ಮೈಸೂರು : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಐಸಿಸಿ ವರ್ಲ್ಡ್ ಕಪ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದ್ದು, ಈ ಸಂಬಂಧ ಪಿಚ್ ರಿಪೋರ್ಟ್, ಹವಮಾನ ವರದಿ, ಪಂದ್ಯದ ಲೈವ್ ಇನ್ನಿತರ ಮಾಹಿತಿಗಳು ಇಲ್ಲಿವೆ ನೋಡಿ.
ಹವಾಮಾನ ವರದಿ :
ಈ ಹಿನ್ನಲೆಯಲ್ಲಿ ಫೈನಲ್ ನಡೆಯಲಿರುವ ಅಹಮದಾಬಾದ್‌ನ ಹವಾಮಾನ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಅಕ್ಯುವೆದರ್ ವರದಿ ಪ್ರಕಾರ ನವೆಂಬರ್ 19 ರಂದು ಅಹಮದಾಬಾದ್ ಹವಾಮಾನ ಕ್ಲೀಯರ್ ಆಗಿರಲಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಇರುತ್ತದೆ. ಕನಿಷ್ಠ ತಾಪಮಾನವು ಸುಮಾರು 19 ಡಿಗ್ರಿಗಳಷ್ಟು ಇರಬಹುದು. ಸಂಜೆ ಹಿಮ ಬೀಳುವ ಸಾಧ್ಯತೆಯಿದೆ.
ಪಿಚ್ ಹೇಗಿದೆ :
ಸ್ಪಿನ್ ಪಿಚ್ ಇದಾಗಿದ್ದು, ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ.
ಸ್ಪಿನ್ ಜೊತೆಗೆ ಬೌನ್ಸ್‌ರ್ ಗೆ ಹೆಚ್ಚಿನ ಅನುವು ಪಂದ್ಯದಲ್ಲಿ ತಿರುವು ನೀಡಬಹುದಾಗಿದೆ.
ಈ ವಿಶ್ವಕಪ್ನಲ್ಲಿ ಈವರೆಗೆ ನಾಲ್ಕು ಪಂದ್ಯಗಳು ನಡೆದಿವೆ. 2-2 ಚೇಸಿಂಗ್ ಮತ್ತು ಬ್ಯಾಟಿಂಗ್ ತಂಡ ಗೆದ್ದಿವೆ
ಸ್ಟೇಡಿಯಂ ನ ಸರಾಸರಿ ಗೆಲುವಿನ ಮೊತ್ತ 260
ಈ ಸ್ಥಳದಲ್ಲಿ ಆಡುವ ಐಪಿಎಲ್ ಪಂದ್ಯಗಳಲ್ಲಿ ಇದು ಸಾಮಾನ್ಯವಾಗಿ ಚೇಸಿಂಗ್ ಮೈದಾನವಾಗಿತ್ತು. ಅಲ್ಲದೆ, ಈ ವಿಶ್ವಕಪ್ನಲ್ಲಿ ಚೇಸಿಂಗ್ ಸಮಯದಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ. ಇಲ್ಲಿ ಮೊದಲ ಇನ್ನಿಂಗ್ಸ್ ನ ಸರಾಸರಿ ಸ್ಕೋರ್ 260 ಆಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಸೂರ್ಯಕಿರಣ್ ಏರ್‌ಜೆಟ್ ಮೂಲಕ ಏರ ಶೋ ನಡೆಲಿದೆ.( ಇದೇ ತಂಡ ಮೈಸೂರ ದಸರಾ 2023ರಲ್ಲಿ ಏರ್‌ಶೋ ಪ್ರದರ್ಶ ನೀಡಿತ್ತು.).
ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿಯಾದ ಆಂಥೋನಿ ಅಲ್ಬನೀಸ್ ಪ್ರಮುಖ ಆಕರ್ಷಣೀಯವಾಗಲಿದ್ದಾರೆ.
ವರ್ಲ್ಡ್ ಕಪ್ ವಿಜೇತ ನಾಯಕರನ್ನು ಸಹಾ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಭಾರತ ತಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ(ಐಸಿಸಿಯ ಎಲ್ಲಾ ಮಾದರಿಯ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ) ಕೇಂದ್ರ ಬಿಂದುವಾಗಿರಲಿದ್ದಾರೆ.
ಟೀಂ ಇಂಡಿಯಾ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ
ಆಸ್ಟ್ರೇಲಿಯಾ ತಂಡ
ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಸ್ವೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಸ್ ಇಂಗ್ಲಿಸ್, ಸೀನ್ ಅಬಾಟ್, ಮಾರ್ನಸ್ ಲಬುಶೇನ್, ಪ್ಯಾಟ್ ಕಮಿನ್ಸ್ (ನಾಯಕ), ಕ್ಯಾಮರೂನ್ ಗ್ರೀನ್, ಜೋಸ್ ಹೇಜಲ್‌ವುಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸವೆಲ್, ಮಾರ್ಕಸ್ ಸ್ಟೋಯ್ನಿಸ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.
ಟೂರ್ನಿಯಲ್ಲಿ ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ(711)
ಅತಿಹೆಚ್ಚು ವಿಕೆಟ್: ಮಹಮದ್ ಶಮಿ (23)
ವಯಕ್ತಿಕ ಗರಿಷ್ಠ ರನ್: ಗ್ಲೆನ್ ಮ್ಯಾಕ್ಸ್‌ವೆಲ್ (201)
ವಯಕ್ತಿಕ ಗರಿಷ್ಠ ವಿಕೆಟ್: ಮಹಮದ್ ಶಮಿ (7/57)
ಅಂಪೈರ್‌ಗಳು:
2023 ರ ವಿಶ್ವಕಪ್ ಫೈನಲ್ ಆನ್ ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್
ಮೂರನೇ ಅಂಪೈರ್: ಜೋಯಲ್ ವಿಲ್ಸನ್
ನಾಲ್ಕನೇ ಅಂಪೈರ್: ಕ್ರಿಸ್ಟೋಫರ್ ಗಫಾನಿ ಮ್ಯಾಚ್ ರೆಫರಿ: ಆಂಡಿ ಪೈಕ್ರಾಫ್ಟ್
ಲೈವ್:
ಓಟಿಟಿ : ಡಿಜ್ನಿ+ ಹಾಟ್‌ಸ್ಟಾರ್
ಟಿವಿ ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್‌ನ ಎಲ್ಲಾ ಚಾನೆಲ್‌ಗಳು
ಮೈಸೂರು: ಭಾರತದಲ್ಲಿ 2ನೇ ಬಾರಿ ಪ್ರಧಾನಿಗಳಾಗಿ ಸೇವೆ ಸಲ್ಲಿಸಿದ್ದ ಸರಳ ಸಜ್ಜನಿಕೆ ವ್ಯಕ್ವಿತ್ವದ ಹಿರಿಯ ನಾಯಕ ಹಾಗೂ ಶ್ರೇಷ್ಠ ಆರ್ಥಿಕ…
ಮೈಸೂರು: ನಗರದ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗವೆಂದು ಮರುನಾಮಕರಣ ಮಾಡಿದರೆ ಇತಿಹಾಸದ ಪ್ರಮುಖ ಅಧ್ಯಾಯವನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು…
ಚನ್ನೈ: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬೀದಿಗಿಳಿದು ವಿಭಿನ್ನವಾಗಿ ಪ್ರತಿಭಟನೆ ಮಾಡುವ…
ಮೈಸೂರು: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದು, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸಂತಾಪ…
ನವದೆಹಲಿ: ದೇಶದ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು, ಇವರ ಪಾರ್ಥಿವ…
‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದ ‘ಶಿವ ಶಿವ …’ ಎಂಬ ಮೊದಲ ಹಾಡನ್ನು ಡಿ.…