೀಟ್ ಗುಂಪಿಗೆ ಬಡ್ತಿ ಹೊಂದಲಿವೆ.

ಎಲೀಟ್ ಗುಂಪಿನಲ್ಲಿ ತಲಾ ಎಂಟು ತಂಡಗಳು ಆಡಲಿವೆ. ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಕ್ವಾರ್ಟರ್‌ಫೈನಲ್‌ ಪ್ರವೇಶಿಸುತ್ತವೆ. ಕೊನೆಯ ಎರಡು ಸ್ಥಾನ ಪಡೆದ ತಂಡಗಳು ಪಾಯಿಂಟ್ಸ್, ಬೋನಸ್ ಪಾಯಿಂಟ್ಸ್, ಜಯ ಮತ್ತು ರನ್‌ ಸರಾಸರಿಯ ಆಧಾರದಲ್ಲಿ 2024–25ರ ರುತುವಿನ ಪ್ಲೇಟ್ ಗುಂಪಿಗೆ ಸೇರ್ಪಡೆಯಾಗುತ್ತವೆ.

ಮಹಿಳೆಯರ ರಾಷ್ಟ್ರೀಯ ಸೀನಿಯರ್ ಟಿ20 ಕ್ರಿಕೆಟ್ ಟೂರ್ನಿಯು ಅಕ್ಟೋಬರ್ 19 ರಿಂದ ನವೆಂಬರ್ 9ರವರೆಗೆ ನಡೆಯಲಿದೆ. ಅಂತರ ವಲಯ ಟಿ20 ಟ್ರೋಫಿ ಟೂರ್ನಿಯು ನವೆಂಬರ್ 24ರಿಂದ ಡಿಸೆಂಬರ್ 4ರವರೆಗೆ ಆಯೋಜನೆಗೊಂಡಿದೆ.

ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯು ಜನವರಿ 4 ರಿಂದ 26ರವರೆಗೆ ನಡೆಯಲಿದೆ.

ಮುಖ್ಯಾಂಶಗಳು

* ಜೂನ್ 28ರಿಂದ ದೇಶಿ ಕ್ರಿಕೆಟ್ ಆರಂಭ

* ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಶುರುವಾಗಲಿದೆ.

* 2024ರ ಜನವರಿಯಲ್ಲಿ ರಣಜಿ ಟ್ರೋಫಿ ಟೂರ್ನಿ ಆರಂಭ

* ಒಟ್ಟು 70 ದಿನ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್

* ಪ್ಲೇಟ್ ಹಾಗೂ ಎಲೀಟ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

* ರಣಜಿ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸಲಿವೆ.

andolanait

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

5 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

5 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

6 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

7 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

10 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

11 hours ago