ಕ್ರೀಡೆ

ProKabaddi : ಚಾಂಪಿಯನ್ ಪಟ್ಟ ಅಲಂಕರಿಸಿದ ʼಜೈಪುರ ಪಿಂಕ್ ಪ್ಯಾಂಥರ್ಸ್ʼ

ಮುಂಬೈ: ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ರೋಚಕ ಫೈನಲ್​ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 33-29ರಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಬಾರಿಗೆ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಜಯಿಸಿತು.
ಫೈನಲ್​ ಹಣಾಹಣಿಯಲ್ಲಿ ವಿ ಅಜಿತ್, ಸುನಿಲ್ ಕುಮಾರ್ ಮತ್ತು ಅರ್ಜುನ್ ದೇಶ್ವಾಲ್ ಅವರು ತಲಾ 6 ಅಂಕ ಗಳಿಸಿ ಜೈಪುರ ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಪಂದ್ಯಾರಂಭದ ನಿಮಿಷಗಳಲ್ಲಿ ಪಂಕಜ್ ಮೋಹಿತ್​ ಅದ್ಭುತ ದಾಳಿ ನಡೆಸಿ ಪುಣೇರಿ ಪಲ್ಟನ್ 3-1 ಮುನ್ನಡೆ ನೀಡಿದ್ದರು. ಆದರೆ, ಜೈಪುರ ತಂಡ ಮರುಹೋರಾಟ ನಡೆಸಿ 3-3ರಿಂದ ಸಮಬಲ ಸಾಧಿಸಿತು. ಬಳಿಕ ಒಂಬತ್ತನೇ ನಿಮಿಷದ ವೇಳೆಗೆ ಪುಣೆ ತಂಡವು 5-4ರಲ್ಲಿ ಮುನ್ನಡೆಯಲ್ಲಿತ್ತು.ಆ ಬಳಿಕ, ವಿ ಅಜಿತ್ ತಮ್ಮ ಪರಾಕ್ರಮ ಪ್ರದರ್ಶಿಸತೊಡಗಿದ್ದರಿಂದ ಜೈಪುರವು 6-6ರಲ್ಲಿ ಸ್ಕೋರ್ ಸಮಗೊಳಿಸಿತು. ಎರಡೂ ಕಡೆಯಿಂದ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ನಬಿಬಕ್ಷ್ ಕ್ಷಿಪ್ರ ದಾಳಿ ಮತ್ತು ಟ್ಯಾಕಲ್ ಪಾಯಿಂಟ್ ಕಬಳಿಸಿ 16ನೇ ನಿಮಿಷದ ವೇಳೆಗೆ ಪುಣೆಗೆ 10-8ರಲ್ಲಿ ಮುನ್ನಡೆಗೆ ನೆರವಾದರು.

ಆದರೆ, 19ನೇ ನಿಮಿಷದಲ್ಲಿ ಪ್ಯಾಂಥರ್ಸ್​ನ ಅಜಿತ್‌ ಅವರು ಸಂಕೇತ್‌ ಸಾವಂತ್‌ ಮತ್ತು ಗೌರವ್‌ ಖತ್ರಿಯನ್ನು ಕ್ಯಾಚ್‌ ಔಟ್‌ ಮಾಡಿದರು. ವಿರಾಮದ ವೇಳೆಗೆ ಪ್ಯಾಂಥರ್ಸ್ 14-12ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಆದಿತ್ಯ ಶಿಂಧೆ ಅವರನ್ನು ಟ್ಯಾಕಲ್​ ಮಾಡಿದ ಪ್ಯಾಂಥರ್ಸ್ 22ನೇ ನಿಮಿಷದಲ್ಲಿ ಪಲ್ಟನ್ ತಂಡವನ್ನು ಆಲೌಟ್ ಮಾಡಿ 18-13 ಮುನ್ನಡೆ ಸಾಧಿಸಿತು. ಆದರೂ ಸಹ ಆಕಾಶ್ ಶಿಂಧೆ ಕೆಲ ಪಾಯಿಂಟ್ ರೈಡ್​ಗಳು ಹಾಗೂ ಅಜಿತ್​ರನ್ನು ಟ್ಯಾಕಲ್​ ಮಾಡಿದ ಪುಣೆ 17-18ರ ಸ್ಕೋರ್‌ನತ್ತ ತಲುಪಿತು. ಆದರೆ ಅಂಕುಶ್ ಅವರು ಆಕಾಶ್ ಶಿಂಧೆಯನ್ನು ಟ್ಯಾಕಲ್​ ಮಾಡಿ, ಪ್ಯಾಂಥರ್ಸ್ ಮುನ್ನಡೆಯನ್ನು ಹಿಗ್ಗಿಸಿದರು. ಕೆಲ ಹೊತ್ತಲ್ಲೇ ಆದಿತ್ಯ ಶಿಂಧೆ ಅವರು ಅಂಕುಶ್ ಮತ್ತು ಸಾಹುಲ್ ಕುಮಾರ್ ಅವರನ್ನು ಕ್ಯಾಚ್ ಔಟ್ ಮಾಡುವ ಮೂಲಕ ಪುಣೆ ತಂಡವನ್ನು 20-23 ಸ್ಕೋರ್​​ನತ್ತ ಕೊಂಡೊಯ್ದರು.ಬಳಿಕ 34ನೇ ನಿಮಿಷದಲ್ಲಿ 27-22ರಲ್ಲಿ ಮುನ್ನಡೆ ಕಾಯ್ದುಕೊಂಡ ಜೈಪುರ ತಂಡದ ನಾಯಕ ಸುನಿಲ್ ಕುಮಾರ್ ಒಂದೆರಡು ಅದ್ಭುತ ಟ್ಯಾಕಲ್ ಪಾಯಿಂಟ್‌ ದೋಚಿದರು. ಆದರೂ ಬೆಂಬಿಡದ ಪುಣೆ ತಂಡ 38ನೇ ನಿಮಿಷದಲ್ಲಿ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿ 25-29ರ ಸ್ಕೋರ್​ ತಲುಪಿತು
ನಂತರ, ಬಾದಲ್ ಸಿಂಗ್ ಅವರು ವಿ ಅಜಿತ್​​ರನ್ನು ಟ್ಯಾಕಲ್​ ಮಾಡಿದರೆ, ಆದಿತ್ಯ ಶಿಂಧೆ ಅವರು ಅದ್ಭುತ ರೈಡಿಂಗ್​ ಮಾಡಿದರು. ಆದರೆ ಪಂದ್ಯದ ಕೊನೆಯ ನಿಮಿಷಗಳಲ್ಲಿ ಪ್ಯಾಂಥರ್ಸ್ 31-29ರಲ್ಲಿ ಮುನ್ನಡೆ ಹೊಂದಿದ್ದಲ್ಲದೆ, ಪಲ್ಟಾನ್​ಗೆ ಅಂಕ ಗಳಿಸಲು ಕಡಿವಾಣ ಹಾಕುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದ ಅಂತಿಮ ಸೆಕೆಂಡ್​ಗಳಲ್ಲಿ ಸಮಯೋಚಿತ ಆಟವಾಡಿದ ಪ್ಯಾಂಥರ್ಸ್ ತಂಡ ಎರಡನೇ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿತು.

andolanait

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

14 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

14 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

15 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

15 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

16 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

19 hours ago