ಕ್ರೀಡೆ

ಪ್ರೋ ಕಬಡ್ಡಿ ಲೀಗ್‌ ಸೀಸನ್‌10: ಗುಜರಾತ್‌ ಜೈಂಟ್ಸ್‌ಗೆ ಶುಭಾರಂಭ

ಅಹ್ಮದಾಬಾದ್‌ : ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌ ಸೀಸನ್‌ 10) 2023 ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ ಜಯಭೇರಿ ಬಾರಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಅರೆನಾ ಟ್ರಾನ್ಸ್‌ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 38-32 ಅಂತರದಿಂದ ಗೆಲುವು ದಾಖಲಿಸಿದರು.

ಗುಜರಾತ್‌ ರ ಸೋನು ಜಗ್ಲಾನ್‌ ಅವರು 11 ರೈಡ್‌ ಪಾಯಿಂಟ್‌ ತಂದುಕೊಡುವ ಮೂಲಕ ಗುಜರಾತ್‌ ಗೆಲುವಿಗೆ ಕಾರಣರಾದರು. ರಾಕೇಶ್‌ 5, ರೋಹಿತ್‌ ಗುಲಿಯಾ 4 ರೈಡ್‌ ಪಾಯಿಂಟ್‌ ತಂದುಕೊಟ್ಟರು.
ಇಸ್ಮಾಯಿಲ್‌ 3 ಟ್ಯಾಕಲ್‌ ಪಾಯಿಂಟ್‌ ಮತ್ತು 1 ಬೋನಸ್‌ ಪಾಯಿಂಟ್‌ ತಂದುಕೊಟ್ಟರು.

ಇತ್ತ ತೆಲುಗು ಟೈಟನ್ಸ್‌ ಪರ ಪವನ್‌ ಶೆರಾವತ್‌ 6 ರೈಡ್‌ ಪಾಯಿಂಟ್‌, 1 ಟ್ಯಾಕಲ್‌ ಮತ್ತು 4 ಬೋನಸ್‌ ಮೂಲಕ 11 ಪಾಯಿಂಟ್‌ ತಂದುಕೊಟ್ಟರು. ರಜನೀಶ್‌ ದಳಾಳ್‌ 5, ಸಂಜೀವಿನಿ 2 ಟ್ಯಾಕಪ್‌, 3 ಬೋನಸ್‌ ಮೂಲಕ 5 ಪಾಯಿಂಟ್‌, ರಾಬಿನ್‌ ಚೌಧರಿ 3 ಬೋನಸ್‌ ಪಾಯಿಂಟ್‌ ಪಡೆದರು.

40 ನಿಮಿಷಗಳ ಕಾದಾಟದಲ್ಲಿ ಆರಂಭದಿಂದಲೇ ಯಶಸ್ಸು ಪಡೆದ ಗುಜರಾತ್‌ ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿತು.

ಪ್ರೊ ಕಬಡ್ಡಿ ಲೀಗ್ 2023 ಯಲ್ಲಿ ಪಂದ್ಯವನ್ನು ಗೆದ್ದ ತಂಡಕ್ಕೆ 5 ಅಂಕಗಳನ್ನು ನೀಡಲಾಗುತ್ತದೆ, ಆದರೆ ಸೋತ ತಂಡಕ್ಕೆ 0 ಅಂಕಗಳನ್ನು ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಎರಡೂ ತಂಡಗಳಿಗೆ 3 ಅಂಕಗಳನ್ನು ನೀಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳು ಒಂದೇ ಅಂಕಗಳನ್ನು ಪಡೆದರೆ, ಉತ್ತಮ ಅಂಕಗಳನ್ನು ಹೊಂದಿರುವ ತಂಡವನ್ನು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲಾಗುತ್ತದೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆದ್ದ ತಂಡಕ್ಕೆ 3 ಕೋಟಿ ರೂ ಬಹುಮಾನ ನೀಡುತ್ತಾರೆ.
ರನ್ನರ್‌ಅಪ್‌ ತಂಡಕ್ಕೆ 1.8 ಕೋಟಿ ಬಹುಮಾನ
ಸೆಮಿಸ್‌ನಲ್ಲಿ ಸೋತ ತಂಡಗಳಿಗೆ (ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ) 90 ಲಕ್ಷ ಬಹುಮಾನ.
ಐದು ಮತ್ತು ಆರನೇ ಸ್ಥಾನಕ್ಕೆ 45 ಲಕ್ಷ ಬಹುಮಾನ ನೀಡಲಾಗುತ್ತದೆ.

andolanait

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

10 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

15 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

19 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

19 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

19 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

22 hours ago