ಮುಂಬೈ: ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ರೋಚಕ ಫೈನಲ್ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 33-29ರಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಬಾರಿಗೆ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಜಯಿಸಿತು.
ಫೈನಲ್ ಹಣಾಹಣಿಯಲ್ಲಿ ವಿ ಅಜಿತ್, ಸುನಿಲ್ ಕುಮಾರ್ ಮತ್ತು ಅರ್ಜುನ್ ದೇಶ್ವಾಲ್ ಅವರು ತಲಾ 6 ಅಂಕ ಗಳಿಸಿ ಜೈಪುರ ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಪಂದ್ಯಾರಂಭದ ನಿಮಿಷಗಳಲ್ಲಿ ಪಂಕಜ್ ಮೋಹಿತ್ ಅದ್ಭುತ ದಾಳಿ ನಡೆಸಿ ಪುಣೇರಿ ಪಲ್ಟನ್ 3-1 ಮುನ್ನಡೆ ನೀಡಿದ್ದರು. ಆದರೆ, ಜೈಪುರ ತಂಡ ಮರುಹೋರಾಟ ನಡೆಸಿ 3-3ರಿಂದ ಸಮಬಲ ಸಾಧಿಸಿತು. ಬಳಿಕ ಒಂಬತ್ತನೇ ನಿಮಿಷದ ವೇಳೆಗೆ ಪುಣೆ ತಂಡವು 5-4ರಲ್ಲಿ ಮುನ್ನಡೆಯಲ್ಲಿತ್ತು.ಆ ಬಳಿಕ, ವಿ ಅಜಿತ್ ತಮ್ಮ ಪರಾಕ್ರಮ ಪ್ರದರ್ಶಿಸತೊಡಗಿದ್ದರಿಂದ ಜೈಪುರವು 6-6ರಲ್ಲಿ ಸ್ಕೋರ್ ಸಮಗೊಳಿಸಿತು. ಎರಡೂ ಕಡೆಯಿಂದ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ನಬಿಬಕ್ಷ್ ಕ್ಷಿಪ್ರ ದಾಳಿ ಮತ್ತು ಟ್ಯಾಕಲ್ ಪಾಯಿಂಟ್ ಕಬಳಿಸಿ 16ನೇ ನಿಮಿಷದ ವೇಳೆಗೆ ಪುಣೆಗೆ 10-8ರಲ್ಲಿ ಮುನ್ನಡೆಗೆ ನೆರವಾದರು.
ಆದರೆ, 19ನೇ ನಿಮಿಷದಲ್ಲಿ ಪ್ಯಾಂಥರ್ಸ್ನ ಅಜಿತ್ ಅವರು ಸಂಕೇತ್ ಸಾವಂತ್ ಮತ್ತು ಗೌರವ್ ಖತ್ರಿಯನ್ನು ಕ್ಯಾಚ್ ಔಟ್ ಮಾಡಿದರು. ವಿರಾಮದ ವೇಳೆಗೆ ಪ್ಯಾಂಥರ್ಸ್ 14-12ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಆದಿತ್ಯ ಶಿಂಧೆ ಅವರನ್ನು ಟ್ಯಾಕಲ್ ಮಾಡಿದ ಪ್ಯಾಂಥರ್ಸ್ 22ನೇ ನಿಮಿಷದಲ್ಲಿ ಪಲ್ಟನ್ ತಂಡವನ್ನು ಆಲೌಟ್ ಮಾಡಿ 18-13 ಮುನ್ನಡೆ ಸಾಧಿಸಿತು. ಆದರೂ ಸಹ ಆಕಾಶ್ ಶಿಂಧೆ ಕೆಲ ಪಾಯಿಂಟ್ ರೈಡ್ಗಳು ಹಾಗೂ ಅಜಿತ್ರನ್ನು ಟ್ಯಾಕಲ್ ಮಾಡಿದ ಪುಣೆ 17-18ರ ಸ್ಕೋರ್‌ನತ್ತ ತಲುಪಿತು. ಆದರೆ ಅಂಕುಶ್ ಅವರು ಆಕಾಶ್ ಶಿಂಧೆಯನ್ನು ಟ್ಯಾಕಲ್ ಮಾಡಿ, ಪ್ಯಾಂಥರ್ಸ್ ಮುನ್ನಡೆಯನ್ನು ಹಿಗ್ಗಿಸಿದರು. ಕೆಲ ಹೊತ್ತಲ್ಲೇ ಆದಿತ್ಯ ಶಿಂಧೆ ಅವರು ಅಂಕುಶ್ ಮತ್ತು ಸಾಹುಲ್ ಕುಮಾರ್ ಅವರನ್ನು ಕ್ಯಾಚ್ ಔಟ್ ಮಾಡುವ ಮೂಲಕ ಪುಣೆ ತಂಡವನ್ನು 20-23 ಸ್ಕೋರ್‌ನತ್ತ ಕೊಂಡೊಯ್ದರು.ಬಳಿಕ 34ನೇ ನಿಮಿಷದಲ್ಲಿ 27-22ರಲ್ಲಿ ಮುನ್ನಡೆ ಕಾಯ್ದುಕೊಂಡ ಜೈಪುರ ತಂಡದ ನಾಯಕ ಸುನಿಲ್ ಕುಮಾರ್ ಒಂದೆರಡು ಅದ್ಭುತ ಟ್ಯಾಕಲ್ ಪಾಯಿಂಟ್ ದೋಚಿದರು. ಆದರೂ ಬೆಂಬಿಡದ ಪುಣೆ ತಂಡ 38ನೇ ನಿಮಿಷದಲ್ಲಿ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿ 25-29ರ ಸ್ಕೋರ್ ತಲುಪಿತು
ನಂತರ, ಬಾದಲ್ ಸಿಂಗ್ ಅವರು ವಿ ಅಜಿತ್ರನ್ನು ಟ್ಯಾಕಲ್ ಮಾಡಿದರೆ, ಆದಿತ್ಯ ಶಿಂಧೆ ಅವರು ಅದ್ಭುತ ರೈಡಿಂಗ್ ಮಾಡಿದರು. ಆದರೆ ಪಂದ್ಯದ ಕೊನೆಯ ನಿಮಿಷಗಳಲ್ಲಿ ಪ್ಯಾಂಥರ್ಸ್ 31-29ರಲ್ಲಿ ಮುನ್ನಡೆ ಹೊಂದಿದ್ದಲ್ಲದೆ, ಪಲ್ಟಾನ್ಗೆ ಅಂಕ ಗಳಿಸಲು ಕಡಿವಾಣ ಹಾಕುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದ ಅಂತಿಮ ಸೆಕೆಂಡ್ಗಳಲ್ಲಿ ಸಮಯೋಚಿತ ಆಟವಾಡಿದ ಪ್ಯಾಂಥರ್ಸ್ ತಂಡ ಎರಡನೇ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿತು.
ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…
ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಮತ್ತೊಮ್ಮೆ ದೊಡ್ಡ ಅಚ್ಚರಿ ಮೂಡಿಸಿದೆ. ಆತಿಥೇಯ ಶ್ರೀಲಂಕಾವನ್ನು ಆರ್.…
ಮೈಸೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಜತೆಗೆ 10ನೇ ಸ್ಥಾನದೊಳಗೆ ಬರಲು ಶ್ರಮಿಸಬೇಕು.…
ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…
ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ…
ಮಂಡ್ಯ : ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಫೆ.20ರ ಶುಕ್ರವಾರದಿಂದ ಮೂರು ದಿನಗಳ ಕಾಲ ಹೆಲಿ ಟೂರಿಸಂ (ಹೆಲಿಕಾಪ್ಟರ್ ಜಾಯ್…