ಕ್ರೀಡೆ

ಸ್ಮೃತಿ ಜೊತೆ ಮದುವೆ ಮುಂದೂಡಿಕೆ : ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್‌

ಮುಂಬೈ : ಬಾಲಿವುಡ್-ಕ್ರಿಕೆಟ್‌ನ ಅತ್ಯಂತ ಚರ್ಚಿತ ಪ್ರೇಮಕಥೆಗೆ ಒಂದೇ ದಿನದಲ್ಲಿ ಎಲ್ಲವೂ ತಲೆಕೆಳಗಾಯಿತು! ನವೆಂಬರ್ 23ಕ್ಕೆ ಸಂಗ್ಲಿಯಲ್ಲಿ ಭರ್ಜರಿಯಾಗಿ ನಡೆಯಬೇಕಿದ್ದ ಸ್ಮೃತಿ ಮಂಧಾನ-ಪಲಾಸ್ ಮುಚ್ಛಲ್ ಮದುವೆಯನ್ನು ಕೇವಲ ಗಂಟೆಗಳ ಮೊದಲು ರದ್ದುಗೊಳಿಸಲಾಯಿತು. ಕಾರಣ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಮದುವೆಯ ದಿನವೇ ಗಂಭೀರ ಹೃದಯಾಘಾತ! ಆ ದಿನದಿಂದ ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ “ಮದುವೆ ರದ್ದಾ?”, “ಬ್ರೇಕಪ್ ಆಯ್ತಾ?” ಎಂಬ ಪ್ರಶ್ನೆಗಳ ಸುರಿಮಳೆ.

ಇದೇ ಮೊದಲ ಬಾರಿಗೆ, ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಲಾಸ್ ಮುಚ್ಛಲ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಕಪ್ಪು ಹೂಡಿ, ಕಪ್ಪು ಗಾಗಲ್ಸ್, ಮುಖದಲ್ಲಿ ಯಾವುದೇ ಭಾವವಿಲ್ಲದೆ, ಶಾಂತವಾಗಿ ನಡೆದು ಹೋದ ಆ ಒಂದು ನಿಮಿಷದ ವೀಡಿಯೋ ಈಗ ವೈರಲ್! ಪಪಾರಾಜಿಗಳು “ಪಲಾಸ್ ಭಾಯ್, ಏನಾಯ್ತು ಸರ್?” ಎಂದು ಕೂಗಿದರೂ ಅವರು ಸಣ್ಣ ನಗು ಮಾತ್ರ ಬೀರಿ ಸೈಲೆಂಟ್ ಆಗಿ ಕಾರಿಗೆ ಹತ್ತಿ ಹೊರಟರು. ಆ ಒಂದು ನೋಟದಲ್ಲಿ ಸಾವಿರ ಕಥೆಗಳು ಅಡಗಿವೆ ಎನ್ನುತ್ತಿವೆ ಸೋಶಿಯಲ್‌ ಮಿಡಿಯಾದ ಕಾಮೆಂಟ್‌ಗಳು.

ಇನ್ನೊಂದೆಡೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ-ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪಲಾಸ್ ತನ್ನ ಪ್ರೊಫೈಲ್‌ನಲ್ಲಿ ಇನ್ನೂ ಸ್ಮೃತಿ ಜೊತೆಗಿನ ಪ್ರೀ-ವೆಡ್ಡಿಂಗ್ ಚಿತ್ರಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದಲೇ ಅಭಿಮಾನಿಗಳಿಗೆ “ಇವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ” ಎಂಬ ಭರವಸೆ ಮೂಡಿದೆ.

ಇದನ್ನು ಓದಿ: ಬುಮ್ರಾ, ಮಂದಾನಗೆ ಬಿಸಿಸಿಐ ಗೌರವ

ಆದರೆ ಟ್ವಿಸ್ಟ್ ಇಲ್ಲಿಗೆ ಮುಗಿಯಲಿಲ್ಲ! ರೆಡ್ಡಿಟ್‌ನಲ್ಲಿ ಪಲಾಸ್‌ಗೆ ಸಂಬಂಧಿಸಿದ ಕೆಲವು “ಚಾಟ್ ಸ್ಕ್ರೀನ್‌ಶಾಟ್‌ಗಳು” ಸೋರಿಕೆಯಾಗಿ ಬಾಂಬ್ ಸಿಡಿದಂತಾಗಿದೆ. ಡ್ಯಾನ್ಸ್ ಕೊರಿಯೋಗ್ರಾಫರ್, ಮಾಡೆಲ್‌ಗಳೊಂದಿಗಿನ ಸಂದೇಶಗಳು ಎಂದು ಹೇಳಲಾದ ಆ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ. ಆದರೆ ಪಲಾಸ್‌ ಕುಟುಂಬಸ್ಥರು “ಇದೆಲ್ಲ ಫೇಕ್, ದಯವಿಟ್ಟು ಗಾಸಿಪ್‌ಗೆ ಕಿವಿಗೊಡಬೇಡಿ” ಎಂದು ಕೋರಿದ್ದಾರೆ.

ಈ ನಡುವೆ ಆಸ್ಟ್ರೇಲಿಯಾದಿಂದ ವಾಪಸ್ ಬಂದ ಸ್ಮೃತಿಯ ಬೆಸ್ಟ್ ಫ್ರೆಂಡ್ ಜೆಮಿಮಾ ರಾಡ್ರಿಗೆಸ್ ನೇರವಾಗಿ ಸ್ಮೃತಿ ಮನೆಗೆ ತೆರಳಿ ಸ್ಮೃತಿಯನ್ನು ಆಲಿಂಗನ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಕ್ಷಣವಾಗಿ ಮಾರ್ಪಟ್ಟಿದೆ.

ಈಗ ಎಲ್ಲರ ಕಣ್ಣು ಒಂದೇ ಕಡೆ – ಈ ರೊಮಾಂಟಿಕ್-ಡ್ರಾಮಾಟಿಕ್ ಕಥೆಯ ಮುಂದೇನು? ಮದುವೆ ಮತ್ತೆ ನಡೆಯಲಿದೆಯೇ? ಎಂಬ ಸುದ್ದಿಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಇರಾನ್ ಇಸ್ರೇಲ್ ಸಂಘರ್ಷ ತೈಲ ಬೆಲೆ ಚಿನ್ನದ ಬೆಲೆ ಏರಿಕೆ ..?

ಟೆಹರಾನ್‌: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ…

17 mins ago

ಕೊಡಗು| ಬೆಟ್ಟತ್ತೂರು ಬಳಿ ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ

ಕೊಡಗು: ಆನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್‌ ಎಂಬುವವರ ಪುತ್ರಿ ಪೂಜಾ…

31 mins ago

ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಇಲ್ಲ: ಡಿಎಂಕೆ ಸ್ಪಷ್ಟ ಸಂದೇಶ

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ…

49 mins ago

ಚನ್ನಪಟ್ಟಣದಲ್ಲಿ ಕಾಡಾನೆ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ

ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ…

59 mins ago

ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು

ಚಿಕ್ಕಬಳ್ಳಾಪುರ: ಇಸ್ರೇಲ್‌ ಹಾಗೂ ಅಮೇರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು,…

1 hour ago

ಇರಾನ್‌ ಕ್ಷಿಪಣಿ ಭೀತಿ: ದುಬೈನಲ್ಲಿ ಹೈಅಲರ್ಟ್‌ ಘೋಷಣೆ

ದುಬೈ: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಉದ್ವಿಗ್ನತೆಯು ತಾರಕ್ಕೇರಿರುವುದರಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಈ…

1 hour ago