ಜಿಲ್ಲೆಗಳು

ನಿಗದಿಯಂತೆ ಆರಂಭವಾಗದ ಖರೀದಿ ನೋಂದಣಿ!

ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ನೋಂದಣಿ ಮರೆತ ಆಡಳಿತ …

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ೦ ಯೋಜನೆಯಡಿ ಭತ್ತ, ರಾಗಿ ಖರೀದಿಗಾಗಿ ಆರಂಭ ಗೊಳ್ಳಬೇಕಿದ್ದ ರೈತರ ಹೆಸರು ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಮೂರು ದಿನಗಳಾದರೂ ಇನ್ನೂ ಶುರುವಾಗಿಲ್ಲ!
ಸಾಫ್ಟ್ ವೇರ್ ಅಪ್‌ಡೇಟ್ ಸಮಸ್ಯೆ ಎದುರಾಗಿರುವುದು ಮಾತ್ರವಲ್ಲದೇ
ಖರೀದಿ ಏಜೆನ್ಸಿ ಪಡೆದಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ನಿಗದಿಯಂತೆ ಡಿ.೧೫ರಿಂದ ನೋಂದಣಿ ಪ್ರಾರಂಭಿಸಲಾಗಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಭತ್ತ , ರಾಗಿ ಖರೀದಿಗೆ ಸಂಬಂಧಿಸಿದ ನೊಂದಣಿ ಕೇಂದ್ರವನ್ನು ಗುರುವಾರದಿಂದಲೇ ತೆರೆಯುವುದಾಗಿ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ತಿಳಿಸಿತ್ತು.
ಹೀಗಾಗಿ ಜಿಲ್ಲೆಯ ಈ ಐದೂ ಕೇಂದ್ರಗಳಿಗೆ ರೈತರು ಬರತೊಡಗಿದ್ದು ನೊಂದಣಿ ಇನ್ನೂ ಆರಂಭ ಆಗದಿರುವುದನ್ನು ತಿಳಿದು ಅಸಮಾಧಾನ ಹೊರಹಾಕಿದ್ದಾರೆ.
ಗೊತ್ತುಪಡಿಸಿದ ದಿನದಿಂದ ಮಾಡಲಾಗದಿದ್ದರೆ ಯಾವಾಗಿನಿಂದ ನೋಂದಣಿ
ಮಾಡುತ್ತೇವೆ ಎಂಬುದನ್ನಾದರೂ ಕೊನೆ ಪಕ್ಷ ಪತ್ರಿಕೆಗಳ ಮೂಲಕ ಸಂಬಂಧಿ ಸಿದವರು ತಿಳಿಸಬೇಕಿತ್ತು. ಹಾಗೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಭತ್ತ, ರಾಗಿ ಮಾರಾಟ ಮಾಡುವ ರೈತರು ವಿನಾ ಕಾರಣ ಕೇಂದ್ರಗಳತ್ತ ಅಲೆದು ಬಂದು ಹೋಗುವಂತಾಗಿದೆ ಎಂದು ರೈತ ಜಯಣ್ಣ ತೀವ್ರ ಬೇಸರ ವ್ಯಕ್ತಪಡಿಸಿದರು.
೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ , ರಾಗಿಯ  ಕೊಯ್ಲನ್ನು ರೈತರು ಅದಾಗಲೇ ಕೈಗೆತ್ತಿಕೊಂಡಿದ್ದು ಬೆಂಬಲ ಬೆಲೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ ೨೦೪೦ ರೂ., ಗ್ರೇಡ್-ಎ ಭತ್ತ ಕ್ಕೆ೨೦೬೦ ರೂ., ರಾಗಿಗೆ ೩೫೭೮ ರೂ. ನಿಗದಿ ಪಡಿಸಲಾಗಿದೆ.
ಮುಕ್ತ  ಮಾರುಕಟ್ಟೆಯಲ್ಲೀಗ ಬೆಂಬಲ ಬೆಲೆಗಿಂತ ಧಾರಣೆ ಕಡಿಮೆ ಇದ್ದು ಖರೀದಿ ನೊಂದಣಿ ತಡ ಮಾಡಿದರೆ ರೈತರು ಕಾಯ್ದು ಕೂರುವ ಸಾಧ್ಯತೆ ತುಂಬಾ ಕಡಿಮೆ.
ಒಕ್ಕಣೆ ಸ್ಥಳದಲ್ಲೇ ಮಾರಾಟ ಮಾಡುವ ರೈತರೇ ಯಾವಾಗಲೂ ಹೆಚ್ಚು. ಸಾಕಷ್ಟು ಜಾಗ ಬೇಕಾಗುವುದರಿಂದ ಒಕ್ಕಣೆ ಮಾಡಿದ್ದನ್ನು ಸಂಗ್ರಹ ಮಾಡುವುದು ಕಷ್ಟದ ಕೆಲಸ. ಸಾಲಸೋಲದ ಹಂಗಿನಲ್ಲಿ ಇದ್ದ ರೈತರಂತೂ ಬೆಂಬಲ ಬೆಲೆ ಕಾಯ್ದು ಕೂರಲಾರರು. ಜಿಲ್ಲಾಡಳಿತ ಇದನ್ನರಿಯಬೇಕು.
ನೊಂದಣಿ ತಡವಾದಷ್ಟೂ ಈ ಉತ್ಪನ್ನಗಳು ಮಧ್ಯವರ್ತಿಗಳ ಪಾಲಾಗಿ ರೈತರಿಗೆ ನಷ್ಟ ಉಂಟಾಗುತ್ತದೆ ಎಂಬುದು ರೈತರ ಅನಿಸಿಕೆ.
ನೋಂದಣಿಯಾದ ಭತ್ತ, ರಾಗಿಯನ್ನು ಜ.೧ರಿಂದ ಮಾ. ೨೩ರವರೆಗೆ ಖರೀದಿಸುವುದಾಗಿ ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದ್ದು ನೋಂದಣಿಯನ್ನೇ ಹೀಗೆ ತಡ ಮಾಡಿದರೆ ಹೇಗೆ ಎಂಬುದು ಬೆಳೆಗಾರರ ಪ್ರಶ್ನೆ.


ತಾಂತ್ರಿಕ ಕಾರಣಗಳಿಂದ ಭತ್ತ, ರಾಗಿ ಖರೀದಿ ನೋಂದಣಿಯನ್ನು ನಿಗದಿಯಂತೆ ಡಿ.೧೫ರಿಂದ ಆರಂಭಿಸಲಾಗಿಲ್ಲ.ಡಿ.೧೯ರ ಸೋಮವಾರದಿಂದ ಜಿಲ್ಲೆಯ ಐದೂ ಕೇಂದ್ರಗಳಲ್ಲಿ ನೋಂದಣಿ ಆರಂಭಿಸಲಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
– ರವೀಂದ್ರ, ಜಿಲ್ಲಾ ವ್ಯವಸ್ಥಾಪಕರು, ಕ.ರಾ.ಸ.ಮಾ. ಮಂಡಳಿ.


ಭತ್ತ, ರಾಗಿಯನ್ನು ನೊಂದಣಿ ಮಾಡುತ್ತಿದ್ದಂತೆ ರೈತರಿಂದ ಖರೀದಿಸಬೇಕು. ಜ.೧ರಿಂದ ಖರೀದಿಸುವುದಾಗಿ ಜಿಲ್ಲಾಡಳಿತ ತಿಳಿಸಿದ್ದು ಕೊಯ್ಲು ಮಾಡಿರುವ ಉತ್ಪನ್ನವನ್ನು ಅಲ್ಲಿಯವರೆಗೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಈಗಿನ ಅಕಾಲಿಕ ಮಳೆ ಪರಿಸ್ಥಿತಿಯಲ್ಲಿ ತುಂಬಾ ಕಷ್ಟದ ಕೆಲಸ.
-ಬಸವಣ್ಣ, ರೈತ ಮುಖಂಡರು, ಹೊನ್ನೂರು.

andolanait

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

13 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

13 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

14 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

15 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

15 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

18 hours ago