ಬೆಂಗಳೂರು : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಮೊಣಕಾಲಿನ ಮೂಳೆ ಮುರಿದ ಗಾಯದ ಸಮಸ್ಯೆ ಎದುರಿಸಿದರು. ಇದೀಗ ಇದೇ ಕಾರಣಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದಲೂ ನ್ಯೂಜಿಲೆಂಡ್ ತಂಡದ ನಾಯಕ ಹೊರಗುಳಿಯುವ ಸಾಧ್ಯತೆಯಿದೆ.
ಗುಜರಾತ್ ಟೈಟಾನ್ಸ್‌ನ ಆರಂಭಿಕ ಪಂದ್ಯದ ನಂತರ ಐಪಿಎಲ್‌ನಿಂದ ಹೊರಗುಳಿದಿರುವ ವಿಲಿಯಮ್ಸನ್ ಗಾಯಗೊಂಡಿರುವ ಬಲ ಮೊಣಕಾಲಿನ ಸಮಸ್ಯೆ ನಿವಾರಣೆಗೆ ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ಶಸ್ತ್ರಚಿಕಿತ್ಸೆಗೆ ಒಳಪಟ್ಟ ಬಳಿಕ ಕೇನ್ ವಿಲಿಯಮ್ಸನ್ ನಿಗದಿತ ಪುನಶ್ಚೇತನ ಶಿಬಿರಕ್ಕೆ ಒಳಪಡಬೇಕಾಗುತ್ತದೆ. ಇದರರ್ಥ ಅವರು ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ,” ಎಂದು ಕ್ರಿಕೆಟ್ ನ್ಯೂಜಿಲೆಂಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ 31 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಫೀಲ್ಡಿಂಗ್ ಮಾಡುವಾಗ ವಿಲಿಯಮ್ಸನ್ ಅವರ ಮುಂಭಾಗದ ಕ್ರೂಸಿಯೇಟ್ ಲಿಗಮೆಂಟ್ (ಮಂಡಿ ಮೂಳೆ) ಛಿದ್ರವಾಯಿತು. ಹೀಗಾಗಿ ಮುಂದಿನ ಮೂರು ವಾರಗಳಲ್ಲಿ ಅವರು ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಫೈನಲ್‌ಗೆ ಮುನ್ನಡೆಸಿ ರನ್ನರ್ಸ್‌ಅಪ್ ಸ್ಥಾನ ತಂದುಕೊಟ್ಟಿದ್ದ ಕ್ಯಾಪ್ಟನ್ ವಿಲಿಯಮ್ಸನ್, ಇದೀಗ ಶಸ್ತ್ರಚಿಕಿತ್ಸೆಯತ್ತ ಗಮನ ಹರಿಸುವುದಾಗಿ ಮತ್ತು ಸಾಧ್ಯವಾದಷ್ಟು ಬೇಗ ಪುನರ್ವಸತಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾನು ಉತ್ತಮ ಬೆಂಬಲವನ್ನು ಪಡೆದಿದ್ದೇನೆ ಮತ್ತು ಅದಕ್ಕಾಗಿ ಗುಜರಾತ್ ಟೈಟನ್ಸ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಎರಡಕ್ಕೂ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ವಿಲಿಯಮ್ಸನ್ ಹೇಳಿದರು.
ಈ ರೀತಿಯ ಗಾಯದ ಸಮಸ್ಯೆಗಳು ಸಾಮಾನ್ಯವಾಗಿ ಎದುರಾದಾಗ ಬಹಳಾ ನಿರಾಶೆ ತಂದೊಡ್ಡುತ್ತದೆ. ಆದರೆ ನನ್ನ ಗಮನವು ಈಗ ಶಸ್ತ್ರಚಿಕಿತ್ಸೆ ಮತ್ತು ಸಾಧ್ಯವಾದಷ್ಟು ಬೇಗ ಪುನರ್ವಸತಿ ಪ್ರಾರಂಭಿಸುವುದರ ಮೇಲೆ ಕೇಂದ್ರೀಕೃತವಾಗಿದೆ, ಖಂಡಿತಾ ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾನು ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳಲು ಎಲ್ಲ ಪ್ರಯ್ನ ಮಾಡುತ್ತೇನೆ,” ಎಂದಿದ್ದಾರೆ.
ಕಿವೀಸ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಮತ್ತು ತಂಡದ ಸಹಾಯದಿಂದ ಸಾಧ್ಯವಾದಷ್ಟು ಬೇಗ ಫಿಟ್ ಆಗಲು ಏನು ಬೇಕಾದರೂ ಮಾಡುತ್ತೇನೆ ಎಂದು ವಿಲಿಯಮ್ಸನ್ ಒತ್ತಿ ಹೇಳಿದ್ದಾರೆ. “ಮುಂದಿನ ಕೆಲವು ತಿಂಗಳುಗಳಲ್ಲಿ ಗ್ಯಾರಿ ಮತ್ತು ತಂಡವನ್ನು ಬೆಂಬಲಿಸಲು ನಾನು ಏನು ಮಾಡಬಹುದೋ ಅದನ್ನು ಮಾಡಲು ಎದುರು ನೋಡುತ್ತಿದ್ದೇನೆ,” ಎಂದು ವಿಲಿಯಮ್ಸನ್ ಆತ್ಮವಿಶ್ವಾಸ ಹೊರಹಾಕಿದ್ದಾರೆ.
ಐಪಿಎಲ್ 2023 ರ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಗಾಯಾಳು ವಿಲಿಯಮ್ಸನ್ ಬದಲಿಗೆ ಶ್ರೀಲಂಕಾದ ವೈಟ್-ಬಾಲ್ ನಾಯಕ ದಸುನ್ ಶನಕ ಅವರನ್ನು ಬದಲಿ ಆಟಗಾರನನ್ನಾಗಿ ಎಗೆದುಕೊಂಡಿದೆ. ಮೂಲ ಬೆಲೆ 50 ಲಕ್ಷ ರೂ.ಗಳಿಗೆ ಶನಕ ಜೊತೆಗೆ ಟೈಟನ್ಸ್ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ದಸುನ್ ಶನಕ ಕಾಣಿಸಿಕೊಳ್ಳಲಿದ್ದಾರೆ.
ಚನ್ನೈ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದ ಅವಧಿಯಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದರು ಎಂದು…
ಹೈದರಾಬಾದ್: ಪುಷ್ಪ-2 ಪ್ರೀಮಿಯರ್ ಶೋ ವೇಳೆ ಥಿಯೇಟರ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ದುರಾಡಳಿತ ಯಂತ್ರಕ್ಕೆ ಲಂಚವೇ ಇಂಧನ ಎಂದು ಜೆಡಿಎಸ್ ಪಕ್ಷ ಕಿಡಿಕಾರಿದೆ. ಈ…
ನವದೆಹಲಿ: ದಾಖಲೆ ಕೊಡಿ ದಾಖಲೆ ಕೊಡಿ ಎಂದು ಹೇಳುತ್ತೀರಾ! ಇಲ್ನೋಡಿ ನಿಮ್ಮ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಎಂದು ಹೇಳುವ ಮೂಲಕ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಮಿಷನ್ ದಂಧೆಗಾಗಿ ಕರ್ನಾಟಕವನ್ನು ಕತ್ತಲೆಗೆ ದೂಡಿದೆ. ಕಾಂಗ್ರೆಸ್ ನಾಯಕರೇ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದು, ರಾಜ್ಯದ ಅಭಿವೃದ್ಧಿ…
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಭಾರತೀಯ ಚುನಾವಣಾ ಆಯೋಗದಿಂದ ದಿನಾಂಕ ನಿಗಧಿಪಡಿಸಿದ್ದು, ಫೆಬ್ರವರಿ 5 ರಂದು ಮತದಾನ ನಡೆಯಲಿದೆ…