ಹರಿಯಾಣ: ಭಾರತದ ಪ್ರಸಿದ್ಧ ಕುಸ್ತಿಪಟು ವಿನೇಶ್ ಪೊಗಟು ಶನಿವಾರ ರಾತ್ರಿ ತಮ್ಮ ತವರೂರು ಹರ್ಯಾಣದ ಬಲಾಲಿ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅತ್ಯಂತ ಅದ್ದೂರಿಯಾಗಿ ಮೆರೆವಣಿಗೆ ಮೂಲಕ ಅವರನ್ನು ಸ್ವಾಗತಿಸಿದರು.
ಒಲಿಂಪಿಕ್ಸ್‌ನಿಂದ ನಿರಾಸೆಯಿಂದ ಹೊರಬಂದ ಫೋಗಟ್ ಅವರಿಗೆ ತಮ್ಮ ಗ್ರಾಮಸ್ಥರ ಬೆಂಬಲ ಮತ್ತು ಪ್ರೀತಿ ಅವರಿಗೆ ದೊಡ್ಡ ಬಹುಮಾನ ಸಿಕ್ಕಂತಾಗಿದೆ. ಇನ್ನು ಸ್ವಾಗತ ಸಮಾರಂಭದಲ್ಲಿ, 750 ಕೆ.ಜಿ. ಲಡ್ಡು ಹಂಚಿದ್ದು ಸ್ಥಳೀಯರು ವಿನೇಶ್ ಫೋಗಟ್‌ಗೆ 100, 500 ಮತ್ತು 2000 ರೂಪಾಯಿಯ ನಗದು ಬಹುಮಾನ ನೀಡಿದರು. ನಂತರ ನೋಟಿನ ಮಾಲೆ ಹಾಕಿ ಸನ್ಮಾನಿಸಲಾಯಿತು.
ಈ ವೇಳೆ ಭಾವುಕರಾಗಿ ಮಾತನಾಡಿದ ವಿನೇಶ್ ಫೋಗಟ್, ನಾನು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಘಟ್ಟ ತಲುಪಿಲ್ಲ. ಆದರೆ ನನ್ನ ಗ್ರಾಮಸ್ಥರು ನನಗೆ ನೀಡಿರುವ ಪ್ರೀತಿ ಮತ್ತು ಗೌರವ 1000 ಚಿನ್ನದ ಪದಕಕ್ಕಿಂತಲೂ ಮಿಗಿಲು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು ನಮ್ಮ ಹೋರಾಟ ಮುಗಿದಿಲ್ಲ. ಅದು ಮುಂದುವರಿಯಲಿದೆ. ಸತ್ಯ ಜಯಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.
ಈ ರೀತಿಯ ಆತ್ಮೀಯ ಸ್ವಾಗತ ಮತ್ತು ಬೆಂಬಲದಿಂದ, ತಮ್ಮ ಸಾಧನೆಗೆ ಇನ್ನಷ್ಟು ಪ್ರೇರಣೆ ಪಡೆಯುತ್ತಿದ್ದೇನೆ ಎಂದರು.
ಈ ವೇಳೆ ಒಲಿಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತಿತತರರು ಹಾಜರಿದ್ದರು.
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…