ಕ್ರೀಡೆ

ಎಂ.ಎಸ್‌.ಧೋನಿ ಜಾರ್ಖಾಂಡ್‌ ರಾಜ್ಯಕ್ಕೆ ಅತೀ ಹೆಚ್ಚು ತೆರಿಗೆ ಪಾವತಿದಾರರ

 ಜಾರ್ಖಂಡ್: ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ವಿಶ್ವ ಕ್ರಿಕೆಟ್ ಕಂಡ ಚಾಣಾಕ್ಷ ವಿಕೆಟ್ ಕೀಪರ್, ಶ್ರೇಷ್ಠ ನಾಯಕ, ಬೆಸ್ಟ್ ಫಿನಿಷರ್, ಭಾರತೀಯ ಕ್ರಿಕೆಟ್‌ಗೆ ಸಿಕ್ಕ ಅಪರೂಪದ ಅಟಗಾರ, ಅವರ ಕೊಡುಗೆ ಕ್ರಿಕೆಟ್‌ಗಷ್ಟೇ ಸೀಮಿತವಲ್ಲ, ಭಾರತಕ್ಕೆ ನೀಡಿದ ಕಾಣಿಕೆಯೂ ಅಪಾರ. ಪ್ರತಿ ಹೆಜ್ಜೆಗೂ ದಾಖಲೆ ಬರೆದ್ದಾರೆ. ವಿಶೇಷ ಅಂದರೆ ನಿವೃತ್ತಿ ಹೊಂದಿದ್ದರೂ ದಾಖಲೆಯ ಮಟ್ಟದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ.

ಅಂತಹ ಸೂಪರ್ ಸ್ಟಾರ್ ಆಟಗಾರ ಎಂಎಸ್ ಧೋನಿ ಮತ್ತೊಮ್ಮೆ ಜಾರ್ಖಂಡ್ ರಾಜ್ಯದಲ್ಲಿ (Jharkhand State) ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ (Most Taxpayer) ಹೊರ ಹೊಮ್ಮಿದ್ದಾರೆ.

ಈ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಮಹೇಂದ್ರ ಸಿಂಗ್ ಧೋನಿ, 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಎಂಬುದು ಆದಾಯ ತೆರಿಗೆ ಇಲಾಖೆಯ ಮಾಹಿತಿ, ಕೂಲ್ ಕ್ಯಾಪ್ಟನ್ ವಾರ್ಷಿಕ ವರಮಾನ 130 ಕೋಟಿ ರೂಪಾಯಿಗೂ ಹೆಚ್ಚು ಎಂದು ತಿಳಿದು ಬಂದಿದೆ.

ಆಗಸ್ಟ್ 15, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿ (MS Dhoni Retire) ಘೋಷಿಸಿದ್ದಾರೆ. ಕ್ರಿಕೆಟ್‌ ರಿಟೈರ್‌ಮೆಂಟ್‌ ಘೋಷಿಸಿದರೂ ಧೋನಿ ಅವರ ಆದಾಯದ ಮೇಲೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ. ಧೋನಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಶುರು ಮಾಡಿದಾಗಿನಿಂದ ನಿರಂತರವಾಗಿ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವರಿದಾರನಾಗಿ ಹೊರ ಹೊಮ್ಮಿದ್ದಾರೆ.

ಜಾರ್ಖಂಡ್ ರಾಜ್ಯದಲ್ಲಿ MS ಧೋನಿ ಕಳೆದ ವರ್ಷ ಸಹ ಹೆಚ್ಚು ಟ್ಯಾಕ್ಸ್ ಕಟ್ಟಿದ ವ್ಯಕ್ತಿ ಎನಿಸಿದ್ದರು. 2020-21ರ ಸಾಲಿನಲ್ಲಿ ಧೋನಿ 30 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕವೂ ಆದಾಯದಲ್ಲಿ ಏರಿಕೆ ಕಂಡಿರುವುದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲದೆ, ಪಾವತಿಸುವ ಕಟ್ಟು ತೆರಿಗೆ ಮೊತ್ತವೂ ದುಪ್ಪಟ್ಟಾಗಿದೆ. ಈ ಬಾರಿ ಧೋನಿ ತಮ್ಮ ಐಪಿಎಲ್ ವೇತನಕ್ಕಿಂತ 3 ಪಟ್ಟು ಹೆಚ್ಚಿನ ಟ್ಯಾಕ್ಸ್ ಕಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು 12 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ, ಆದರೆ ಜಾಹೀರಾತಿನಲ್ಲಿ ಆದಾಯ ಹೆಚ್ಚಾಗುತ್ತಿದೆ. ಧೋನಿ ಅವರಿಂದ ಜಾಹೀರಾತು ಮಾಡಿಸಿಕೊಳ್ಳಲು ವಿವಿಧ ಬ್ರಾಂಡ್‌ಗಳು, ಕಂಪನಿಗಳು ದುಂಬಾಲು ಬೀಳುತ್ತವೆ. ಈ ಕಾರಣಕ್ಕೆ ಧೋನಿ ಅವರ ವರಮಾನ ವರ್ಷದಿಂದ ವರ್ಷಕ್ಕೆ ಡಬಲ್ ಆಗುತ್ತಿದೆ.

ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಧೋನಿ ಹೆಸರು 2ನೇ ಸ್ಥಾನದಲ್ಲಿದೆ. ಮಾಸ್ಟರ್ ಬ್ಲಾಸ್ಟರ್, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 1,394 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರೆ, ಧೋನಿ ಆಸ್ತಿ ಮೌಲ್ಯ 943 ಕೋಟಿ ರೂಪಾಯಿ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, 918 ಕೋಟಿ ಆಸ್ತಿ ಹೊಂದಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2ರಲ್ಲಿ ಸೋಲು ಕಂಡಿದೆ. ಇಂದು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಎದುರು ಸೆಣಸಾಟ ನಡೆಸಲಿದೆ. ಧೋನಿಗೆ ಇದೇ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಧೋನಿ, ಐಪಿಎಲ್ ನಿಂದಲೂ ಶೀಘ್ರದಲ್ಲೇ ದೂರವಾಗುವ ಸಾಧ್ಯತೆ ಇದೆ.

andolanait

Recent Posts

ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ

ಬೆಂಗಳೂರು: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ ಘೋಷಿಸಲಾಗಿದ್ದು, ಕರ್ನಾಟಕದ ಕ್ರೀಡಾಪಟುಗಳು ಚಿನ್ನದ ಪದಕ…

4 mins ago

ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ದುಷ್ಕರ್ಮಿಗಳು

ಮಂಡ್ಯ: ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಅಮಾನವೀಯ ಕೃತ್ಯ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು…

23 mins ago

ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್:‌ ನಾಳೆಯಿಂದಲೇ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಹಣ

ಬೆಂಗಳೂರು: ರಾಜ್ಯದ ಪ್ರತಿ ಯಜಮಾನಿಯರಿಗೆ ಹೊಸ ವರ್ಷಕ್ಕೂ ಮುನ್ನವೇ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಸೋಮವಾರದಿಂದಲೇ ಪ್ರತಿ ಮನೆ ಗೃಹಲಕ್ಷ್ಮೀಯರ…

47 mins ago

ಹುಲಿ ಸೆರೆಗೆ ಚಾಮರಾಜನಗರದಲ್ಲಿ ಆಪರೇಷನ್‌ ಬೀಸ್ಟ್‌ ಆರಂಭ: ಡ್ರೋನ್‌ ಮೂಲಕ ಕಾರ್ಯಾಚರಣೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…

1 hour ago

ಅಕ್ರಮವಾಗಿ ಕೇರಳಕ್ಕೆ ಜಾನುವಾರು ಸಾಗಾಟ: ಇಬ್ಬರ ಬಂಧನ

ಮಡಿಕೇರಿ: ಗೋವುಗಳನ್ನು ಸಾಕಣೆ ಮಾಡಲೆಂದು ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ…

1 hour ago

ವಿಶೇಷ ಚೇತನರಿಗೆ ಗುಡ್‌ನ್ಯೂಸ್‌: ಶಿಕ್ಷಣ ಉದ್ಯೋಗಕ್ಕೆ ಹೊಸ ನೀತಿ

ಬೆಂಗಳೂರು: ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನರಿದ್ದು, ಅವರಿಗೆ ಶಿಕ್ಷಣ ಉದ್ಯೋಗವಕಾಶ ಕಲ್ಪಿಸಲು ನಮ್ಮ ಸರ್ಕಾರ ಹೊಸ…

1 hour ago