ಕ್ರೀಡೆ

ಪ್ರಭಾಸ್‌ ನಟನೆಯ ಸಲಾರ್‌ ಮೊಲದ ದಿನದ ಗಳಿಕೆ 178 ಕೋಟಿ

ತೆಲುಗಿನ ಸ್ಟಾರ್‌ ನಟ ಪ್ರಭಾಸ್‌ ನಟನೆಯ, ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರ ಡಿಸೆಂಬರ್‌ 22 ರಂದು ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್‌ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.

ಸಲಾರ್‌ ಘರ್ಜನೆಗೆ ಹಲವಾರು ದಾಖಲೆಗಳು ಪುಡಿಪಡಿಯಾಗಿದ್ದು, ಈ ಚಿತ್ರ ಮೊಲದನೇ ದಿನ ಗಳಿಕೆಯಲ್ಲಿ ಬರೋಬ್ಬರಿ 178.7 ಕೋಟಿ ರೂಗಳನ್ನು ಬಾಚಿಕೊಂಡಿದೆ. ಈ ಬಗ್ಗೆ ಮಲಯಾಳಂ ನಟ ಪೃಥ್ವಿರಾಜ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತೊಮ್ಮ ಸಿನಿಮಾ ವಹಿವಾಟು ವಿಶ್ಲೇಷಕ ರಮೇಶ್‌ ಬಾಲಾ ಅವರು ಸಹಾ ಸಾಮಾಜಿಕ ಮಾಧ್ಯಮದಲ್ಲಿ ಸಲಾರ್‌ ವಹಿವಾಟು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಲಾರ್‌ ಕೇವಲ ಭಾರತ ಮಾತ್ರವಲ್ಲದೇ ಯುರೋಪ್‌, ಅಮೇರಿಕಾ, ಆಸ್ಟ್ರೇಲಿಯಾ, ಅರಬ್‌ ದೇಶಗಳು ಸೇರಿದಂತೆ ಹಲವು ದೇಶಗಳಲ್ಲಿ ಭರ್ಜರಿ ಓಪನಿಂಗ್‌ ಪಡದುಕೊಂಡಿದೆ.

ಭಾರತದಲ್ಲಿ ಸಲಾರ್‌ ಮೊದಲ ದಿನ 95 ಕೋಟಿ ವಹಿವಾಟು ನಡೆಸಿದೆ. ಈ ಪೈಕಿ ತೆಲುಗಿನಲ್ಲಿ ಶೇ 80 ರಷ್ಟು ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 70 ಕೋಟಿ, ಕರ್ನಾಟಕದಲ್ಲಿ 12 ಕೋಟಿ, ಕೇರಳದಲ್ಲಿ 5 ಕೋಟಿ ಕಲೆಕ್ಷನ್‌ ಮಾಡಿದೆ.

ಶಾರುಖ್‌ ಖಾನ್‌ ನಟನೆಯ ಪಠಾಣ್‌, ಜವಾನ್‌ ಮತ್ತು ರಣಬೀರ್‌ ಕಪೂರ್‌ ನಟನೆಯ ಅನಿಮಲ್‌ ಸೋಲಿಸಿ ಈ ವರ್ಷದ ಅತಿದೊಡ್ಡ ಓಪನಿಂಗ್‌ ಪಡೆದ ಸಿನಿಮಾ ಎಂಬ ಖ್ಯಾತಿ ಪಡೆದಿದೆ.

ಭಾರತದಲ್ಲಿ ಪಠಾಣ್‌ 57 ಕೋಟಿ, ಜವಾನ್‌ 75ಕೋಟಿ, ಅನಿಮಲ್‌ 63 ಕೋಟಿ ಗಳಿಸಿತ್ತು. ಆದರೆ ಸಲಾರ್‌ ಮೊಲದ ದಿನದ ಗಳಿಕೆಯಲ್ಲಿ 95 ಕೋಟಿ ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

ಹೊಂಬಾಳೆ ಫಿಲ್ಮಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ಮುಖ್ಯ ಭೂಮಿಕೆಯಲ್ಲಿ ಪ್ರಭಾಸ್‌, ಪೃಥ್ವಿರಾಜ್‌, ಶೃತಿ ಹಾಸನ್‌ ಇದ್ದಾರೆ. ಕೆಜಿಎಫ್‌ ತಂಡವೇ ಇಲ್ಲಿಯೂ ಇದೆ. ರವಿ ಬಸ್ರೂರ್‌ ಸಂಗೀತ ನೀಡಿದರೇ, ಭೂವನ್‌ ಗೌಡ ಛಾಯಾಗ್ರಹಣವಿದೆ. ಇನ್ನೂ ಪ್ರಶಾತ್‌ ನೀಲ್‌ ಸಲಾರ್‌ ಚಿತ್ರ ನಿರ್ದೇಶಿಸಿದ್ದಾರೆ.

https://x.com/PrithviOfficial/status/1738488526155751659?s=20

andolanait

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

12 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

12 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

19 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

19 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

19 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

19 hours ago