ಬೆಂಗಳೂರು : ನಾಯಕ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕದ ಬಲದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ 10 ರನ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಮಹಾರಾಜ ಟೂರ್ನಿಯ 2023ನೇ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ನಾಯಕ ಹಾಗೂ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (57 ಎಸೆತ 105 ರನ್) ಗಳಿಸಿ ಔಟಾಗಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಒಳಗೊಂಡಿತ್ತು. 19ನೇ ಓವರ್‌ನಲ್ಲಿ ಮಯಾಂಕ್ ಗೌತಮ್ ಮಿಶ್ರಾಗೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಬೆಂಗಳೂರು ಬ್ಲಾಸ್ಟರ್ಸ್ 200ರೆ ಗಡಿ ದಾಟಲು ಕಾರಣವಾದ ಮತ್ತೋರ್ವ ಆಟಗಾರನೆಂದರೆ ಸೂರಜ್ ಅಹುಜಾ. ಕೇವಲ 10 ಎಸೆತಗಳಲ್ಲಿ 35 ರನ್‌ಗಳನ್ನು ಬಾರಿಸಿ ಮಿಂಚಿದರು. ಹೀಗಾಗಿ ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‌ಗಳನ್ನು ಗಳಿಸಿತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಅದ್ಭುತ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 60 ರನ್‌ಗಳಿಸುವ ಮೂಲಕ ದಿಟ್ಟವಾಗಿ ರನ್ ಬೆನ್ನಟ್ಟುವ ಮುನ್ಸುಆಚನೆ ನೀಡಿತು. ಆರಂಭಿಕ ಆಟಗಾರ ಎಸ್‌ಯು ಕಾರ್ತಿಕ್ 70 (30) ತಂಡಕ್ಕೆ ಚೇತರಿಕೆ ನೀಡಿದರು. ಅವರಿಗೆ ಜೊತೆಯಾಗಿ ಸಮರ್ಥ್ 35(16) ರನ್ ಹೊಳೆ ಹರಿಸಿದರು.
ಮೈಸೂರು ವಾರಿಯರ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಬೌಂಡರಿಗಳ ಮಳೆ ಸುರಿಯುತ್ತಿತ್ತು, ಏಕೆಂದರೆ ಆರಂಭಿಕರಾದ ಮತ್ತು ರವಿಕುಮಾರ್ ಸಮರ್ಥ್ (16 ಎಸೆತಗಳಲ್ಲಿ 35) ಸಮರ್ಥ್ ಔಟಾಗುವ ಮೊದಲು 29 ಎಸೆತಗಳಲ್ಲಿ 60 ರನ್‌ಗಳ ಜೊತೆಯಾಟ ನಡೆಸಿದರು. ಕಾರ್ತಿಕ್ 22 ಎಸೆತಗಳಲ್ಲಿ ಪಂದ್ಯಾವಳಿಯ ಅತ್ಯಂತ ವೇಗದ ಅರ್ಧಶತಕವನ್ನು ತಂದಾಗ ದಾಳಿಯು ಮುಂದುವರೆಯಿತು, ಆರು ಓವರ್‌ಗಳ ನಂತರ ತಂಡವನ್ನು 88-1 ಕ್ಕೆ ಕೊಂಡೊಯ್ಯಿತು, ಇದು ಈ ಆವೃತ್ತಿಯಲ್ಲಿ ಪವರ್‌ಪ್ಲೇಯ ಕೊನೆಯಲ್ಲಿ ಅತ್ಯಧಿಕ ಸ್ಕೋರ್ ಆಗಿತ್ತು.
ನಾಯಕ ಕರುಣ್ ನಾಯರ್ 32(34) ಮಂದಗತಿಯ ಆಟ ತಂಡಕ್ಕೆ ಚೇತರಿಕೆ ನೀಡಿತಾದರು ಗೆಲ್ಲುವಲ್ಲಿ ವಿಫಲವಾಯಿತು. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 202ರನ್ ಗಳಿಸಲಷ್ಟೇ ಶಕ್ತವಾಯಿತು. ಆಮೂಲಕ ಬೆಂಗಳೂರು ತನ್ನ ಮೊದಲ ಗೆಲುವನ್ನು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 212-4: ಮಯಾಂಕ್ ಅಗರ್ವಾಲ್ 105( 57) 105, ಸೂರಜ್ ಅಹುಜಾ 35*(10), ಡಿ ನಿಶ್ಚಲ್ 29(25), ಜಗದೀಶ ಸುಚಿತ್ 2-34, ಮೋನಿಶ್ ರೆಡ್ಡಿ 1-32, ಗೌತಮ್ ಮಿಶ್ರಾ 1-32
ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 202-8: ಎಸ್‌ಯು ಕಾರ್ತಿಕ್ 70(30), ರವಿಕುಮಾರ್ ಸಮರ್ಥ್ 35(16), ಕರುಣ್ ನಾಯರ್ 32(34), ಮೊಹ್ಸಿನ್ ಖಾನ್ 4-35, ಸರ್ಫರಾಜ್ ಅಶ್ರಫ್ 2-23, ಎಲ್ ಆರ್ ಕುಮಾರ್ 1-46
ಪಂದ್ಯಶ್ರೇಷ್ಠ : ಮಯಾಂಕ್ ಅಗರ್ವಾಲ್
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…