ಹೈದರಾಬಾದ್: ಹರ್ಯಾಣ ಸ್ಟೀಲರ್ಸ್ ವಿರುದ್ಧ ರೋಚಕ ಜಯ ದಾಖಲಿಸುವ ಮೂಲಕ ಪ್ರೋ ಕಬಡ್ಡಿ ಲೀಗ್ ಸೀಸನ್ 10 ಚಾಂಪಿಯನ್ ಆಗಿ ಪುಣೇರಿ ಪಲ್ಟಾನ್ ಹೊರ ಹೊಮ್ಮಿದೆ.
ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುಣೇರಿ ಪಲ್ಟಾನ್ ಮತ್ತು ಹರ್ಯಾಣ ಸ್ಟೀಲರ್ಸ್ ನಡುವಿನ ಫೈನಲ್ ಪಂದ್ಯದಲ್ಲಿ, ಸ್ಟೀಲರ್ಸ್ ತಂಡವನ್ನು 28-23 ಅಂತರದಿಂದ ಸೋಲಿಸಿದ ಅಸ್ಲಾಮ್ ಇನಾಮ್ದಾರ್ ನಾಯಕತ್ವದ ಪಲ್ಟಾನ್ ತಂಡ ತನ್ನ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪಲ್ಟಾನ್ ತಂಡ ಒಂದು ಬಾರಿ ಹರ್ಯಾಣವನ್ನು ಆಲ್‌ಔಟ್ ಮಾಡುವ ಮೂಲಕ ಮೇಲೆ ಬರದಂತೆ ನೋಡಿಕೊಂಡಿತು. ಪಲ್ಟಾನ್‌ನ ಪಂಕಜ್ ಮೋಹಿತೆ 9 ರೈಡ್ ಪಾಯಿಂಟ್ಸ್, ಗೋಯತ್ 5 ರೈಡ್ ಪಾಯಿಂಟ್ಸ್ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಈ ಟೂರ್ನಿಯಲ್ಲೇ ಅತಿಹೆಚ್ಚು ಟ್ಯಾಕಲ್ ಪಾಯಿಂಟ್ ಗಳಿಸಿ ಮಹಮದ್ರೇಜಾ ಶಾಡ್ಲೋಯಿ 2 ಟ್ಯಾಕಲ್ ಪಾಯಿಂಟ್ ಗಳಿಸಿ ಗಮನ ಸೆಳೆದರು.
ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಪುಣೇರಿ ಪಲ್ಟಾನ್ ತಂಡಕ್ಕೆ ಮೂರು ಕೋಟಿ ಬಹುಮಾನ ಮೊತ್ತ ದಕ್ಕಿತು. ರನ್ನರ್ಸ್ ಅಪ್ ಆದ ಹರ್ಯಾಣ ಸ್ಟೀಲರ್ಸ್‌ಗೆ 1.8 ಕೋಟಿ ಹಣ ದೊರೆಯಿತು.
ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರಶಸ್ತಿ ಗಳಿಸಿ ಆಟಗಾರರಿವರು:
ಟೂರ್ನಿಯ ಅತ್ಯುತ್ತಮ ರೈಡರ್: ಅಶು ಮಲ್ಲಿಕ್
ಟೂರ್ನಿಯ ಅತ್ಯುತ್ತಮ ಡಫೆಂಡರ್: ಮೊಹಮ್ಮದ್ರೇಜಾ ಚಿಯಾನೆಹ್
ಟೂರ್ನಿಯ ಹೊಸ ಯುವ ಆಟಗಾರ: ಯೋಗೇಶ್
ಟೂರ್ನಿಯ ಮೌಲ್ಯಯುತ ಆಟಗಾರ: ಅಸ್ಲಾಂ ಇನಾಮ್ದಾರ್
ರಾಜ್ಯದಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಂತಹ ದೂರದ ರಾಜ್ಯಗಳ ದಾಖಲೆಗಳನ್ನು ಬಳಸಿ ಬಸ್‌ಗಳ ನಕಲಿ ರಹ ದಾರಿ(ಪರ್ಮಿಟ್) ಪಡೆದು ಸರ್ಕಾರಕ್ಕೆ…
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳಲ್ಲಿ ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನವನ್ನು ಬ್ಯಾಂಕ್ ಸಿಬ್ಬಂದಿಯೇ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಮಾಧ್ಯಮಗಳಲ್ಲಿ…
ಮೈಸೂರಿನ ಕುವೆಂಪುನಗರ ವಿಶ್ವ ಮಾನವ ಜೋಡಿ ರಸ್ತೆಯ ಸಿ ಆಂಡ್ ಡಿ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸಿಬ್ಬಂದಿ…
ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳು ಈಗಲೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಿದಿಸುತ್ತಿದ್ದು, ೨೦೨೪-೨೫ನೇ…
ಭೇರ್ಯ ಮಹೇಶ್ ಆದಿಶಕ್ತಿ ತೋಪಮ್ಮ ಟ್ರಸ್ಟ್ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಭೇಟಿ ನಿರೀಕ್ಷೆ ಕೆ.ಆರ್.ನಗರ: ಫೆಬ್ರವರಿ…
ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷ ಹಿರೇಹಳ್ಳಿ ಶಂಭುಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ…