ಕ್ರೀಡೆ

ಪ್ರತಿಷ್ಠಿತ ಲಾರೆಸ್‌ ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದ ಮೆಸ್ಸಿ

ಪ್ಯಾರಿಸ್‌: ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಯೊನೆಲ್‌ ಮೆಸ್ಸಿ, ಪ್ರತಿಷ್ಠಿತ ಲಾರೆಸ್‌ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫುಟ್‌ಬಾಲ್‌ ವಿಶ್ವಕಪ್‌ ವಿಜೇತ ನಾಯಕ ಮೆಸ್ಸಿ, ಅರ್ಜೆಂಟೀನಾದ ಪರವಾಗಿ ಲಾರೆಸ್‌ ವರ್ಷದ ವಿಶ್ವ ತಂಡ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಮೂಲಕ ಒಂದೇ ಸಾಲಿನಲ್ಲಿ ಲಾರೆಸ್‌ ವರ್ಷದ ಕ್ರೀಡಾಪಟು ಹಾಗೂ ವರ್ಷದ ತಂಡ ಪ್ರಶಸ್ತಿ ಗದ್ದ ಮೊಟ್ಟ ಮೊದಲ ಕ್ರೀಡಾಪಟು ಎನಿಸಿದ್ದಾರೆ.

https://twitter.com/LaureusSport/status/1655692463061839875?s=20

ಇದರೊಂದಿಗೆ ಮೆಸ್ಸಿ, ಎರಡನೇ ಬಾರಿಗೆ ಲಾರೆಸ್‌ ವರ್ಷದ ಕ್ರೀಡಾಪಟು ಗೆದ್ದ ಸಾಧನೆ ಮಾಡಿದ್ದಾರೆ. ಈ ಹಿಂದೆ 2020 ರಲ್ಲಿ ದಿಗ್ಗಜ ಫಾರ್ಮುಲಾ ಒನ್‌ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌ ಜೊತೆ ಪ್ರತಿಷ್ಠಿತ ಪ್ರಶಸ್ತಿ ಹಂಚಿಕೊಂಡಿದ್ದರು.

ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ 35 ವರ್ಷದ ಮೆಸ್ಸಿ, ಫೆಡರರ್‌, ನಡಾಲ್‌, ಶುಮಾಕರ್‌, ಜೊಕೊವಿಕ್‌, ಬೋಲ್ಟ್‌ ಸೇರಿದಂತೆ ದಿಗ್‌ಜರ ಸಾಲಿನಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

andolanait

Recent Posts

ಸ್ಯಾಂಡಲ್‌ವುಡ್‌ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್‌ ಅವರಿಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದ…

8 mins ago

ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ಬಿಗ್‌ ಶಾಕ್ ನೀಡಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಕೇಂದ್ರ ಗೃಹ ಸಚಿವಾಲಯ ಬಿಗ್‌ ಶಾಕ್‌…

25 mins ago

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಪ್ರಕರಣ: ಅಪರಿಚಿತ ಕಂಟೇನರ್‌ ಟ್ರಕ್‌ ವಿರುದ್ಧ ಹಿಟ್‌ ಅಂಡ್‌ ರನ್‌ ಕೇಸ್‌ ದಾಖಲು

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಕಂಟೇನರ್‌ ಟ್ರಕ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಘಾತ…

51 mins ago

‘ಎಕ್ಕ’ಗೆ ‘ಸಲಗ’ ನಾಯಕಿ: ಯುವ ರಾಜಕುಮಾರ್‌ಗೆ ಸಂಜನಾ ಆನಂದ್ ಜೋಡಿ

ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’, ಜೂನ್‍ 06ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮುಹೂರ್ತದ ದಿನವೇ ಘೋಷಿಸಿದೆ.…

1 hour ago

‘45’ಕ್ಕೆ ಇನ್ನೂ ಏಳು ತಿಂಗಳು ಕಾಯಬೇಕು: ಆಗಸ್ಟ್ 15ಕ್ಕೆ ಬಿಡುಗಡೆ

ಶಿವರಾಜಕುಮಾರ್‍, ಉಪೇಂದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’, ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು.…

1 hour ago

‘ಸಂಜು ವೆಡ್ಸ್ ಗೀತಾ 2’ಗಿದ್ದ ತಡೆಯಾಜ್ಞೆಗೆ ತೆರವು: ಜನವರಿ.17ಕ್ಕೆ ಚಿತ್ರ ಬಿಡುಗಡೆ

ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ.10ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ತೆಲುಗು ನಿರ್ಮಾಪಕರೊಬ್ಬರು ನಾಗಶೇಖರ್ ಮೇಲೆ ಕೇಸ್‍…

2 hours ago